Wednesday, November 29, 2023

Latest Posts

ಆಗಸ್ಟ್ 9ಕ್ಕೆ ಕುರುಕ್ಷೇತ್ರ ರಿಲೀಸ್- ತೆರೆ ಮೇಲೆ ಡಿ-ಬಾಸ್ ಕಮಾಲ್

- Advertisement -

ಬೆಂಗಳೂರು: ಬಹುನಿರೀಕ್ಷಿತ ಚಾಲೆಂಜಿಂಗ್ ಸ್ಟಾರ್ ಅಭಿನಯಸಿರೋ ಪೌರಾಣಿಕ ಚಿತ್ರ ಕುರುಕ್ಷೇತ್ರ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಆಗಸ್ಟ್ 9, 2019ರಂದು ಜಗತ್ತಿನಾದ್ಯಂತ 5 ಭಾಷೆಗಳಲ್ಲಿ ಬಿಡಗಡೆಯಾಗಲಿದ್ದು ಅಭಿಮಾನಿಗಳಲ್ಲಿ ಸಂತಸ ತಂದಿದೆ.

ರೆಬೆಲ್ ಸ್ಟಾರ್ ಅಂಬರೀಷ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕ್ರೇಜಿಸ್ಟಾರ್ ರವಿಚಂದ್ರನ್, ನಿಖಿಲ್, ಶಶಿಕುಮಾರ್, ಅರ್ಜುನ್ ಸರ್ಜಾ, ಸೋನು ಸೂದ್ ತಾರಾಗಣ ಹೊಂದಿರೋ ಈ ಹೈ ಬಜೆಟ್ ಚಿತ್ರ ಕುರುಕ್ಷೇತ್ರ. ಜೂನ್ ಮೊದಲನೇ ವಾರ ಈ ಚಿತ್ರದ ಆಡಿಯೋ ಸಾಂಗ್ಸ್ ರಿಲೀಸ್ ಆಗಲಿದ್ದು ಈಗಾಗಲೇ ಭರ್ಜರಿ ಬೆಲೆಗೆ ಹಿಂದಿ ಡಬ್ಬಿಂಗ್ ರೈಟ್ಸ್ ಕೂಡ ಸೇಲ್ ಆಗಿದೆಯಂತೆ. 

ಈ ಚಿತ್ರವನ್ನುಅತ್ಯದ್ಭುತವಾಗಿಸಲು 3 ಡಿ ಎಫೆಕ್ಟ್ ಬಳಸಲಾಗಿದ್ದು, ಫ್ರೇಮ್ ಟು ಫ್ರೇಮ್ ವರ್ಕ್ ಮಾಡಲಾಗಿದೆ. ಹೀಗಾಗಿ ಸಿನಿಮಾ ಮೇಕಿಂಗ್ ಗೆ ಸಾಕಷ್ಟು ಸಮಯ ತೆಗೆದುಕೊಂಡಿದೆ ಅಂತ ಚಿತ್ರ ತಂಡ ಹೇಳಿದೆ.

ಮುನಿರತ್ನ ನಿರ್ಮಾಣದ ಈ ಸಿನಿಮಾಕ್ಕೆ ನಾಗಣ್ಣ ಮತ್ತು ಚಿತ್ರಸಾಹಿತಿ ವಿ ನಾಗೇಂದ್ರ ಪ್ರಸಾದ್ ಜೊತೆಗೂಡಿ ನಿರ್ದೇಶನ ಮಾಡಿದ್ದಾರೆ. ಒಟ್ನಲ್ಲಿ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟುಹಾಕಿರೋ ಕುರುಕ್ಷೇತ್ರ ಬಿಡುಗಡೆ ನಂತರ ದಾಖಲೆ ಬರಿಯಲಿ ಅನ್ನೋ ಮಾತು ಅಭಿಮಾನಿ ವಲಯದಲ್ಲಿ ಕೇಳಿಬರುತ್ತಿದೆ.

- Advertisement -

Latest Posts

Don't Miss