Recipe: ನೀವು ಸಾಮಾನ್ಯವಾಗಿ, ಚಹಾ ಮಾಡುವಾಗ, ಹಾಲು, ನೀರು, ಸಕ್ಕರೆ, ಮತ್ತು ಚಹಾದ ಪುಡಿಯನ್ನಷ್ಟೇ ಬಳಸುತ್ತೀರಿ. ಆದರೆ ಕಾಶ್ಮೀರಿ ಚಹಾ ಮಾಡುವಾಗ ಮಾತ್ರ, ನೀವು ಈ ಎಲ್ಲ ಸಾಮಗ್ರಿಯನ್ನು ಬಳಸುವಂತಿಲ್ಲ. ಇಲ್ಲಿ ಸಕ್ಕರೆ ಬದಲು, ಉಪ್ಪು ಬಳಸಲಾಗುತ್ತದೆ. ಬೇಕಿಂಗ್ ಸೋಡಾ ಕೂಡ ಬಳಸಲಾಗುತ್ತದೆ. ಹಾಗಾದರೆ ಕಾಶ್ಮೀರಿ ಚಹಾ ಮಾಡುವುದು ಹೇಗೆ ಅಂತಾ ತಿಳಿಯೋಣ ಬನ್ನಿ..
ಗ್ಯಾಸ್ ಆನ್ ಮಾಡಿ, ಚಹಾ ಪಾತ್ರೆ ಇಟ್ಟು, ಅದಕ್ಕೆ ಎರಡು ಕಪ್ ನೀರು ಹಾಕಿ. ಈಗ 3 ಟೀ ಸ್ಪೂನ್ ಗ್ರೀನ್ ಟೀ ಪುಡಿ, 1 ಸ್ಪೂನ್ ಉಪ್ಪು, ಬೇಕಿಂಗ್ ಸೋಡಾ ಸೇರಿಸಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ. 10ರಿಂದ 12 ನಿಮಿಷ ಚೆನ್ನಾಗಿ ಕುದಿಸಿ. ಈಗ ಚಹಾದ ಕಲರ್ ಚೇಂಜ್ ಆಗಿರುತ್ತದೆ. ಮತ್ತು ಚಹಾದ ಕ್ವಾಂಟಿಟಿ ಕಡಿಮೆಯಾಗಿರುತ್ತದೆ. ಹಾಗಾಗಿ ಅದಕ್ಕೆ ಮತ್ತೆ ಎರಡು ಗ್ಲಾಸ್ ನೀರು ಸೇರಿಸಿ, ಮತ್ತೆ ಚೆನ್ನಾಗಿ ಕುದಿಸಿ. ಬಳಿಕ 1 ಕಪ್ ಹಾಲು ಹಾಕಿ ಮತ್ತೆ ಕುದಿಸಿ. ಈಗ ಕಾಶ್ಮೀರಿ ಚಹಾ ರೆಡಿ. ಇದನ್ನು ಸೋಸಿ ಸೇವಿಸಿ.

