Health Tips: ನೆಲ್ಲಿಕಾಯಿಯನ್ನು ಹಾಗೇ ತಿನ್ನಲು ಯಾರೂ ಇಷ್ಟಪಡುವುದಿಲ್ಲ. ಯಾಕಂದ್ರೆ ಅದು ರುಚಿಯಾಗಿರಲ್ಲ. ಹಾಗಾಗಿ ನೆಲ್ಲಿಕಾಯಿಯ ಸಿಹಿ ಉಪ್ಪಿನಕಾಯಿ, ಖಾರಾ ಉಪ್ಪಿನಕಾಯಿ ಮಾಡಿ ತಿನ್ನುತ್ತಾರೆ. ಆದರೆ ನೆಲ್ಲಿಕಾಯಿಯನ್ನು ಹಸಿಯಾಗೇ ತಿನ್ನುವುದರಿಂದ ಹಲವು ಆರೋಗ್ಯಕರ ಪ್ರಯೋಜನಗಳಿದೆ. ಹಾಗಾದರೆ ಯಾವುದು ಆ ಪ್ರಯೋಜನಗಳು ಅಂತಾ ತಿಳಿಯೋಣ ಬನ್ನಿ..
ಧೀರ್ಘಕಾಲದ ರೋಗಗಳಿಂದ ಮುಕ್ತಿ ಹೊಂದಲು, ನೆಲ್ಲಿಕಾಯಿ ಸಹಕಾರಿಯಾಗಿದೆ. ನೀವು ಚಿಕ್ಕವರಿದ್ದಾಗ, ಎಲ್ಲಾದರೂ ಬಿದ್ದಿರುತ್ತೀರಿ. ಪೆಟ್ಟಾಗಿರುತ್ತದೆ. ತುಂಬ ವರ್ಷಗಳ ಬಳಿಕ, ಅದರ ನೋವು ನಿಮ್ಮನ್ನು ಕಾಡುತ್ತದೆ. ಅಂಥ ನೋವಿನಿಂದ ಮುಕ್ತಿ ಪಡೆಯಬೇಕು ಎಂದಲ್ಲಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಟ್ಟದ ನೆಲ್ಲಿಕಾಯಿ ಸೇವನೆ ಮಾಡಿ. ಇಷ್ಟೇ ಅಲ್ಲದೇ, ನೀವು ಮೂಳೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ, ನಿಮಗೆ ಅದರಿಂದ ಮುಕ್ತಿ ದೊರಕಿಸಲು ನೆಲ್ಲಿಕಾಯಿ ಸಹಾಯ ಮಾಡುತ್ತದೆ.
ಅಪಘಾತವಾಗಿದ್ದಾಗ, ಮೂಳೆ ಮುರಿಯುತ್ತದೆ. ಈ ಮೂಳೆ ಬೇಗ ಜೋಡಣೆಯಾಗಿ, ಆರೋಗ್ಯವಾಗಿರಬೇಕು ಅಂದ್ರೆ ಪ್ರತಿದಿನ ಬೆಟ್ಟದ ನೆಲ್ಲಿಕಾಯಿ ಸೇವನೆ ಮಾಡಬೇಕು. ಗರ್ಭಿಣಿ ಪ್ರತಿದಿನ ನೆಲ್ಲಿಕಾಯಿ ಸೇವನೆ ಮಾಡಿದ್ದಲ್ಲಿ, ತಾಯಿ ಮಗು ಇಬ್ಬರೂ ಗಟ್ಟಿಮುಟ್ಟಾಗಿರುತ್ತಾರೆ. ಏಕೆಂದರೆ ಇದರರಲ್ಲಿ ಕ್ಯಾಲ್ಶಿಯಂ ಸತ್ವ ಹೆಚ್ಚಾಗಿದೆ. ಯಾವ ಪತಿ- ಪತ್ನಿ ದೇಹದಲ್ಲಿ ಕ್ಯಾಲ್ಶಿಯಂ ಅಂಶ ಕಡಿಮೆ ಇರುತ್ತದೆಯೋ, ಅಂಥವರಿಗೆ ಅಂಗವಿಕಲ ಮಕ್ಕಳು ಹುಟ್ಟುತ್ತಾರೆ. ಹಾಗಾಗಿ ಕ್ಯಾಲ್ಶಿಯಂ ಅಂಶ ಹೆಚ್ಚಿರುವ ಆಹಾರವನ್ನು ಪತಿ ಪತ್ನಿ ಸೇವಿಸಬೇಕು. ಅಂಥ ಆಹಾರಗಳಲ್ಲಿ ನೆಲ್ಲಿಕಾಯಿ ಕೂಡ ಒಂದು.
ಇನ್ನು ನೆಲ್ಲಿಕಾಯಿಯಲ್ಲಿ ಕಬ್ಬಿಣದ ಅಂಶ ಹೆಚ್ಚಾದ ಕಾರಣ, ಇದರ ಸೇವನೆಯಿಂದ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಇದರಲ್ಲಿ ರೋಗ ನಿರೋಧಕ ಶಕ್ತಿ ಇದ್ದು, ಸಾಂಕ್ರಾಮಿಕ ರೋಗಗಳಿಂದ ನಿಮ್ಮನ್ನು ದೂರವಿರಿಸಲು ಇದು ಸಹಕಾರಿಯಾಗಿದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತಿಲ್ಲ. ಹೊಟ್ಟೆನೋವಾಗುತ್ತಿದೆ ಎಂದಲ್ಲಿ, ನೀವು ಒಂದು ನೆಲ್ಲಿಕಾಯಿ ಸೇವನೆ ಮಾಡಿ. ಇದು ನಿಮ್ಮ ಜೀರ್ಣಕ್ರಿಯೆ ಸರಿ ಮಾಡಿ, ಮಲಬದ್ಧತೆ ಸಮಸ್ಯೆಯಿಂದಲೂ ದೂರವಿರಿಸುತ್ತದೆ.
ಮಕ್ಕಳು ಹೆಚ್ಚು ಫೋನ್ ಬಳಕೆ ಮಾಡಿದ್ದಲ್ಲಿ ಈ ಅಪಾಯಕಾರಿ ಸಮಸ್ಯೆ ತಪ್ಪಿದ್ದಲ್ಲ..
ಗರ್ಭಿಣಿಯರು ಜೀರಿಗೆ ನೀರು ಕುಡಿಯುವುದರಿಂದ ಎಷ್ಟೆಲ್ಲ ಉತ್ತಮ ಪ್ರಯೋಜನವಿದೆ ಗೊತ್ತಾ..?