ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಶುದ್ಧವಾಗಿ, ದೇವರಿಗೆ ದೀಪ ಹಚ್ಚುವುದು ಹಿಂದೂ ಧರ್ಮದಲ್ಲಿರುವ ಪದ್ಧತಿ. ಈ ಪದ್ಧತಿಯನ್ನು ಪ್ರತಿಯೋರ್ವ ಹಿಂದೂ ಅನುಸರಿಸಬೇಕು ಅನ್ನೋ ನಿಯಮವಿದೆ. ಆದ್ರೆ ನೀವು ದೇವರಿಗೆ ದೀಪ ಹಚ್ಚುವಾಗ, ಕೆಲ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆ ನಿಯಮಗಳು ಯಾವುದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೊದಲನೇಯ ನಿಯಮವೆಂದರೆ, ಸಂಜೆ ಲಕ್ಷ್ಮೀ ಮನೆಗೆ ಬರುವ ಹೊತ್ತು. ಈ ವೇಳೆ ನಾವು ಪ್ರೀತಿ, ಭಕ್ತಿಯಿಂದ ಲಕ್ಷ್ಮೀಯನ್ನು ಬರ ಮಾಡಿಕೊಳ್ಳಬೇಕು. ಹಾಗಾಗಿ ದೀಪ ಹಚ್ಚುವ ಮುನ್ನ ನಿದ್ದೆಯಿಂದ ಏಳಿ. ತಲೆ ಬಾಚಿಕೊಳ್ಳಿ. ಮನೆ ಕ್ಲೀನ್ ಮಾಡಿಕೊಳ್ಳಿ. ಬಟ್ಟೆ ವಾಶ್ ಮಾಡುವುದಿದ್ದರೆ, ದೀಪ ಹಚ್ಚುವ ಮೊದಲೇ ತೊಳೆದುಬಿಡಿ. ಯಾಕಂದ್ರೆ ಮುಸ್ಸಂಜೆ ಹೊತ್ತಲ್ಲಿ, ದೀಪ ಹಚ್ಚಿದ ಬಳಿಕ, ನೀವೇನಾದ್ರೂ ಬಟ್ಟೆ ಒಗೆದಿರೋ, ತಲೆ ಬಾಚಿಕೊಂಡರೋ, ಅಥವಾ ನಿದ್ದೆ ಮಾಡಿದಿರೋ, ದರಿದ್ರ ನಿಮ್ಮ ಮನೆಗೆ ಬರುತ್ತದೆ.
ಎರಡನೇಯ ನಿಯಮವೆಂದರೆ, ದೀಪ ಹಚ್ಚಿದ ಬಳಿಕ, ದೇವರ ಮುಂದೆ ಕುಳಿತು ನಾಮಸ್ಮರಣೆ ಮಾಡಿ. ಭಜನೆ ಮಾಡಿ, ಇಲ್ಲಾ ಭಕ್ತಿ ಗೀತೆ ಕೇಳಿ. ಆಫೀಸು ಕೆಲಸ, ಶಾಲಾ ಕಾಲೇಜಿನ ಹೋಮ್‌ವರ್ಕ್ ಇದ್ದರೆ, ಮಾಡಿ. ಅದನ್ನು ಬಿಟ್ಟು ಹೊಸ್ತಿಲ ಬಳಿ ಕುಳಿತು ಹರಟೆ ಹೊಡೆಯುವುದು. ಜಗಳ ಮಾಡುವುದು, ಕೆಟ್ಟ ಕೆಟ್ಟದಾಗಿ ಮಾತನಾಡುವುದು, ಅಥವಾ ಬೈಯ್ಯುವುದು, ಮನೆಯ ಹೆಣ್ಣು ಮಕ್ಕಳ ಮನಸ್ಸು ನೋಯಿಸಿ, ಅವರು ಕಣ್ಣೀರು ಹಾಕುವಂತೆ ಮಾಡುವುದೆಲ್ಲ ಮಾಡಿದ್ರೆ, ನೀವೆಂದಿಗೂ ಯಶಸ್ಸು ಕಾಣುವುದಿಲ್ಲ.
ಮೂರನೇಯ ನಿಯಮವೆಂದರೆ, ಬೆಳ್ಳಿ, ಹಿತ್ತಾಳೆ, ಮಣ್ಣಿನ ಹಣತೆ ಬಳಸಿಯೇ ದೀಪ ಹಚ್ಚಿ. ಯಾವುದೇ ಕಾರಣಕ್ಕೂ ಸ್ಟೀಲ್ ಹಣತೆ ಬಳಸಲೇಬೇಡಿ. ಇದರಿಂದ ಮನೆಗೆ ಒಳಿತಾಗುವುದಿಲ್ಲ. ಇದನ್ನ ಹೆಚ್ಚಿನ ಜನ ನಂಬುವುದಿಲ್ಲ. ಆದ್ರೆ ಕೆಲವರು ಹೀಗೆ ಮಾಡಿ,, ಕಷ್ಟವನ್ನ ಅನುಭವಿಸಿದ್ದಾರೆ. ಮಣ್ಣಿನ ಹಣತೆಯಲ್ಲಿ ದೀಪ ಹಚ್ಚುವುದಿದ್ದರೆ, ಹಣತೆ ಒಡೆದಿರದಂತೆ ನೋಡಿಕೊಳ್ಳಿ.
ನಾಲ್ಕನೇಯ ನಿಯಮವೆಂದರೆ, ಒಂಟಿ ಬತ್ತಿಯನ್ನು ಎಂದಿಗೂ ಹಚ್ಚಬೇಡಿ. ಒಂಟಿ ಹಣತೆಯಲ್ಲಿ ದೀಪ ಹಚ್ಚುವುದು ತಪ್ಪಲ್ಲ, ಆದರೆ, ಒಂಟಿ ಬತ್ತಿ, ಅಂದರೆ, ಒಂದು ದೀಪಕ್ಕೆ ಒಂದೇ ಬತ್ತಿ ಹಾಕಿ, ದೀಪ ಹಚ್ಚಬೇಡಿ. ಇದು ದರಿದ್ರ ತರುತ್ತದೆ. ಹಾಗಾಗಿ ಎರಡು ಬತ್ತಿ ಹಾಕಿ, ದೀಪ ಹಚ್ಚಿ. ಇನ್ನು ದೀಪ ಹಚ್ಚಿದ ಬಳಿಕ ಅದಾಗಿ ಅದೇ ಆರು ಹೋಗುವವರೆಗೂ ಸುಮ್ಮನಿರಿ. ಅದನ್ನು ಬಿಟ್ಟು ನೀವಾಗಿಯೇ ದೀಪ ಆರಿಸಬೇಡಿ. ಇದರಿಂದ ಮನೆಯ ನೆಮ್ಮದಿ ಹಾಳಾಗುತ್ತದೆ.
ಐದನೇಯ ನಿಯಮವೆಂದರೆ, ಸಂಜೆ 6 ಗಂಟೆಯಾಗುತ್ತಿದ್ದಂತೆ ದೀಪ ಹಚ್ಚಬಹುದು. ನಿಮಗೆ ಅದು ಬೇಗ ಎನ್ನಿಸಿದರೆ, 7 ಗಂಟೆಯೊಳಗೆ ಯಾವಾಗ ಬೇಕಾದರೂ ದೀಪ ಹಚ್ಚಿ. ಆದ್ರೆ ಇದಕ್ಕಿಂತ ಲೇಟ್ ಮಾಡಬೇಡಿ. ಇನ್ನು ಬೆಳಿಗ್ಗೆ 5 ಗಂಟೆಯಿಂದ 10 ಗಂಟೆಯೊಳಗೆ ದೀಪ ಹಚ್ಚುವುದು ಬೆಸ್ಟ್. ಪೂಜೆ ಕೂಡ ಇದೇ ಸಮಯದಲ್ಲಾಗಲಿ, ಇದಕ್ಕಿಂತ ಲೇಟ್ ಮಾಡಬೇಡಿ.