Karnataka Budget 2024: ಈ ಬಾರಿ ರಾಜ್ಯ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮದ್ಯದ ಬೆಲೆ ಏರಿಸುವ ಸೂಚನೆ ನೀಡಿದ್ದಾರೆ. ಅಬಕಾರಿ ಇಲಾಖೆಗೆ 38,525 ಕೋಟಿ ತೆರಿಗೆ ಸಂಗ್ರಹದ ಟಾರ್ಗೆಟ್ ನೀಡುವ ಮೂಲಕ, ಮುಂದಿನ ದಿನಗಳಲ್ಲಿ ಮದ್ಯಕ್ಕೆ ರೇಟ್ ಹೆಚ್ಚಾಗುವ ಸೂಚನೆ ನೀಡಿದ್ದಾರೆ. ಕಳೆದೆರಡು ವರ್ಷಕ್ಕಿಂತಲೂ ಈ ವರ್ಷದ ತೆರಿಗೆ ಟಾರ್ಗೇಟ್ 2 ಸಾವಿರಕ್ಕೂ ಹೆಚ್ಚಾಗಿದ್ದು, ಈ ಕಾರಣಕ್ಕೆ ಮದ್ಯದ ರೇಟ್ ಹೆಚ್ಚಾಗುವ ನಿರೀಕ್ಷೆ ಇದೆ.
ಸಮುದ್ರ ಆ್ಯಂಬುಲೆನ್ಸ್: ಇನ್ನು ಈ ಬಾರಿಯ ಬಜೆಟ್‌ನಲ್ಲಿ ರಾಜ್ಯದಲ್ಲೇ ಮೊದಲ ಬಾರಿ, ಮೀನುಗಾರರರ ರಕ್ಷಣೆಗಾಗಿ ಸಮುದ್ರ ಆ್ಯಂಬುಲೆನ್ಸ್ ಖರೀದಿಸಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಮುದ್ರ ಆ್ಯಂಬುಲೆನ್ಸ್ ಖರೀದಿಗಾಗಿ 7 ಕೋಟಿ ರೂಪಾಯಿ ಅನುದಾನ ನೀಡಲಾಗುವುದೆಂದು ಹೇಳಿದ್ದಾರೆ. ಇಷ್ಟೇ ಅಲ್ಲದೇ, 10 ಸಾವಿರ ವಸತಿರಹಿತ ಮೀನುಗಾರರಿಗೆ ವಸತಿ ಕಲ್ಪಿಸುವ ಭರವಸೆ ನೀಡಿದ್ದಾರೆ.
ವಾಟರ್ ಮೆಟ್ರೋ: ಇಷ್ಟೇ ಅಲ್ಲದೇ, ಈಗಾಗಲೇ ಕೇರಳದಲ್ಲಿ ಶುರುವಾಗಿರುವ ವಾಟರ್ ಮೆಟ್ರೋಯನ್ನು ಮಂಗಳೂರಿನಲ್ಲೂ ತರಲಿದ್ದಾರೆಂದು ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ರಾತ್ರಿ 1ಗಂಟೆವರೆಗೂ ವ್ಯಾಪಾರ: ಬೆಂಗಳೂರು ಸೇರಿ, ರಾಜ್ಯದ ಮಹಾನಗರಗಳಲ್ಲಿ ವ್ಯಾಪಾರ ವಹಿವಾಟನ್ನು 1 ಗಂಟೆಯವರೆಗೂ ವಿಸ್ತರಿಸಲಾಗಿದೆ. ಇಷ್ಟು ದಿನ 11 ಗಂಟೆಗೆ ಅಂಗಡಿ ಮುಚ್ಚಬೇಕಿತ್ತು. ಆದರೆ ಇದೀಗ ವ್ಯಾಪಾರವನ್ನು ಬೆಳಗ್ಗಿನ ಜಾವ 1 ಗಂಟೆಯವರೆಗೂ ನಡೆಸಬಹುದು ಎಂದು ಬಜೆಟ್‌ನಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.
ಅಬುಧಾಬಿಯ ಮೊದಲ ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿದ ಬಾಲಿವುಡ್ ದಿಗ್ಗಜರು
ಪಾರ್ಕಿಂಗ್ ವಿಚಾರಕ್ಕಾಗಿ ಗಲಾಟೆ: ಡಾಕ್ಟರ್‌ಗೆ ಕಪಾಳ ಮೋಕ್ಷ ಮಾಡಿದ ಕಾಂಗ್ರೆಸ್ ಮುಖಂಡ ಅರೀಫ್ ದೇಸಾಯಿ
ಪತ್ನಿ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿದ್ದಕ್ಕೆ, ಪತಿ ಆತ್ಮಹತ್ಯೆಗೆ ಶರಣು..!