Friday, October 18, 2024

Latest Posts

ಟೊಮೆಟೋ ಬಳಸದೆನೇ ಟೇಸ್ಟಿ ರೆಡ್ ಕೆಚಪ್ ಮಾಡಬಹುದು ಗೊತ್ತಾ..?

- Advertisement -

ಟೊಮೆಟೋ ಇಲ್ಲದೆಯೂ ಕೂಡ ಟೇಸ್ಟಿಯಾಗಿರುವ ರೆಡ್ ಕೆಚಪ್ ತಯಾರಿಸಬಹುದು. ಹಾಗಾದ್ರೆ ಈ ರೆಡ್ ಕೆಚಪ್ ತಯಾರಿಸೋಕ್ಕೆ ಬೇಕಾಗುವ ಸಾಮಗ್ರಿಗಳೇನು..? ಇದನ್ನು ತಯಾರಿಸೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಒಂದು ಕಪ್ ರೆಡ್ ಮತ್ತು ಎಲ್ಲೋ ಬೆಲ್ ಪೆಪ್ಪರ್, ಒಂದು ಕಪ್ ಸಿಹಿಗುಂಬಳಕಾಯಿ, ಅರ್ಧ ಕಪ್ ಕ್ಯಾರೆಟ್, 2 ಸ್ಪೂನ್ ಬೆಲ್ಲದ ಪುಡಿ, 1 ಸ್ಪೂನ್ ಸ್ಟಾರ್ ಅನೈಸ್ ಪುಡಿ, ಹಿಂಗು, ಒಣ ಶುಂಠಿ ಪುಡಿ, 1 ಸ್ಪೂನ್ ಓಟ್ಸ್ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, 1 ಸ್ಪೂನ್ ನಿಂಬೆರಸ.

ಕ್ಯಾರೆಟ್, ಬೆಲ್‌ ಪೆಪ್ಪರ್, ಸಿಹಿಗುಂಬಳಕಾಯಿಯನ್ನು ಬಾಣಲೆಗೆ ಹಾಕಿ, ಕೊಂಚ ತೆಂಗಿನ ಎಣ್ಣೆ ಹಾಕಿ ಹುರಿಯಿರಿ. ಇದಾದ ಬಳಿಕ ಒಂದು ಕಪ್ ನೀರು ಹಾಕಿ, 5 ನಿಮಿಷ ಕುದಿಸಿ. ಇದು ಬೆಂದಿದೆ ಎಂದಾಗ, ಇದಕ್ಕೆ 2 ಸ್ಪೂನ್ ಬೆಲ್ಲದ ಪುಡಿ, 1ಸ್ಪೂನ್ ಸ್ಟಾರ್ ಅನೈಸ್ ಪುಡಿ, ಚಿಟಿಕೆ ಹಿಂಗು, ಚಿಟಿಕೆ ಒಣ ಶುಂಠಿ ಪುಡಿ ಹಾಕಿ ಮಿಕ್ಸ್ ಮಾಡಿ, ಕೊಂಚ ಬೇಯಿಸಿ. ಇದಾದ ಬಳಿಕ ಈ ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿ ಗ್ರೈಂಡ್ ಮಾಡಿ.

ಈ ಪೇಸ್ಟ್‌ನ್ನು ಮತ್ತೆ ಪ್ಯಾನ್‌ಗೆ ಹಾಕಿ, ಇದಕ್ಕೆ ಒಂದು ಸ್ಪೂನ್ ಓಟ್ಸ್ ಪುಡಿ, ಉಪ್ಪು, ನಿಂಬೆ ರಸ ಹಾಕಿ ಮಿಕ್ಸ್ ಮಾಡಿ. ಮತ್ತೊಮ್ಮೆ ಗ್ರೈಂಡ್ ಮಾಡಿದ್ರೆ, ರೆಡ್ ಕೆಚಪ್ ರೆಡಿ.

- Advertisement -

Latest Posts

Don't Miss