ಕೆಲವರಿಗೆ ಸಿಹಿ ತಿಂಡಿ ತಿನ್ನಬೇಕು ಅಂತಾ ಅನ್ನಿಸುತ್ತೆ. ಆದ್ರೆ ಸಿಹಿ ತಿಂದ್ರೆ ಎಲ್ಲಿ ಶುಗರ್ ಬರತ್ತೋ ಅನ್ನೋ ಭಯ. ಇನ್ನು ಶುಗರ್ ಇದ್ದವರಿಗೂ ಸಿಹಿ ತಿನ್ನೋಕ್ಕೆ ಆಸೆ. ಆದ್ರೆ ಎಲ್ಲಿ ಶುಗರ್ ಹೆಚ್ಚಾಗತ್ತೆ ಅನ್ನೋ ಭಯ.. ಹಾಗಾಗಿ ನಾವಿಂದು ಆರೋಗ್ಯಕರ ಮತ್ತು ರುಚಿಕರ ಲಡ್ಡು ರೆಸಿಪಿ ತಂದಿದ್ದೇವೆ. ಈ ಲಡ್ಡುವಿನಲ್ಲಿ ಬೆಲ್ಲ, ಸಕ್ಕರೆ, ಜೇನುತುಪ್ಪ ಏನನ್ನೂ ಬಳಸಲಾಗಿಲ್ಲ. ಹಾಗಾದ್ರೆ ಈ ಲಡ್ಡು ತಯಾರಿಸೋದು ಹೇಗೆ..? ಈ ಲಡ್ಡು ತಯಾರಿಸಲು ಬೇಕಾಗುವ ಸಾಮಗ್ರಿಗಳೇನು ಅನ್ನೋದನ್ನ ನೋಡೋಣ ಬನ್ನಿ..
ಒಂದು ಕಪ್ ಒಣಕೊಬ್ಬರಿ ತುರಿ. ಅರ್ಧ ಕಪ್ ಒಣ ದ್ರಾಕ್ಷಿ ಮತ್ತು ಕಾಲು ಕಪ್ ನೆನೆಸಿದ ಗೇರುಬಿಜ, ಅಂದ್ರೆ ಕಾಜು. ಇವಿಷ್ಟು ಹೆಲ್ದಿ ಲಡ್ಡು ತಯಾರಿಸೋಕ್ಕೆ ಬೇಕಾಗಿರುವ ಸಾಮಗ್ರಿ. ಒಂದು ಮಿಕ್ಸಿ ಜಾರ್‌ಗೆ ತುರಿದ ಒಣ ಕೊಬ್ಬರಿ, ದ್ರಾಕ್ಷಿ ಮತ್ತು ನೆನೆಸಿದ ಗೇರುಬೀಜ ಹಾಕಿ ತರಿ ತರಿಯಾಗಿ ರುಬ್ಬಿ. ಇದಕ್ಕೆ ನೀರು ಬಳಸಕೂಡದು.
ಈಗ ರೆಡಿಯಾದ ಪುಡಿಯಿಂದ ಲಡ್ಡು ತಯಾರಿಸಿ, ಕೊಬ್ಬರಿ ತುರಿಯಲ್ಲಿ ಅದನ್ನ ಕವರ್ ಮಾಡಿದ್ರೆ, ಹೆಲ್ದಿ ಟೇಸ್ಟಿ ಲಡ್ಡು ರೆಡಿ. ನೀವು ಯಾವುದೇ ಡ್ರೈಫ್ರೂಟ್ಸ್ ತಿನ್ನುವುದಿದ್ದರೂ, ಅದನ್ನ ನೆನೆಸಿ ತಿನ್ನುವುದು, ಆರೋಗ್ಯಕ್ಕೆ ಒಳ್ಳೆಯದು. ನೀವು ಈ ಲಡ್ಡುವಿನಲ್ಲಿ ಬಾದಾಮಿ ನೆನೆಸಿ ಬಳಸಬಹುದು. ಪಿಸ್ತಾ, ಖರ್ಜೂರ ಕೂಡ ಬಳಸಬಹುದು.