National Political News: ಸುಪ್ರಿಯಾ ಶ್ರೀನಾಥೆ ಎಂಬ ಕಾಂಗ್ರೆಸ್ ನಾಯಕಿ, ಕಂಗನಾ ರಾಣಾವತ್‌ಗೆ ಬಿಜೆಪಿ ಟಿಕೇಟ್ ನೀಡಿದ್ದನ್ನು, ಕೆಟ್ಟದಾಗಿ ಟೀಕೆ ಮಾಡಿ ಪೋಸ್ಟ್ ಮಾಡಿದ್ದರು. ಏನಿದೆ ರೇಟ್ ಎಂದು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಕಂಗನಾ ಫೋಟೋ ಅಪ್ಲೋಡ್ ಮಾಡಿದ್ದರು. ನೆಟ್ಟಿಗರು ಹಿಗ್ಗಾಮುಗ್ಗಾ ಉಗಿಯಲು ಶುರು ಮಾಡಿದ್ದಕ್ಕಾಗಿ, ಪೋಸ್ಟ್ ಡಿಲೀಟ್ ಮಾಡಿ, ಖಾತೆ ಹ್ಯಾಕ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದು ಎಷ್ಟು ಸತ್ವವೋ, ಸುಳ್ಳೋ ದೇವರಿಗೇ ಗೊತ್ತು.
ಇನ್ನು ಕಂಗನಾ ರಾಣಾವತ್ ಈ ಪೋಸ್ಟ್‌ಗೆ ಇನ್ನೊಂದು ಪೋಸ್ಟ್ ಹಾಕುವ ಮೂಲಕ ತಿರುಗೇಟು ನೀಡಿದ್ದು, ಪ್ರತೀ ಹೆಣ್ಣಿಗೆ ತನ್ನದೇ ಆದ ಘನತೆ, ಗೌರವವಿರುತ್ತದೆ. ಅದಕ್ಕೆ ಅವಳು ಅರ್ಹಳಾಗಿರುತ್ತಾಳೆ. 20 ವರ್ಷಗಳ ನನ್ನ ಸಿನಿ ಕೇರಿಯರ್‌ನಲ್ಲಿ ನಾನು ಹಲವಾರು ಪಾತ್ರದಲ್ಲಿ ನಟಿಸಿದ್ದೇನೆ. ಕ್ವೀನ್ ಚಿತ್ರದಲ್ಲಿ ನಿಷ್ಕಲ್ಮಶ ಹೆಣ್ಣಿನ ಪಾತ್ರಕ್ಕೆ ಬಣ್ಣ ಹಚ್ಚಿದ್ರೆ, ಧಾಕ್ಕಡ್ ಚಿತ್ರದಲ್ಲಿ ಘೂಡಚರ್ಯೆ ಮಾಡುವವಳ ಪಾತ್ರ ನಿಭಾಯಿಸಿದ್ದೇನೆ. ಮಣಿಕರ್ಣಿಕಾ ಚಿತ್ರದಲ್ಲಿ ದೇವತೆಯ ಪಾತ್ರ ನಿಭಾಯಿಸಿದ್ದು, ಚಂದ್ರಮುಖಿ ಚಿತ್ರದಲ್ಲಿ ರಾಕ್ಷಸಿಯಾಗಿ ಕಾಣಿಸಿಕೊಂಡಿದ್ದೇನೆ. ರಜ್ಜೋದಲ್ಲಿ ವೇಶ್ಯೆಯ ಪಾತ್ರದಲ್ಲಿ ನಟಿಸಿದರೆ, ಕ್ರಾಂತಿಕಾರಿ ನಾಯಕಿಯಾಗಿ ತಲೈವಿ ಪಾತ್ರ ಮಾಡಿದ್ದೇನೆ. ಹೆಣ್ಣಿನ ದೇಹದ ಭಾಗಗಳ ಬಗ್ಗೆ ಮಾತನಾಡುವ ಬದಲು, ಆಕೆಯನ್ನು ಸಶಕ್ತವಾಗಿ ಬೆಳೆಸುವ ಬಗ್ಗೆ ಗಮನ ಹರಿಸಬೇಕು ಎಂದು ಕಂಗನಾ ತಿರುಗೇಟು ನೀಡಿದ್ದಾರೆ.
Dear Supriya ji
In the last 20 years of my career as an artist I have played all kinds of women. From a naive girl in Queen to a seductive spy in Dhaakad, from a goddess in Manikarnika to a demon in Chandramukhi, from a prostitute in Rajjo to a revolutionary leader in Thalaivii.… pic.twitter.com/GJbhJTQAzW— Kangana Ranaut (@KanganaTeam) March 25, 2024