Friday, November 22, 2024

Latest Posts

ಭಾರತೀಯ ಪದ್ಧತಿಯ ಹಿಂದಿರುವ ವಿಜ್ಞಾನದ ಬಗ್ಗೆ ತಿಳಿಯಿರಿ..- ಭಾಗ1

- Advertisement -

ನಮ್ಮ ಹಿರಿಯರು ಮಾಡಿರುವ ಪದ್ಧತಿಯನ್ನ ಅನುಸರಿಸಿದ್ರೆ, ನಮ್ಮ ಜೀವನ ಉತ್ತಮವಾಗಿರತ್ತೆ. ಆರೋಗ್ಯ ಕೂಡಾ ಚೆನ್ನಾಗಿರತ್ತೆ. ಆದ್ರೆ ಹಲವರು ಹಿಂದಿನ ಕಾಲದ ಪದ್ಧತಿಯನ್ನ ಗಾಳಿಗೆ ತೂರಿ, ಮಾಡರ್ನ್ ಜಮಾನದಲ್ಲಿ ಬದುಕಲು ಪ್ರಯತ್ನಿಸುತ್ತಿದ್ದಾರೆ. ಅದರಲ್ಲೂ ಮಂಗಲಸೂತ್ರ, ಸಿಂಧೂರ, ಬಳೆ ಇವನ್ನೆಲ್ಲ ಯಾಕೆ ಹಾಕಬೇಕು ಅನ್ನೋದು ಹಲವರಿಗೆ ಗೊತ್ತಿಲ್ಲ. ನಾವಿಂದು ಭಾರತೀಯ ಪದ್ಧತಿಗಳ ಹಿಂದಿರುವ ವಿಜ್ಞಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಹೇಳಲಿದ್ದೇವೆ..

ಮೊದಲನೇಯ ಪದ್ಧತಿ ಅರಳಿ ಮರವನ್ನು ಸುತ್ತುವ ಪದ್ಧತಿ. ವಿವಾಹಿತೆಯರು ಕೆಲ ಆಯ್ದ ದಿನಗಳಲ್ಲಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರಳಿ ಮರವನ್ನು ಸುತ್ತಿ, ಅದಕ್ಕೆ ದಾರ ಸುತ್ತುವುದು ಅಥವಾ ಪೂಜೆ ಮಾಡುವುದನ್ನು ನೀವು ನೋಡಿರುತ್ತೀರಿ. ಈ ಪದ್ಧತಿಯ ಹಿಂದೆ ಒಂದು ವೈಜ್ಞಾನಿಕ ಕಾರಣಗಳಿದೆ. ಅದೇನಂದ್ರೆ, ಅರಳಿ ಮರ ಬೆಳಿಗ್ಗೆ ನೀವು ಆಕ್ಸಿಜನ್ ಸೇವನೆಯಿಂದ ಮಹಿಳೆಯರ ಮುಟ್ಟಿನ ಸಮಸ್ಯೆಗೆ ಪರಿಹಾರ ಸಿಗತ್ತೆ. ಗರ್ಭ ಧರಿಸಲು ಈ ಆಕ್ಸಿಜನ್ ಸಹಾಯ ಮಾಡುತ್ತೆ. ಹಾರ್ಮೋನಲ್ ಬ್ಯಾಲೆನ್ಸ್ ಮಾಡುವ ಶಕ್ತಿ ಈ ಅರಳಿಮರದಿಂದ ಬರುವ ಆಕ್ಸಿಜನ್‌ಗೆ ಇದೆ. ಹಾಗಾಗಿ ಈ ಪದ್ಧತಿಯನ್ನ ಮಾಡಲಾಗಿದೆ.

ಇನ್ನು ಯಾಗ ಯಜ್ಞ ಮಾಡುವಾಗ, ಯಜ್ಞ ಕುಂಡಕ್ಕೆ ತುಪ್ಪ ಹಾಕುವುದನ್ನು ನೀವು ನೋಡಿದ್ದೀರಿ. ಇದನ್ನು ಹಾಕಲು ಕಾರಣವೇನೆಂದರೆ, ಯಜ್ಞಕ್ಕೆ ತುಪ್ಪ ಹಾಕಿದಾಗ, ಅದರಿಂದ ಬರುವ ಹೊಗೆಯಿಂದ ಕೀಟಾಣುಗಳು ನಾಶವಾಗುತ್ತದೆ. ವಾತಾವರಣ ಆರೋಗ್ಯಕರವಾಗತ್ತೆ. ಹೋಮ ಹವನದಲ್ಲಿ ಭಾಗಿಯಾದವರ ಆರೋಗ್ಯ ಕೂಡ ವೃದ್ಧಿಸುತ್ತದೆ. ಹಾಗಾಗಿ ಯಜ್ಞ ಮಾಡುವಾಗ ತುಪ್ಪ, ಕರ್ಪೂರ ಸೇರಿ ಹಲವು ವಸ್ತುಗಳನ್ನ ಬಳಸಲಾಗತ್ತೆ.

ನವರಾತ್ರಿಯಲ್ಲಿ ಉಪವಾಸ ಮಾಡುವುದು ಯಾಕೆ ಅಂತಾ ಅಂದ್ರೆ, ಇದು ವಾತಾವರಣ ಬದಲಾಗುವ ವೇಳೆ. ಮಳೆಗಾಲ ಮುಗಿದು, ಚಳಿಗಾಲಕ್ಕೆ ಹೋಗುವ ಸಮಯ. ಹಾಗಾಗಿ ನವರಾತ್ರಿಯ ಸಮಯದಲ್ಲಿ ಉಪವಾಸ ಮಾಡಿ, ಆರೋಗ್ಯಕರ ತಿಂಡಿಯನ್ನ, ಸಾತ್ವಿಕ ಊಟವನ್ನು ಮಾಡುವುದರಿಂದ, ನಮ್ಮ ಆರೋಗ್ಯ ಚೆನ್ನಾಗಿರತ್ತೆ. ಕೆಲವರಿಗೆ ಚಳಿಗಾಲ ಶುರುವಾದಂತೆ. ಆರೋಗ್ಯದಲ್ಲಿ ಏರುಪೇರಾಗಕ್ಕೆ ಶುರುವಾಗತ್ತೆ. ಹಾಗೆ ಆಗಬಾರದು ಅಂದ್ರೆ, ನವರಾತ್ರಿಯಲ್ಲಿ ಒಪ್ಪತ್ತು ಉಪವಾಸವಾದ್ರೂ ಮಾಡಬೇಕು.

ಪಾಪಗಳನ್ನು ಮಾಡಿದ ಊರ್ವಶಿ ಅಪ್ಸರೆಯಾಗಲು ಕಾರಣವೇನು..?

ಅರ್ಜುನನ ರುಂಡವನ್ನು ಮುಂಡದಿಂದ ಬೇರ್ಪಡಿಸಿದವರು ಯಾರು ಗೊತ್ತೇ..?

ದೂರ್ವಾಸ ಮುನಿಗಳ ವಿಚಿತ್ರ ಬೇಡಿಕೆಯನ್ನ ಶ್ರೀರಾಮ ಹೇಗೆ ನೆರವೇರಿಸಿದ ಗೊತ್ತಾ..? ಭಾಗ 1

- Advertisement -

Latest Posts

Don't Miss