Friday, September 20, 2024

Latest Posts

ಈ 5 ಮರಗಳು ನಿಮ್ಮ ಮನೆಯ ಬಳಿ ಇರದಂತೆ ನೋಡಿಕೊಳ್ಳಿ..

- Advertisement -

ಒಂದು ಚಂದದ ಮನೆ ಇರಬೇಕು. ಮನೆಯ ಸುತ್ತಮುತ್ತ ಗಿಡ ಮರಗಳಿರಬೇಕು. ಅದರಿಂದ ಬರುವ ಆಹ್ಲಾದಕರ ಗಾಳಿಯನ್ನ ಸೇವಿಸುತ್ತ, ಪ್ರಕೃತಿ ಸೌಂದರ್ಯ ಸವಿಯುತ್ತ ಜೀವನ ಕಳೆಯಬೇಕು ಅನ್ನೋದು ತುಂಬಾ ಜನರ ಆಸೆಯಾಗಿರತ್ತೆ. ಆದ್ರೆ ಹೀಗೆ ಪ್ರಕೃತಿ ಸೌಂದರ್ಯ ಕಾಣಲು ನೀವು ನಿಮ್ಮ ಮನೆಯ ಸುತ್ತಮುತ್ತ ಸಿಕ್ಕ ಸಿಕ್ಕ ಗಿಡಗಳನ್ನೆಲ್ಲ ಬೆಳೆಸುವಂತಿಲ್ಲ. ಯಾಕಂದ್ರೆ ಕೆಲವು ಗಿಡ ಮರಗಳು ನಮ್ಮ ಮನೆ ನಾಶವಾಗಲು, ನೆಮ್ಮದಿ ಹಾಳಾಗಲು ಕಾರಣವಾಗತ್ತೆ. ಹಾಗಾದ್ರೆ ಯಾವುದು ಅಂಥ ಮರಗಳು ಅಂತಾ ತಿಳಿಯೋಣ ಬನ್ನಿ..

ಮೊದಲನೇಯದ್ದು ಎಕ್ಕದ ಗಿಡ. ಎಕ್ಕದ ಗಿಡವನ್ನ ಮನೆಯ ಬಳಿ ನೆಡಬಾರದು. ಇದರಿಂದ ಮನೆಯ ಸದಸ್ಯನ ಆರೋಗ್ಯ ಹಾಳಾಗುವ ಸಾಧ್ಯತೆ ಇರುತ್ತದೆ. ಅಥವಾ ಮನೆಯಲ್ಲಿ ನೆಮ್ಮದಿ ಹಾಳಾಗುತ್ತದೆ. ಯಾಕಂದ್ರೆ ಇದರಲ್ಲಿ ಋಣಾತ್ಮಕ ಶಕ್ತಿ ಹೆಚ್ಚಾಗಿರುತ್ತದೆ.

ಕಾಳುಮೆಣಸನ್ನ ಅಡುಗೆಯಲ್ಲಿ ಸೇರಿಸಬೇಕು ಅಂತಾ ಹೇಳೋದು ಇದಕ್ಕೆ ನೋಡಿ..

ಎರಡನೇಯದ್ದು ಹುಣಸೆ ಮರ. ಹುಣಸೆ ಮರದಲ್ಲಿ ರಾತ್ರಿ ಹೊತ್ತು ಪ್ರೇತಗಳ ವಾಸವಿರುತ್ತದೆ ಅಂತಾ ಹೇಳಲಾಗುತ್ತದೆ. ಹಾಗಾಗಿ ಹುಣಸೆ ಮರ ಮನೆಯ ಬಳಿ ಇರಬಾರದು.

ಮೂರನೇಯದ್ದು ಆಲದ ಮರ. ಆಲದ ಮರವನ್ನ ಯಾರೂ ಮನೆಯಲ್ಲಿ ನೆಡುವುದಿಲ್ಲ. ಇನ್ನು ಮೊದಲೇ ಆಲದ ಮರವಿದ್ದು, ಅದರ ಬಳಿ ಇರುವ ಮನೆಯಲ್ಲಿ ನೀವು ವಾಸ ಮಾಡುವುದಿದ್ದರೆ, ಪದ್ಧತಿ ಪ್ರಕಾರ ಆ ಮರವನ್ನು ಕಡಿಯಿರಿ. ಯಾಕಂದ್ರೆ ಆಲದ ಮರ, ಅರಳಿ ಮರ ದೇವಸ್ಥಾನದಲ್ಲಿ ಇದ್ದರೆ ಉತ್ತಮ. ಅದು ಮನೆಯ ಬಳಿ ಇದ್ದರೆ, ಮನೆಗೆ ಒಳ್ಳೆಯದಲ್ಲ. ಅದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ವಾಸ ಮಾಡುವ ಸಾಧ್ಯತೆ ಇದೆ. ಹಾಗಾಗಿ ಮನೆಯ ಬಳಿ ಆಲದ ಮರವಿರಬಾರದು.

ಹರಿವೆ ಸೊಪ್ಪನ್ನು ತಿನ್ನುವುದರಿಂದ ಆರೋಗ್ಯಕ್ಕಾಗಲಿದೆ ಅತ್ಯುತ್ತಮ ಲಾಭ..

ನಾಲ್ಕನೇಯದ್ದು ಖರ್ಜೂರದ ಮರ. ಭಾರತದಲ್ಲಿ ಹೆಚ್ಚಿನವರು ಖರ್ಜೂರವನ್ನ ಬೆಳೆಯುವುದಿಲ್ಲ. ಆದರೆ ಖರ್ಜೂರದ ಮರ ಮನೆಯ ಬಳಿ ಇದ್ದರೆ ಅದು ನಕಾರಾತ್ಮಕ ಶಕ್ತಿಯನ್ನು ಪಸರಿಸುತ್ತದೆ ಅಂತಾ ಹೇಳಲಾಗತ್ತೆ.

ಐದನೇಯದ್ದು ಬೋರೆ ಹಣ್ಣಿನ ಮರ. ಬೋರೆ ಹಣ್ಣು ರುಚಿ ಇರಬಹುದು. ಆದ್ರೆ ಅದರ ಮರದಿಂದ ಮಾತ್ರ ಒಳ್ಳೆಯದಾಗುವುದಿಲ್ಲ. ಹಾಗಾಗಿ ಈ ಹಣ್ಣು ಹೆಚ್ಚಾಗಿ ಕಾಡಿನಲ್ಲೇ ಬೆಳೆಯುತ್ತದೆ. ಬೋರೆ ಹಣ್ಣಿನ ಮರವನ್ನು ಮನೆಯ ಎದುರಿಗೆ ನೆಡಕೂಡದು. ಯಾಕಂದ್ರೆ ಈ ಮರದಲ್ಲಿ ಮುಳ್ಳುಗಳಿರುತ್ತದೆ. ಮತ್ತು ಈ ಮರವಿದ್ದ ಜಾಗದಲ್ಲಿ ಸಕಾರಾತ್ಮಕ ಶಕ್ತಿ ಇರಲು ಸಾಧ್ಯವಿಲ್ಲ. ಹಾಗಾಗಿ ಬೋರೆ ಹಣ್ಣಿನ ಮರವನ್ನು ನಿಮ್ಮ ಮನೆಯ ಬಳಿ ನೆಡಬೇಡಿ.

- Advertisement -

Latest Posts

Don't Miss