Sunday, April 13, 2025

Latest Posts

ತೆಲುಗು ಕನ್ನಡ ಚಿತ್ರಗಳು ಕೊರೋನಾ ವೈರಸ್ ಇದ್ದಂಗೆ..!

- Advertisement -

ಹೌದು. ಇದನ್ನು ಹೇಳಿದ್ದು ಖ್ಯಾತ ಮತ್ತು ಕಾಂಟ್ರವರ್ಷಿಯಲ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ರಾಮ್ ಗೋಪಾಲ್ ವರ್ಮಾ ಈ ತರಹ ಹೇಳಿದ್ಯಾಕೆ ಅಂತ ನಾವೂ ಅಂದ್ಕೊAಡ್ವಿ. ಕಾಂಟ್ರವರ್ಸಿ ಬಗ್ಗೆ ಹೇಳಿದ್ರೂ ಅದ್ರಲ್ಲೊಂದು ಲಾಜಿಕ್ ಇಟ್ಟರ‍್ತಾರೆ ಆರ್.ಜಿ.ವಿ. ಏನೇನೋ ಸೆನ್ಸ್ ಇಲ್ಲದ ಹಾಗೆ ಮಾತಾಡ್ತಾರೆ ಅನಿಸಿದ್ರೂ ತನಗನಿಸಿದ್ದನ್ನ ನೇರವಾಗಿ ಹೇಳೋದ್ರಲ್ಲಿ ವರ್ಮಾರಷ್ಟು ಗಟ್ಟಿಗ ಮತ್ತೊಬ್ಬರಿಲ್ಲ.
ಈಗ ವಿಷಯಕ್ಕೆ ಬರೋದಾದ್ರೆ ರಾಮ್ ಗೋಪಾಲ್ ವರ್ಮಾ, ಕೆಜಿಎಫ್ ಚಾಪ್ಟರ್ ೨ , ಆರ್‌ಆರ್‌ಆರ್, ಪುಷ್ಪದಂತಹ ಸಿನಿಮಾಗಳ ದೊಡ್ಡ ಸಕ್ಸಸ್ ಬಾಲಿವುಡ್‌ಗೆ ಕೊರೋನಾಂತೆ ಅಪ್ಪಳಿಸಿದೆ, ಈಗ ಹಿಂದಿಗೆ ಸಕ್ಸಸ್‌ನ ವ್ಯಾಕ್ಸಿನ್ ಬೇಕಾಗಿದೆ ಅಂತ ಟ್ವೀಟ್ ಮಾಡಿದ್ದಾರೆ. ವರ್ಮಾ ಟ್ವೀಟ್‌ನಲ್ಲಿ ಅರ್ಥವಿದೆ. ಆದ್ರೆ ಬಾಲಿವುಡ್‌ಗೆ ನೇರವಾಗೀನೇ ಸವಾಲು ಹಾಕಿರೋ ಹಾಗಿದೆ. ಹಿಂದಿಗೆ ವ್ಯಾಕ್ಸಿನ್ ಬೇಕಾಗಿದೆ ಅದು ಬರುತ್ತೆ ಅಂತ ನಿರೀಕ್ಷೆ ಮಾಡ್ತಿದ್ದೀನಿ ಎಂದಿರುವ ವರ್ಮಾ ಬಾಲವುಡ್ ಸಿನಿಮಾ ಸೌತ್ ಸಿನಿಮಾ ಮುಂದೆ ಕೊರೋನಾ ಅಪ್ಪಳಿಸಿದ ರೀತಿ ಕಂಗಾಲಾಗಿದೆ ಅನ್ನೋ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ..
ರಾಮ್ ಗೋಪಾಲ್ ವರ್ಮಾ ಸದಾ ಸುದ್ದಿಯಲ್ಲಿರೋದು ತಮ್ಮ ಬೋಲ್ಡ್ ಟ್ವೀಟ್ ಮತ್ತು ಬೋಲ್ಡ್ ಸಿನಿಮಾಗಳಿಂದಾನೆ. ಇತ್ತೀಚೆಗೆ ಲೆಸ್ಬಿಯನ್ ಲವ್‌ಸ್ಟೋರಿ ಖತರಾವನ್ನು ನಿರ್ದೇಶನ ಮಾಡಿ ಅದರ ಪ್ರೊಮೋಷನ್ ಮಾಡಿದ್ರು. ಇಬ್ಬರು ಹುಡುಗಿಯರು ಪ್ರೀತಿಸುವ ಕಥೆ ಇಲ್ಲಿದ್ದು, ನೈನಾ ಗಂಗೂಲಿ ಮತ್ತು ಅಕ್ಷರಾ ಈ ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸಿದ್ರು. ಭಿನ್ನ ವಿಭಿನ್ನ ಸಬ್ಜೆಕ್ಟ್ ತೆಗೆದುಕೊಂಡು ಸಿನಿಮಾ ಮಾಡೋ ರಾಮ್ ಗೋಪಾಲ್ ವರ್ಮಾ ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಮಾಡಿದ್ರೂ ಪ್ರಚಾರ ಭರ್ಜರಿಯಾಗಿ ಮಾಡೋ ಆರ್‌ಜಿವಿ ಸದಾ ಸುದ್ದಿಯಲ್ಲರ‍್ತಾರೆ. ಬಾಲಿವುಡ್‌ನಲ್ಲು ದೊಡ್ಡ ದೊಡ್ಡ ಸಿನಿಮಾ ಮಾಡಿರೋ ವರ್ಮಾ ಅಲ್ಲಿಗೆ ಟಾಂಟ್ ಕೊಟ್ರೆ ತಪ್ಪೇನೂ ಇಲ್ಲ. ಹಿರಿಯ ನಿರ್ದೇಶಕನ ಮಾತಿಂದ ಬಿಟೌನ್ ಸೌತ್ ಸಿನಿನಿಮಾಗಳಿಗೆ ಸೆಡ್ಡು ಹೊಡೆಯೋ ಸಿನಿಮಾ ಮಾಡುತ್ತಾ..? ಕಾದುನೋಡ್ಬೇಕು.

ಓಂ
ಕರ್ನಾಟಕ ಟಿವಿ

- Advertisement -

Latest Posts

Don't Miss