Monday, June 24, 2024

Latest Posts

Health Tips: ಮಹಿಳೆಯರೇ ಎಚ್ಚರ.. 45 ವರ್ಷಗಳ ನಂತರ ಈ ರೀತಿ ಮಾಡುವುದು ಉತ್ತಮ..

- Advertisement -

Health Tips: ಆರೋಗ್ಯ ಅನ್ನೋದು ಎಷ್ಟು ಮುಖ್ಯ ಅಂತಾ ಎಲ್ಲರಿಗೂ ಗೊತ್ತುವುದೇ, ಆರೋಗ್ಯ ಹದಗೆಟ್ಟಾಗ. ನಾನು ಆರೋಗ್ಯಕರ ಆಹಾರ ಸೇವನೆ ಮಾಡಬೇಕಿತ್ತು. ಚೆನ್ನಾಗಿ ನೀರು ಕುಡಿಯಬೇಕಿತ್ತು. ಆಗ ನನಗೆ ಈ ಸಮಸ್ಯೆ ಬರುತ್ತಿರಲಿಲ್ಲ. ಛೇ ನಾನು ನಿರ್ಲಕ್ಷ್ಯ ಮಾಡಿಬಿಟ್ಟೆ ಅಂತಾ ಅನ್ನಿಸುವುದೇ, ಆಸ್ಪತ್ರೆ ಬೆಡ್ ಮೇಲೆ ಬಿದ್ದಾಗ. ಅದರಲ್ಲೂ ಹೆಚ್ಚಿನ ಸಂಖ್ಯೆಯ ಹೆಣ್ಣು ಮಕ್ಕಳು ಈ ತಪ್ಪು ಮಾಡುತ್ತಾರೆ.

ಅತ್ತೆ- ಮಾವ, ಪತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವ ಮಹಿಳೆಯರು ತಮ್ಮ ಆರೋಗ್ಯವನ್ನು ಕಡೆಗಣಿಸುತ್ತಾರೆ. ಆಗಲೇ ಆರೋಗ್ಯ ಕೈಕೊಡುತ್ತದೆ. ಹಾಗಾಗಬಾರದು ಅಂದ್ರೆ ಏನು ಮಾಡಬೇಕು ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ..

ಹೆಣ್ಣು ಮಕ್ಕಳು 45 ವರ್ಷ ಕಳೆದ ಬಳಿಕ ಅಥವಾ ಸ್ತನದಲ್ಲಿ ನೋವು ಕಾಣಿಸಿಕೊಂಡಾಗ ಮಾಡಬೇಕಾದ ಮೊದಲ ಕೆಲಸವೆಂದರೆ, ಮುಜುಗರ ಪಡದೇ, ಮೊದಲು ಸ್ತನದಲ್ಲಿ ಆಗುವ ನೋವಿನ ಬಗ್ಗೆ ವೈದ್ಯರನ್ನು ಭೇಟಿಯಾಗಿ, ಪರೀಕ್ಷಿಸಿಕೊಳ್ಳಬೇಕು. ಏಕೆಂದರೆ, ಸ್ತನ ಕ್ಯಾನ್ಸರ್ ಬಂದಾಗ, ಎಚ್ಚೆತ್ತುಕೊಳ್ಳದಿದ್ದರೆ, ಅದು ಕೆಲ ದಿನಗಳಲ್ಲಿ ನಿಮ್ಮ ಜೀವಕ್ಕೆ ಹಾನಿ ಮಾಡುವ ಮಟ್ಟಿಗೆ ಬೆಳೆಯುತ್ತದೆ.

ಬಳಿಕ ನೀವು ಚಿಕಿತ್ಸೆ ಪಡೆದರೂ ಏನೂ ಪ್ರಯೋಜನವಾಗುವುದಿಲ್ಲ. ಹಾಗಾಗಿ ಶುರುವಿನಲ್ಲೇ, ಚಿಕಿತ್ಸೆ ಪಡೆಯಬೇಕು.

- Advertisement -

Latest Posts

Don't Miss