Recipe: ಭಾರತದಲ್ಲಿರುವಷ್ಟು ರುಚಿ ರುಚಿಯಾದ, ವೆರೈಟಿ ಊಟ- ತಿಂಡಿ ನಿಮಗೆ ಬೇರೆ ಯಾವುದೇ ದೇಶದಲ್ಲಿ ಸಿಗಲಿಕ್ಕಿಲ್ಲ. ಒಂದೊಂದು ರಾಜ್ಯಕ್ಕೂ ಹಲವು ತರಹದ ಅಡುಗೆಗಳು ಇದೆ. ಅದರಲ್ಲಿ ನಾವಿಂದು ಕೇರಳ ಶೈಲಿಯ ಅವಿಲ್ ರೆಸಿಪಿ ಮಾಡೋದು ಹೇಗೆ ಎಂದು ಹೇಳಲಿದ್ದೇವೆ.
ಒಂದು ಆಲೂಗಡ್ಡೆ, ಒಂದು ಬದನೇಕಾಯಿ, ಎರಡು ಕ್ಯಾರೆಟ್, ಎರಡು ನುಗ್ಗೇಕಾಯಿ, 10 ಬೀನ್ಸ್, ಚಿಕ್ಕ ತುಂಡು ಮಂಗಳೂರು ಸೌತೇಕಾಯಿ, 10 ತೊಂಡೆಕಾಯಿ. ಇವಿಷ್ಟನ್ನು ಬೇಯಿಸಿಕೊಳ್ಳಬೇಕು. ನುಗ್ಗೇಕಾಯಿ ಲೇಟಾಗಿ ಬೇಯುವ ಕಾರಣ, ಒಂದು ಪಾತ್ರೆಯಲ್ಲಿ ನುಗ್ಗೆಕಾಯಿಯನ್ನು ಕೊಂಚ ಉಪ್ಪಿನೊಂದಿಗೆ ಮೊದಲೇ ಬೇಯಲು ಇಡಿ, ಅದು ಅರ್ಧ ಬೆಂದ ಬಳಿಕ, ಉಳಿದ ತರಕಾರಿ ಕತ್ತರಿಸಿ ಸೇರಿಸಿ. ಹೀಗೆ ಎಲ್ಲ ತರಕಾರಿಗಳು ತುಂಬಾ ಮೆತ್ತಗಾಗದಂತೆ, ಸರಿಯಾಗಿ ಬೇಯಿಸಿಕೊಳ್ಳಿ.
ಒಂದು ಕಪ್ ತೆಂಗಿನಕಾಯಿ ಅರ್ಧ ಸ್ಪೂನ್ ಜೀರಿಗೆ, ಎರಡು ಹಸಿಮೆಣಸಿನಕಾಯಿ, ಚಿಟಿಕೆ ಅರಿಶಿನ, ಇವಿಷ್ಟನ್ನು ಹಾಕಿ ಮಸಾಲೆ ತಯಾರಿಸಿ. ಇದನ್ನು ಈಗಾಗಲೇ ಬೆಂದ ತರಕಾರಿಗೆ ಹಾಕಿ, ಮಕ್ಕಷ್ಟು ಕುದಿಸಿ. ಕೊನೆಗೆ ಅರ್ಧ ಕಪ್ ಕ್ರೀಮ್ ಹಾಕಿ. ಕ್ರೀಮ್ ಹಾಕದಿದ್ದರೂ ನಡೆಯುತ್ತದೆ. ಕ್ರೀಮ್ ಬಳಸಿದ್ದಲ್ಲಿ, ರುಚಿ ಹೆಚ್ಚುತ್ತದೆ. ಕೊನೆಗೆ ಉಪ್ಪು ಸೇರಿಸಿ, 2 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ಕರಿಬೇವು, ಉದ್ದಿನಬೇಳೆ, ಜೀರಿಗೆ, ಒಣ ಮೆಣಸು, ಸಾಸಿವೆ ಹಾಕಿ ಒಗ್ಗರಣೆ ಕೊಟ್ಟರೆ, ಅವಿಲ್ ರೆಡಿ.
ಡಾರ್ಕ್ ಚಾಕೋಲೇಟ್ ಸೇವನೆ ಎಷ್ಟು ಮಾಡಬೇಕು..? ಇದರಿಂದಾಗುವ ಆರೋಗ್ಯ ಲಾಭವೇನು..?