ಕಲಿಯುಗ ಹೀಗೆ ಇರುತ್ತದೆ ಎಂದು ತ್ರೇತಾಯುಗದಲ್ಲೇ ರಾಮ ಸೀತೆಯಲ್ಲಿ ಹೇಳಿದ್ದರಂತೆ..

ಮಹಾಭಾರತದಲ್ಲಿ ಏನಾಗಬಹುದು ಎಂದು ತ್ರೇತಾಯುಗದಲ್ಲೇ ವ್ಯಾಸರು ಬರೆದಿಟ್ಟಿದ್ದರು. ಅದೇ ರೀತಿ ಶ್ರೀಕೃಷ್ಣ, ಕಲಿಯುಗದಲ್ಲಿ ಏನೇನಾಗಬಹುದು ಎಂದು ಹೇಳಿದ ಸತ್ಯದ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಶ್ರೀರಾಮ ಸೀತೆಯ ಬಳಿ, ಕಲಿಯುಗದಲ್ಲಿ ಎಂಥ ಜನರಿರುತ್ತಾರೆ ಅನ್ನೋ ಬಗ್ಗೆ ಹೇಳಿದ್ದರಂತೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಮೊದಲನೇಯ ವಿಷಯ ಅಸ್ತ್ರ ತಯಾರಿಸುವುದು. ಕಲಿಯುಗದಲ್ಲಿ ಮನುಷ್ಯ ತನ್ನನ್ನು ತಾನೇ ಸರ್ವನಾಶ ಮಾಡುವ ಅಸ್ತ್ರಗಳನ್ನು ತಯಾರಿಸಿಕೊಳ್ಳುತ್ತಾನೆಂದು ಹೇಳಲಾಗಿತ್ತು. ಅದೇ ರೀತಿ, ನ್ಯೂಕ್ಲೀಯರ್ ಬಾಂಬ್, ಗನ್ ಎಲ್ಲವನ್ನೂ ತಯಾರಿಸಲಾಗಿದೆ. ಬೇರೆಯವರನ್ನು ಕೊಲ್ಲಲು ಈ ಅಸ್ತ್ರವನ್ನು ತಯಾರಿಸಲಾಯಿತು. ಆದರೆ ಇದನ್ನು ಬಳಸುವವರಿಗೇ ನಷ್ಟವಾಗುತ್ತದೆ.

ಕಲಿಯುಗದಲ್ಲಿ ಮನುಷ್ಯ ಅಶಾಸ್ತ್ರಗಳ ಪ್ರಯೋಗ ಹೆಚ್ಚು ಮಾಡುತ್ತಾನೆ. ವಿವಾಹ ಬರೀ ದೇಹ ಸುಖಕ್ಕಾಗಿ ಆಗುತ್ತದೆ. ಕೆಲವರು ಜೊತೆಗಾರರಿಂದ ದೇಹ ಸುಖ ಸಿಗಲಿಲ್ಲವೆಂಬ ಕಾರಣಕ್ಕೆ, ಪರಪುರುಷ ಅಥವಾ ಬೇರೆ ಮಹಿಳೆಯ ಜೊತೆಗೂ ಸಂಬಂಧ ಬೆಳೆಸಲು ಹಿಂಜರಿಯುವುದಿಲ್ಲ. ಇನ್ನು ವೈವಾಹಿಕ ಸಂಬಂಧವೆಂದರೆ, ಬರೀ ದೈಹಿಕ ಸುಖವೆಂದೇ ಪರಿಗಣಿಸುತ್ತಾರೆ ವಿನಃ ಪರಸ್ಪರರ ಪ್ರೀತಿಗೆ ಯಾವ ಬೆಲೆಯೂ ಇರುವುದಿಲ್ಲ. ಹೆಣ್ಣು ಕಹಿಯಾಗಿ ಮಾತನಾಡಲು ಶುರು ಮಾಡುತ್ತಾಳೆ. ಇದರಿಂದಲೇ ಹಲವು ವೈವಾಹಿಕ ಸಂಬಂಧಗಳು ನಾಶವಾಗುತ್ತದೆ.

ಅಲ್ಲದೇ ಕಲಿಯುಗದಲ್ಲಿ ಶ್ರೀಮಂತಿಕೆಗಷ್ಟೇ ಬೆಲೆ ಸಿಗುತ್ತದೆ. ಬಡತನಕ್ಕೆ ಬೆಲೆ ಸಿಗುವುದಿಲ್ಲವೆಂದು ಅಂದೇ ಶ್ರೀರಾಮ ಹೇಳಿದ್ದ. ಅದೇ ರೀತಿ ಈಗಿನ ಕಾಲದಲ್ಲಿ ಶ್ರೀಮಂತಿಕೆಗಷ್ಟೇ ಬೆಲೆ ಇದೆ. ಬಡವನಾದವನಲ್ಲಿ ಎಷ್ಟು ಒಳ್ಳೆಯ ಗುಣವಿದ್ದರೂ ಕೂಡ, ಅವನನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.. ಬಡವನ ಸಿಟ್ಟು ದವಡೆಗೆ ಮೂಲ ಎನ್ನುವ ಮಾತು ಕಲಿಯುಗದಲ್ಲಿ ಸಾಬೀತಾಗಲಿದೆ ಎಂದು ಅಂದೇ ಹೇಳಲಾಗಿತ್ತು.

ಇಷ್ಟೇ ಅಲ್ಲದೇ, ಕಲಿಯುಗದಲ್ಲಿ ಜನ ದೇವರಿಗಿಂತ ಹೆಚ್ಚು, ಮಾನವನ ಪೂಜೆ ಮಾಡುತ್ತಾರೆ. ಸಾಧು ಸಂತರ ಪೂಜೆ ಮಾಡುತ್ತಾರೆಂದು ಹೇಳಲಾಗಿತ್ತು. ಇಂದಿನ ದಿನಗಳಲ್ಲಿ ಸಾಧು ಸಂತರು, ಗುರುಗಳಂಥ ಹಲವರನ್ನ ಜನ ಪೂಜಿಸುತ್ತಿದ್ದಾರೆ.

ಪೌರಾಣಿಕ ಸಮಯದಲ್ಲಿ ಇದ್ದ ಶಕ್ತಿಶಾಲಿ ಶಂಖವಿದು.. ಭಾಗ2

ಈ ಸ್ಮಶಾನ ಮಧ್ಯದಲ್ಲಿ ಚಿತೆಯ ಎದುರು ವೇಶ್ಯೆಯರು ನೃತ್ಯ ಮಾಡುತ್ತಾರೆ.. ಯಾಕೆ ಗೊತ್ತಾ..?

ಪೌರಾಣಿಕ ಸಮಯದಲ್ಲಿ ಇದ್ದ ಶಕ್ತಿಶಾಲಿ ಶಂಖವಿದು.. ಭಾಗ1

About The Author