ಓರ್ವ ಮನುಷ್ಯ ತನ್ನ ಜೀವನದಲ್ಲಿ ಮಕ್ಕಳ ಮದುವೆ ಮಾಡುವಾಗ ಮತ್ತು ಮನೆ ಕಟ್ಟುವಾಗ ಪಡುವ ಕಷ್ಟ ಅಷ್ಟಿಷ್ಟಲ್ಲ. ಮಕ್ಕಳ ಮದುವೆ ಮಾಡಲು ದುಡ್ಡು ಹೊಂದಿಸಬೇಕು. ಉತ್ತಮವಾದ ಸಂಬಂಧ ಹುಡುಕಬೇಕು. ಸಂಬಂಧಿಕರ ಮನಸ್ಸಿಗೆ ನೋವು ಮಾಡದೇ, ಎಲ್ಲರನ್ನೂ ನೆನಪಿನಿಂದ ಸ್ವಾಗತಿಸಬೇಕು. ಹೀಗೆ ಹಲವಾರು ಚಾಲೇಂಜಸ್ ಫೇಸ್ ಮಾಡ್ಬೇಕು. ಅದೇ ರೀತಿ ಮನೆ ಕಟ್ಟುವ ವಿಚಾರ.
ಮನೆ ಕಟ್ಟುವಾಗ, ಒಂದು ಬಜೆಟ್ ಎಂದು ಹಾಕಿರ್ತಾರೆ. ಆದ್ರೆ ದಿನಗಳೆದಂತೆ, ಬಜೆಟ್ ಕೈ ಮೀರಿ ಹೋಗತ್ತೆ. ಆಗ ಹಣ ಹೊಂದಿಸುವ ಚಾಲೆಂಜ್ ಎದುರಾಗತ್ತೆ. ಹೀಗೆ ಹಲವು ಕಷ್ಟಗಳನ್ನ ಎದುರಿಸಿ ಮನೆ ಕಟ್ಟಿಸುತ್ತೀರಿ. ಅಥವಾ ಕೊಂಡುಕೊಳ್ಳುತ್ತೀರಿ. ಇಷ್ಟೆಲ್ಲಾ ಮಾಡಿ, ನಿಮ್ಮ ಮನೆಯ ವಾಸ್ತು ಚೆನ್ನಾಗಿಲ್ಲಾ ಅಂದ್ರೆ ಏನು ಪ್ರಯೋಜನ..? ಅಷ್ಟು ದೊಡ್ಡ ಮನೆ ಕಟ್ಟಿ, ಮನೆಯಲ್ಲಿ ನೆಮ್ಮದಿಯೇ ಇಲ್ಲಾ, ಖುಷಿಯೇ ಇಲ್ಲಾ ಅಂದ್ರೆ ಏನು ಲಾಭ..? ಹಾಗಾಗಿ ನಾವಿಂದು ಕೆಲ ವಾಸ್ತು ಟಿಪ್ಸ್ ಹೇಳಲಿದ್ದೇವೆ..
ಮನೆಯ ದ್ವಾರ ಪೂರ್ವ ಅಥವಾ ಉತ್ತರ ಪೂರ್ವ ದಿಕ್ಕಿನಲ್ಲೇ ಇರಬೇಕು. ದಕ್ಷಿಣ ದಿಕ್ಕಿನಲ್ಲಿ ಮನೆಯ ಬಾಗಿಲಿನ ದ್ವಾರವಿರುವುದು ಅಷ್ಟು ಉತ್ತಮವಲ್ಲ. ಹಾಗೇನಾದರೂ ದಕ್ಷಿಣ ದಿಕ್ಕಿಗೆ ಬಾಗಿಲಿದ್ದರೆ, ಪೂರ್ವ ದಿಕ್ಕಿನಿಂದ ಇನ್ನೊಂದು ದ್ವಾರವಿರುವಂತೆ ನೋಡಿಕೊಳ್ಳಿ. ನಿಮಗೆ ಎಷ್ಟೇ ಹುಡುಕಿದ್ರೂ ದಕ್ಷಿಣ ದ್ವಾರವಿರುವ ಮನೆಯೇ ಸಿಕ್ಕಿದರೆ, ದಕ್ಷಿಣಾಮೂರ್ತಿಯನ್ನು ಭಕ್ತಿಯಿಂದ ಆರಾಧಿಸಿ. ಮನೆ ಬಾಗಿಲು ತೆರೆಯುತ್ತಿದ್ದಂತೆ, ದಕ್ಷಿಣಾಮೂರ್ತಿಯ ಫೋಟೋ ಕಾಣುವ ಹಾಗೆ ಇರಿಸಿ. ಇದು ತುಂಬಾ ಒಳ್ಳೆಯದು.
ಇನ್ನು ಮನೆಗೆ ಗಾಢವಾದ ಬಣ್ಣದಿಂದ ಪೇಂಟ್ ಮಾಡಿಸಬಾರದು. ಯಾಕಂದ್ರೆ ಗಾಢವಾದ ಬಣ್ಣ ನಕಾರಾತ್ಮಕ ಶಕ್ತಿಯನ್ನು ತನ್ನತ್ತ ಸೆಳೆಯುತ್ತದೆ. ಅದರಲ್ಲೂ ಕಪ್ಪು ಬಣ್ಣ, ಮನೆಯ ಹೊರವಲಯದಲ್ಲಿ ಬಳಸಲೇಬೇಡಿ. ಇನ್ನು ಬೆಡ್ ಹಾಕುವಾಗ, ಪೂರ್ವಕ್ಕೆ ಅಥವಾ ದಕ್ಷಿಣಕ್ಕೆ ತಲೆ ಹಾಕಿ ಮಲಗುವಂತೆ ವ್ಯವಸ್ಥೆ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಪಶ್ಚಿಮಕ್ಕೆ ಮತ್ತು ಉತ್ತರಕ್ಕೆ ತಲೆ ಹಾಕಿ ಮಲಗಬೇಡಿ. ಯಾಕಂದ್ರೆ ಇದರಿಂದ ಆರೋಗ್ಯ ಸಮಸ್ಯೆ ಬರುತ್ತದೆ.
ಇನ್ನು ಕಿಚನ್ ವಿಷಯಕ್ಕೆ ಬಂದ್ರೆ, ಒಟ್ಟಿಗೆ ಮೂರು ಒಲೆ ಇರುವ ಸ್ಟವ್ ತೆಗೆದುಕೊಳ್ಳಬೇಡಿ.. ಎರಡು ಅಥವಾ ನಾಲ್ಕು ಒಲೆ ಇರುವ ಸ್ಟವ್ ತೆಗೆದುಕೊಳ್ಳಿ. ಅಕ್ಕಿ ತುಂಬಿರುವ ಚೀಲ ಅಥವಾ ಡಬ್ಬವನ್ನು ಮೂಲೆಯಲ್ಲಿ ಇರಿಸಬಾರದು. ಇದರಿಂದ ಮನೆಯೊಡತಿಗೆ ಆರೋಗ್ಯ ಸಮಸ್ಯೆ ಬರುತ್ತದೆ. ಹಾಗಾಗಿ ಅಕ್ಕಿಯನ್ನು ಕಿಚನ್‌ನ ಮೂಲೆಗೆ ಇರಿಸಬಾರದು.
ದೂರ್ವಾಸ ಮುನಿಗಳ ವಿಚಿತ್ರ ಬೇಡಿಕೆಯನ್ನ ಶ್ರೀರಾಮ ಹೇಗೆ ನೆರವೇರಿಸಿದ ಗೊತ್ತಾ..? ಭಾಗ 1