Friday, November 22, 2024

Latest Posts

ಶ್ರೀಕೃಷ್ಣ ಹೇಳಿದ 5 ಜೀವನ ಪಾಠಗಳನ್ನು ನೀವೂ ಕಲಿಯಿರಿ..

- Advertisement -

Spiritual: ಶ್ರೀಕೃಷ್ಣನೆಂದರೆ ಬರೀ ದೇವರಲ್ಲ. ಅವನು ಜೀವನ ಪಾಠ ಹೇಳಿಕೊಟ್ಟ ಗುರು. ಎಲ್ಲವೂ ಇದ್ದರೂ, ಎಲ್ಲದರಿಂದ ದೂರ ಉಳಿದು, ಯಾವುದೂ ತನ್ನದಲ್ಲವೆಂದು, ಮಂದಹಾಸ ಬೀರಿ ಕುಳಿತ ಸುಂದರ. ಅಂದ, ಚಂದ ಎಲ್ಲವೂ ಇತ್ತು. ಬೇಕಾದಷ್ಟು ಮಡದಿಯರಿದ್ದರು. ಹೆತ್ತವರು, ಸಾಕಿದವರೂ ಇದ್ದರು. ಆದರೆ ಹೆತ್ತವರು ಹತ್ತಿರವಿರಲಿಲ್ಲ. ಪ್ರೀತಿಸಿದ ರಾಧೆಯೇ ಸಿಗಲಿಲ್ಲ. ಕೊನೆಗೆ ತಾ ಹುಟ್ಟಿ ಬೆಳೆದ ಊರು ಮುಳುಗಿ ಹೋಯಿತು. ಹೀಗೆ ಎಲ್ಲವೂ ಇದ್ದು, ಇಲ್ಲದಂತೆ ಬದುಕಿದ ಶ್ರೀಕೃಷ್ಣ ನಮಗೆ 5 ಜೀವನ ಪಾಠವನ್ನು ಹೇಳಿದ್ದಾನೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಮೊದಲನೇಯ ಪಾಠ, ಹಿರಿಯರಿಗೆ ಗೌರವಿಸುವುದು. ನಾವು ಹಿರಿಯರನ್ನು ಗೌರವಿಸಬೇಕು. ಅದರಲ್ಲೂ ಜನ್ಮ ಕೊಟ್ಟ ತಂದೆ ತಾಯಿಯ ಬಗ್ಗೆ, ನಮ್ಮನ್ನು ಸಾಕಿ ಸಲಹಿದವರ ಬಗ್ಗೆ ನಮಗೆ ಹೆಚ್ಚು ಗೌರವವಿರಬೇಕು ಅಂತಾನೆ ಶ್ರೀಕೃಷ್ಣ. ಶ್ರೀಕೃಷ್ಣನಿಗೆ ಹೆತ್ತ ತಂದೆ ತಾಯಿ ಮತ್ತು ಸಾಕು ತಂದೆ ತಾಯಿ ಇಬ್ಬರೂ ಇದ್ದರು. ಕೃಷ್ಣ ಎಂದಿಗೂ ಅವರಲ್ಲಿ ಬೇಧ ಭಾವ ತೋರಲಿಲ್ಲ. ಇಬ್ಬರಿಗೂ ಸಮಾನ ಗೌರವ ನೀಡಿದರು. ಈ ಮೂಲಕ ನಮ್ಮ ಲಾಲನೆ ಪಾಲನೆ ಮಾಡಿದವರನ್ನು ನಾವು ಗೌರವಿಸಬೇಕೆಂದು ಶ್ರೀಕೃಷ್ಣ ಜಗತ್ತಿಗೆ ಸಾರಿದನು.

ಎರಡನೇಯ ಪಾಠ, ಸ್ನೇಹಿತರನ್ನು ಪ್ರೀತಿಸುವುದು. ನೀವು ಹಲವು ಭಾವಚಿತ್ರಗಳಲ್ಲಿ ಶ್ರೀಕೃಷ್ಣನನ್ನು ಅವನ ಸ್ನೇಹಿತರೊಂದಿಗೆ ನೋಡಿರುತ್ತೀರಿ. ಅಲ್ಲದೇ, ಶ್ರೀಕೃಷ್ಣ ಮತ್ತು ಕುಚೇಲನ ಸ್ನೇಹದ ಬಗ್ಗೆ ಕೇಳಿರುತ್ತೀರಿ. ಈ ಮೂಲಕ ಶ್ರೀಕೃಷ್ಣ ಜಗತ್ತಿಗೆ ಹೇಳಿದ ಪಾಠವೇನೆಂದರೆ, ಸ್ನೇಹಿತನಾದವರು ಶ್ರೀಮಂತನಿರಲಿ, ಬಡವನಿರಲಿ ಅವನಿಗೆ ನೀವು ಪ್ರೀತಿ, ಕಾಳಜಿ ತೋರುವುದು ಮುಖ್ಯ.

ಮೂರನೇಯ ಪಾಠ, ಸಂಗಾತಿಯ ಬಗ್ಗೆ ಕಾಳಜಿ ಮಾಡುವುದು. ಶ್ರೀಕೃಷ್ಣನಿಗೆ ರಾಧೆ ಪ್ರೀತಿಸಿದ ಹೆಣ್ಣಾಗಿದ್ದರೆ, 16 ಸಾವಿರ ಪತ್ನಿಯರಿದ್ದರು. ಅದರಲ್ಲಿ 8 ಮುಖ್ಯ ಪತ್ನಿಯರೂ ಇದ್ದರು. ಆದರೆ ಶ್ರೀಕೃಷ್ಣ, ತನ್ನ ಲೀಲೆಗಳ ಮೂಲಕ, ಎಲ್ಲರ ಬಳಿಯೂ ಸದಾ ಇದ್ದು, ಸಂಗಾತಿಯನ್ನು ಪ್ರೀತಿ, ಕಾಳಜಿಯಿಂದ ನೋಡಿಕೊಂಡ. ಎಂದಿಗೂ ಬೇಧಭಾವ ಮಾಡಲಿಲ್ಲ. ಈ ಮೂಲಕ ಜೀವನ ಸಂಗಾತಿಗೆ ಸದಾ ಪ್ರೀತಿ, ಕಾಳಜಿ ತೋರಿದ್ದಲ್ಲಿ, ಜೀವನ ಸುಖಮಯವಾಗಿರುತ್ತದೆ ಎಂದು ಶ್ರೀಕೃಷ್ಣ ಸಾರಿದ್ದಾನೆ.

ನಾಲ್ಕನೇಯ ಪಾಠ, ಜೀವನವೆಂಬ ಹೋರಾಟದಲ್ಲಿ ಗೆಲ್ಲುವುದು. ನಾವು ಹುಟ್ಟಿದಾಗಿನಿಂದ, ಸಾಯುವವರೆಗೂ ಸಾಗಿಸುವ ಜೀವನವೇ ಹೋರಾಟ. ಈ ಹೋರಾಟದಲ್ಲಿ ಹಲವು ಕಷ್ಟ, ನಷ್ಟಗಳು ಸಂಭವಿಸುತ್ತದೆ. ಅಂಥ ಕಷ್ಟಗಳನ್ನು ಗಟ್ಟಿ ಮನಸ್ಸು ಮಾಡಿ, ಎದುರಿಸಬೇಕು.

ಐದನೇಯ ಪಾಠ, ನಮ್ಮನ್ನು ನಾವು ಅರ್ಥ ಮಾಡಿಕೊಂಡು, ತಾಳ್ಮೆಯಿಂದ ಬದುಕುವುದು. ಶ್ರೀಕೃಷ್ಣನ ಪ್ರಕಾರ, ಇಲ್ಲಿ ಯಾವುದೂ ನಮ್ಮದಲ್ಲ. ದೇವರ ಆಜ್ಞೆಯ ಪ್ರಕಾರ, ನಾವು ಹುಟ್ಟಿದ್ದೇವೆ. ಅವನಿಗೆ ಬೇಕಾದಾಗ, ಅವನ ಬಳಿ ಹೋಗುತ್ತೇವೆ. ಇದರ ಮಧ್ಯದಲ್ಲಿ ನನ್ನದು, ನಾನು, ನನ್ನಿಂದ ಎನ್ನುವ ಅಹಂಕಾರ ಬಿಟ್ಟು, ಇದ್ಯಾವುದು ನನ್ನದಲ್ಲವೆಂದು ಬದುಕಿ ಎನ್ನುತ್ತಾನೆ ಶ್ರೀಕೃಷ್ಣ.

ಇಂಥ ಗುಣವಿದ್ದರೆ ಮಾತ್ರ ನೀವು ಶ್ರೀಮಂತರಾಗಲು ಸಾಧ್ಯ ಅಂತಾರೆ ಚಾಣಕ್ಯರು

ಇಂಥವರ ಸಂಗ ಮಾಡಬಾರದು ಅಂತಾರೆ ಚಾಣಕ್ಯರು

ಆಹಾರ, ಬಡತನ, ಸ್ತ್ರೀ ಬಗ್ಗೆ ಚಾಣಕ್ಯರು ಹೀಗೆ ಹೇಳಿದ್ದಾರೆ ನೋಡಿ..

- Advertisement -

Latest Posts

Don't Miss