Tuesday, October 14, 2025

Latest Posts

ಗಂಡನಿಗೆ ಹೆಂಡದ ಚಿಂತೆ.. ಕುಡಿಯೋಕೆ ಹಣ ನೀಡದ್ದಕ್ಕೆ ಹೆಂಡತಿಯನ್ನೇ ಕೊಲೆಗೈದ ಪತಿ

- Advertisement -

Rayachuru News: ರಾಯಚೂರು: ಕುಡಿಯುವುದಕ್ಕೆ ಹಣ ಕೊಡಲಿಲ್ಲ ಎಂದು ಪತಿಯೇ ಪತ್ನಿಯನ್ನು ಹತ್ಯೆ ಮಾಡಿದ ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಚಿಕ್ಕ ಉಪ್ಪೇರಿಯಲ್ಲಿ ನಡೆದಿದೆ. ಗಂಡ ಬಸವರಾಜ್‌ನಿಂದ ಸುನಿತಾ (28) ಹತ್ಯೆಯಾಗಿದ್ದಾಳೆ.

ಬಸವರಾಜ್ ಮತ್ತು ಸುನಿತಾ ನಡುವೆ ಜಮೀನಿನಲ್ಲಿ ಬೆಳೆಗೆ ನೀರು ಕಟ್ಟುವಾಗ ಗಲಾಟೆ ನಡೆದಿದೆ. ಈ ವೇಳೆ ಬಸವರಾಜ್ ಕುಡಿಯುವುದಕ್ಕೆ ಹಣ ನೀಡುವಂತೆ ಪತ್ನಿಗೆ ಕಿರುಕುಳ ನೀಡಿದ್ದಾನೆ. ನಿತ್ಯವೂ ಹಣಕ್ಕಾಗಿ ಪೀಡಿಸುತ್ತಿದ್ದ ಬಸವರಾಜ್ ನಿನ್ನೆ ಸಂಜೆಯೂ ಕೂಡ ಹಣಕ್ಕಾಗಿ ಗಲಾಟೆ ಮಾಡಿದ್ದಾನೆ. ಆ ವೇಳೆ ಪಕ್ಕದಲ್ಲಿದ್ದ ಸಲಿಕೆಯಿಂದ ಸುನಿತಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ಭೀಕರತೆಗೆ ಸುನಿತಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

ಸುನಿತಾ ಮತ್ತು ಬಸವರಾಜ್ ಪ್ರೀತಿಸಿ ಮದುವೆಯಾಗಿದ್ದರು. 2015 ರಲ್ಲಿ ಲಿಂಗಸ್ಗೂರು ಸಬ್ ರಿಜಿಸ್ಟ್ರಾರ್ ನಲ್ಲಿ ಲವ್ ಮ್ಯಾರೇಜ್ ಆಗಿದ್ದರು. ಮದುವೆಯಾಗಿ‌ ಕೆಲ ದಿನಗಳ ಕಾಲ ಮಾತ್ರ ಇಬ್ಬರು ಸುಖ ಸಂಸಾರ ನಡೆಸುತ್ತಿದ್ದರು. ಬಳಿಕ ಪತಿ ಬಸವರಾಜ ಕುಡಿತಕ್ಕೆ ದಾಸನಾಗಿದ್ದನು. ಕುಡಿತದ ದಾಸನಾಗಿದ್ದ ಬಸವರಾಜ್ ಪತ್ನಿಯ ಜೀವವನ್ನೇ ತೆಗೆದಿದ್ದಾನೆ. ಸದ್ಯ ಸ್ಥಳಕ್ಕೆ ಲಿಂಗಸುಗೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕ ಟಿವಿ ಮುಖ್ಯಸ್ಥರಾದ ಶಿವು ಬೆಸಗರಹಳ್ಳಿ ಅವರಿಗೆ ‘ಮಾಧ್ಯಮ ರತ್ನ’ ಪ್ರಶಸ್ತಿ

ರಜತ್ ಒತ್ತಡಕ್ಕೆ ಮಣಿದ ಜೋಶಿ: ಕೇಂದ್ರ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಉಳ್ಳಾಗಡ್ಡಿಮಠ

‘ಸರ್ಕಾರವನ್ನು ಕೈಗೊಂಬೆಯಂತೆ ಡಿಕೆಶಿ ಆಡಿಸುತ್ತಿದ್ದಾರೆ. ಜನರೇ ಇವರಿಗೆ ತಕ್ಕ ಉತ್ತರ ನೀಡುತ್ತಾರೆ’

- Advertisement -

Latest Posts

Don't Miss