Monday, December 23, 2024

Latest Posts

ಸಿಂಪಲ್ ಆಗಿ ಮಾಡಬಹುದಾದ ತಿಂಡಿ ಈ ಖಾರಾ ಪೊಂಗಲ್‌

- Advertisement -

ಇವತ್ತು ನಾವು ಖಾರಾ ಪೊಂಗಲ್ ಮಾಡುವುದು ಹೇಗೆ ಅಂತಾ ತಿಳಿಯೋಣ..

ಬೇಕಾಗುವ ಸಾಮಗ್ರಿ: ಒಂದು ಕಪ್ ಅಕ್ಕಿ, ಅರ್ಧ ಕಪ್ ಹೆಸರುಬೇಳೆ, ಒಂದು ಕಪ್ ಹಾಲು, ಅರ್ಧ ಕಪ್ ತೆಂಗಿನ ತುರಿ, ಚಿಟಿಕೆ ಇಂಗು, ಚಿಟಿಕೆ ಅರಿಶಿನ, 5 ಚಮಚ ತುಪ್ಪ, ರುಚಿಕೆ ತಕ್ಕಷ್ಟು ಉಪ್ಪು.

ಮಾನ್ಸೂನ್ ಸಮಯದಲ್ಲಿ ನಿಮ್ಮ ಪಾದಗಳನ್ನು ಫಂಗಲ್ ಸೋಂಕಿನಿಂದ ರಕ್ಷಿಸಿ..!

ಮಾಡುವ ವಿಧಾನ: ಹೆಸರುಬೇಳೆ ಮತ್ತು ಅಕ್ಕಿಯನ್ನು ಮಂದ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ತೊಳೆದು ಕುಕ್ಕರ್‌ಗೆ ಹಾಕಿ, ಇದರೊಂದಿಗೆ ತೆಂಗಿನ ತುರಿ, ಹಾಲು, ನೀರು ಹಾಕಿ ಚೆನ್ನಾಗಿ ಬೇಯಿಸಿ. ಈಗ ಒಂದು ಪ್ಯಾನ್‌ನಲ್ಲಿ ತುಪ್ಪ ಹಾಕಿ ಬಿಸಿ ಮಾಡಿ, ನಂತರ ಮೆಣಸು ಮತ್ತು ಜೀರಿಗೆ ಹಾಕಿ ಹುರಿಯಿರಿ. ಬಳಿಕ ಶುಂಠಿ, ಕರಿಬೇವಿನ ಎಲೆ, ಅರಿಶಿನ, ಇಂಗು ಹಾಕಿ ಮಿಕ್ಸ್ ಮಾಡಿ.

ಈ ಹಣ್ಣುಗಳನ್ನು ರಾತ್ರಿ ಹೊತ್ತು ಸೇವಿಸಲೇಬೇಡಿ.. ಇಲ್ಲದಿದ್ದಲ್ಲಿ ಅನಾರೋಗ್ಯ ಬರುವುದು ಖಂಡಿತ..

ಈಗ ಗೋಡಂಬಿ ಹಾಕಿ ಹುರಿಯಿರಿ. ಇದಕ್ಕೆ ಮೊದಲೇ ಬೇಯಿಸಿಟ್ಟುಕೊಂಡ ಅನ್ನ ಮತ್ತು ಬೇಳೆಯನ್ನು ಮಿಕ್ಸ್ ಮಾಡಿ, ಉಪ್ಪು, ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ, ಬೇಯಿಸಿದ್ರೆ ಖಾರಾ ಪೊಂಗಲ್ ರೆಡಿ. ಕಾಯಿ ಚಟ್ನಿ ಮತ್ತು ತುಪ್ಪದೊಂದಿಗೆ ತಿನ್ನಲು ಇದು ರುಚಿಯಾಗುತ್ತದೆ.

- Advertisement -

Latest Posts

Don't Miss