Health Tips: ನಮ್ಮ ದೇಹದಲ್ಲಿ ಮುಖ್ಯವಾದ ಭಾಗ ಅಂದರೆ, ಮೂಳೆಗಳು. ಮೂಳೆಗಳು ಗಟ್ಟಿಯಾಗಿದ್ದಾಗಲೇ, ನಾವು ಚೆನ್ನಾಗಿ ನಡೆದಾಡಬಲ್ಲೆವು. ನಮ್ಮ ಕೆಲಸ ನಾವು ಮಾಡಿಕೊಳ್ಳಬಲ್ಲೆವು. ಆರೋಗ್ಯವಾಗಿ ಇರಬಲ್ಲೆವು. ಆದರೆ ಮೂಳೆ ಸವೆತ, ಅಥವಾ ಮೂಳೆ ಮುರಿತ ಉಂಟಾದರೆ, ಆರೋಗ್ಯ ಪೂರ್ತಿಯಾಗಿ ಹಾಳಾಗಿ ಹೋಗುತ್ತದೆ. ಎಷ್ಟೋ ಜನ, ಸಡನ್ನಾಗಿ ಮೂಳೆ ಮುರಿದು, ಹಾಸಿಗೆ ಹಿಡಿದವರೂ ಇದ್ದಾರೆ. ಇಂದು ವೈದ್ಯರು ಮೂಳೆಯ ಆರೋಗ್ಯದ ಬಗ್ಗೆ ವಿವರಿಸಿದ್ದು, ದೇಹದಲ್ಲಿ ಬಹಳ ಮುಖ್ಯವಾದ ಮೂಳೆಯ ಬಗ್ಗೆ ವಿವರಿಸಿದ್ದಾರೆ.
ನಾನು ನೆಟ್ಟಗೆ ನಿಲ್ಲಲು, ಮತ್ತು ಆರಾಮವಾಗಿ ಕುಳಿತುಕೊಳ್ಳಲು, ನಮ್ಮ ಕೆಲಸ ನಾವು ಮಾಡಿಕೊಳ್ಳಲು ಸಾಧ್ಯವಾಗೋದೇ, ನಮ್ಮ ಬೆನ್ನು ಮೂಳೆ ಆರೋಗ್ಯವಾಗಿದ್ದಾಗ. ಹಾಗಾಗಿ ನಮ್ಮ ದೇಹದಲ್ಲಿ ಮುಖ್ಯವಾದ ಪಾತ್ರ ನಿರ್ವಹಿಸೋದು ಅಂದ್ರೆ, ನಮ್ಮ ಬೆನ್ನು ಮೂಳೆ.
ನಾವು ನಡೆದಾಡುವಾಗ, ಕುಳಿತಾಗ, ನಿಂತಾಗ ಎಲ್ಲ ವೇಳೆಯೂ ನಮ್ಮ ಬೆನ್ನು ಮೂಳೆ ಆ್ಯಕ್ಟೀವ್ ಆಗಿರುತ್ತದೆ. ನಾವು ಮಲಗಿದಾಗ ಮಾತ್ರ, ಆ ಬೆನ್ನು ಮೂಳೆಗೆ ರೆಸ್ಟ್ ಸಿಗುತ್ತದೆ. ಆದರೆ ನೀವು ಸರಿಯಾಗಿ ನಿದ್ದೆ ಮಾಡದೇ ಇದ್ದಾಗ, ನಿಮ್ಮ ಬೆನ್ನು ಮೂಳೆಯ ಮೇಲೆ ಒತ್ತಡ ಹೆಚ್ಚಾಗುತ್ತದೆ. ಹಾಗೆ ಆಗಬಾರದು. ನಿಮ್ಮ ಬೆನ್ನುಮೂಳೆ ಆರೋಗ್ಯವಾಗಿರಬೇಕು ಅಂದ್ರೆ, ನೀವು ಹೊತ್ತಿಗೆ ಸರಿಯಾಗಿ ನಿದ್ರಿಸಬೇಕು.
ಇನ್ನು ನಾವು ಬಳಸುವ ಹಾಸಿಗೆ, ದಿಂಬು, ಬೆಡ್ ಎಲ್ಲವೂ ಪದೇ ಪದೇ ಚೇಂಜ್ ಮಾಡಲೇಬೇಕಾಗುತ್ತದೆ. ಅಲ್ಲದೇ, ಮಲಗುವ ಸಮಯದಲ್ಲೂ ಏರುಪೇರಾಗುತ್ತದೆ. ಹಾಗಾಗಿ ಬೆನ್ನುಮೂಳೆ ಮೇಲೆ ಒತ್ತಡ ಹೆಚ್ಚಾಗುತ್ತದೆ. ಹಾಗಾಗಿ ಇಂದಿನ ಕಾಲದಲ್ಲಿ ಹೆಚ್ಚಿನವರಿಗೆ ಬೆನ್ನು ನೋವು ಬರುತ್ತದೆ. ಈ ಕಾರಣಕ್ಕೆ ಸರಿಯಾದ ಆಹಾರ ಸೇವಿಸಬೇಕು. ಸರಿಯಾದ ಸಮಯಕ್ಕೆ ನಿದ್ರಿಸಬೇಕು ಅೞತಾ ಹೇಳುವುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.