ನಮ್ಮ ಹಿರಿಯರು ಮಾಡಿರುವ ಪದ್ಧತಿಯನ್ನ ಅನುಸರಿಸಿದ್ರೆ, ನಮ್ಮ ಜೀವನ ಉತ್ತಮವಾಗಿರತ್ತೆ. ಆರೋಗ್ಯ ಕೂಡಾ ಚೆನ್ನಾಗಿರತ್ತೆ. ಅದರಲ್ಲೂ ಮಂಗಲಸೂತ್ರ, ಸಿಂಧೂರ, ಬಳೆ ಇವನ್ನೆಲ್ಲ ಯಾಕೆ ಹಾಕಬೇಕು ಅನ್ನೋದು ಹಲವರಿಗೆ ಗೊತ್ತಿಲ್ಲ. ನಾವಿಂದು ಭಾರತೀಯ ಪದ್ಧತಿಗಳ ಹಿಂದಿರುವ ವಿಜ್ಞಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಹೇಳಲಿದ್ದೇವೆ..
ಊಟ ಮಾಡುವಾಗ ಕೆಲವರು ದೇವರನ್ನು ನೆನೆದು ಊಟ ಮಾಡುತ್ತಾರೆ. ಈ ವೇಳೆ ದೇವರನ್ನು ಪ್ರಾರ್ಥಿಸುವುದರಿಂದ, ನಮಗೆ ಏಕಾಗೃತೆ ಬರತ್ತೆ. ಇದಾದ ಬಳಿಕ ಊಟ ಮಾಡಿದ್ರೆ, ಆ ಆಹಾರ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮವಾಗತ್ತೆ ಅಂತಾ ಹೇಳಲಾಗಿದೆ. ಇನ್ನು ಹಿಂದೂಗಳು ತಿಲಕವಿಡಲು ಕಾರಣವೇನೆಂದ್ರೆ, ನಮ್ಮ ದೇಹದಲ್ಲಿರುವ ಚಕ್ರನಾಡಿಗಳು ನಮ್ಮ ಹಣೆಗೆ ಕನೆಕ್ಟ್ ಆಗಿರುತ್ತದೆ. ಏಕಾಗೃತೆಯನ್ನು ಇಡುವ ಚಕ್ರವನ್ನು ಆಜ್ಞಾ ಚಕ್ರವೆನ್ನುತ್ತೇವೆ.. ಅಲ್ಲಿ ತಿಲಕವನ್ನು ಹಚ್ಚಲಾಗತ್ತೆ. ಇದರಿಂದ ದೇಹದಲ್ಲಿ ಪಾಸಿಟಿವ್ ಎನರ್ಜಿ ಬರತ್ತೆ.
ಮದುವೆ ವೇಳೆ ಮಧುಮಗಳು ಸಿಂಗಾರಗೊಳ್ಳುತ್ತಾಳೆ. ಈ ವೇಳೆ ಆಕೆ 16 ರೀತಿಯ ವಸ್ತುವನ್ನು ಬಳಸಿ ಶೃಂಗಾರ ಮಾಡಿಕೊಳ್ಳಬೇಕು ಎನ್ನಲಾಗತ್ತೆ. ಇದನ್ನು ಷೋಡಷ ಶೃಂಗಾರ ಎನ್ನುತ್ತಾರೆ. ಸೋಳಾ ಸಿಂಗಾರ ಅಂತಲೂ ಕರೆಯುತ್ತಾರೆ. ಇದರಲ್ಲಿ ಬಿಂದಿ, ಬೊಟ್ಟು, ಕಾಡಿಗೆ, ಕಿವಿಯೋಲೆ, ಮೂಗುತಿ, ಸರ, ಗಾಜಿನ ಬಳೆ, ಡಾಬು, ಗೆಜ್ಜೆ, ಕಾಲುಂಗುರ, ಉಂಗುರ, ಸೀರೆ, ವಂಕಿ, ಮೆಹಂದಿ, ಹೂವು, ತಾಳಿ ಇವೆಲ್ಲವನ್ನೂ ಧರಿಸುತ್ತಾಳೆ. ಇವೆಲ್ಲದಕ್ಕೂ ಪದ್ಧತಿಗಳಿದೆ.
ಕಾಲುಂಗುರ ಹಾಕುವುದ್ಯಾಕಂದ್ರೆ, ಹೆಬ್ಬೆರಳ ಪಕ್ಕದಲ್ಲಿರುವ ಬೆರಳಿಗೆ, ಸುಷುಮ್ನ ನಾಡಿ ಸೇರುತ್ತದೆ. ಇದು ಗರ್ಭಕ್ಕೆ ಸಂಬಂಧಿಸಿದ ನರ. ಯಾವ ವಿವಾಹಿತೆ ಕಾಲುಂಗುರ ಧರಿಸುತ್ತಾಳೋ, ಅವಳಿಗೆ ಮುಟ್ಟಿನ ತೊಂದರೆ ಕಡಿಮೆಯಾಗುತ್ತದೆ. ಗರ್ಭ ಧರಿಸಲು ಕಷ್ಟವಾಗುವುದಿಲ್ಲ. ಹಾಗಾಗಿ ಕಾಲುಂಗುರ ಹಾಕುತ್ತಾರೆ. ಇನ್ನು ಗಾಜಿನ ಬಳೆ ಹಾಕುವುದರಿಂದ, ನಾಡಿಯ ಆರೋಗ್ಯ ಉತ್ತಮವಾಗಿರುತ್ತದೆ. ತಾಳಿಗೂ ಹೃದಯ ಆರೋಗ್ಯಕ್ಕೂ ಸಂಬಂಧವಿದೆ. ಹೂವು ಮುಡಿಯುವುದರಿಂದ ಕೂದಲಿನ ಆರೋಗ್ಯ ಅಭಿವೃದ್ಧಿಯಾಗತ್ತೆ. ಹೀಗಾಗಿ ಇವನ್ನೆಲ್ಲ ಧರಿಸಲಾಗತ್ತೆ.
ದೂರ್ವಾಸ ಮುನಿಗಳ ವಿಚಿತ್ರ ಬೇಡಿಕೆಯನ್ನ ಶ್ರೀರಾಮ ಹೇಗೆ ನೆರವೇರಿಸಿದ ಗೊತ್ತಾ..? ಭಾಗ 1