ಬಾಸ್ಮತಿ ಅಕ್ಕಿ ಅಂದ್ರೆ ಯಾರಿಗೆ ತಾನೇ ಇಷ್ಚವಾಗಲ್ಲ ಹೇಳಿ..? ಅದರಲ್ಲೂ ಬಿರಿಯಾನಿ ಪ್ರಿಯರಿಗೆ ಬಾಸ್ಮತಿ ರೈಸ್ ಅಂದ್ರೆ ತುಂಬಾನೇ ಇಷ್ಟ. ಪಲಾವ್, ಬಿರಿಯಾನಿ, ಸೇರಿ ಇನ್ನಿತರ ಅನ್ನದ ಪದಾರ್ಥ ಮಾಡುವಾಗ ನಾವು ಬಾಸ್ಮತಿ ರೈಸ್ ಬಳಸುತ್ತೇವೆ. ಇದನ್ನ ಸರಿಯಾದ ರೀತಿಯಲ್ಲಿ ಬೇಯಿಸಿದಾಗಲೇ, ಇದು ಉತ್ತಮ ರುಚಿ ಕೊಡುತ್ತದೆ. ಆದ್ರೆ ಬಾಸ್ಮತಿ ಅಕ್ಕಿ ತಿನ್ನುವುದರಿಂದ ಆಗುವ ಲಾಭವೇನು..? ಮತ್ತು ಇದನ್ನು ತಿನ್ನುವಾಗ ನಾವು ಗಮನದಲ್ಲಿಡಬೇಕಾದ ಅಂಶವೇನು ಅಂತಾ ತಿಳಿಯೋಣ ಬನ್ನಿ..
ನಾನ್ ವೆಜ್ ತಿನ್ನದವರು ಇವುಗಳನ್ನು ತಿಂದರೆ ಪ್ರೊಟೀನ್ ಸಿಗುತ್ತದೆ…!
ಶುಗರ್ ಇದ್ದವರು ಕೂಡ ಬಾಸ್ಮತಿ ಅಕ್ಕಿಯಿಂದ ಮಾಡಿದ ಆಹಾರವನ್ನು ವಾರಕ್ಕೊಮ್ಮೆ ತಿನ್ನಬಹುದು. ಯಾಕಂದ್ರೆ ಬೇರೆ ಅಕ್ಕಿಯಿಂದ ಮಾಡಿದ ಆಹಾರಕ್ಕಿಂತ, ಈ ಅಕ್ಕಿಯಿಂದ ತಯಾರಿಸಿದ ಆಹಾರದಲ್ಲಿ ಶುಗರ್ ಪ್ರಮಾಣ ಹೆಚ್ಚಾಗಿರುವುದಿಲ್ಲ. ಹಾಗಾಗಿ ಶುಗರ್ ಇದ್ದವರು ಕೂಡ ವಾರಕ್ಕೊಮ್ಮೆ ಈ ಅನ್ನವನ್ನ ತಿನ್ನಬಹುದು.
ಇನ್ನು ನೀವು ಬಾಸ್ಮತಿ ಅನ್ನವನ್ನ ವಾರದಲ್ಲೆರಡೇ ಎರಡು ಬಾರಿ ತಿಂದರೂ ನಿಮ್ಮ ತ್ವಚೆ ಉತ್ತಮವಾಗಿರುತ್ತದೆ. ಮುಖದ ಮೇಲೆ ಕೆಲವರಿಗೆ ಕಲೆಯಾಗುತ್ತದೆ. ಅಂಥ ಕಲೆ ಹೋಗಲಾಡಿಸಬೇಕೆಂದಲ್ಲಿ ನೀವು ಬಾಸ್ಮತಿ ಅಕ್ಕಿಯ ಪ್ರಯೋಗ ಮಾಡಬೇಕು. ಬಾಸ್ಮತಿ ಅಕ್ಕಿ ತೊಳೆದ ನೀರನ್ನ ಫರ್ಮೆಂಟ್ ಮಾಡಿ, ಬಳಸಬೇಕು. ಅಂದರೆ ಇಂದು ಬೆಳಿಗ್ಗೆ ಒಂದು ಸ್ಪೂನ್ ಬಾಸ್ಮತಿ ಅಕ್ಕಿಯನ್ನ ನೀರಿನಲ್ಲಿ ನೆನೆಸಿಟ್ಟು, ಮರುದಿನ ಬೆಳಿಗ್ಗೆ ಅಕ್ಕಿ ತೊಳೆದು ನೀರಿನಿಂದ ಮುಖ ತೊಳೆದರೆ, ಆ ಕಲೆ ಬೇಗ ಹೊಗುತ್ತದೆ.
ಶುಗರ್ ರೋಗಿಗಳು ಇವುಗಳನ್ನು ನೆನೆಸಿ ತಿಂದರೆ ಇನ್ಸುಲಿನ್ ಗೆ ಸಮ..!
ಬಾಸ್ಮತಿ ಅಕ್ಕಿ ಆರೋಗ್ಯಕ್ಕೆ ಉತ್ತವಾದರೂ ಕೂಡ ಅಮೃತ ಹೆಚ್ಚಾದರೂ ವಿಷವೇ ಎಂಬಂತೆ, ಇದನ್ನು ನೀವು ಹೆಚ್ಚು ಸೇವಿಸುವಂತಿಲ್ಲ. ಹಾಗಂತ ಪ್ರತಿದಿನ ಬಾಸ್ಮತಿ ಅಕ್ಕಿಯಿಂದ ಮಾಡಿದ ಪದಾರ್ಥವನ್ನು ತಿನ್ನಬೇಡಿ. ಹಾಗೆ ಮಾಡಿದ್ದಲ್ಲಿ, ಹೊಟ್ಟೆ ನೋವಿನ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆ ಬರುತ್ತದೆ.