Thursday, December 12, 2024

Latest Posts

ಎಲ್ಲರೊಂದಿಗಿದ್ದು ಏಕಾಂಗಿಯಾಗಿ ಇರೋದನ್ನ ಕಲಿಯಿರಿ..

- Advertisement -

ನಾವು ಈ ಮೊದಲೇ ನಿಮಗೆ ಏಕಾಂಗಿತನ ಎಷ್ಟು ಕೆಟ್ಟದ್ದು ಅಂತಾ ಹೇಳಿದ್ವಿ. ಯಾಕಂದ್ರೆ ಏಕಾಂಗಿತನದಿಂದ ನಮಗಾಗುವ ನಷ್ಟವೇನಂದ್ರೆ, ನಾವು ಸತ್ತರೂ ಯಾರೂ ನಮ್ಮನ್ನು ಕೇಳೋದಿಲ್ಲಾ. ಹಾಗಾಗಿ ಆತ್ಮೀಯರೊಂದಿಗೆ ಸ್ನೇಹದಿಂದಿರಿ ಅಂತಾ ಹೇಳಿದ್ವಿ. ಆದ್ರೆ ಇವತ್ತು ಏಕಾಂಗಿಯಾಗಿರುವುದರಿಂದ ಎಷ್ಟು ಲಾಭ ಅಂತಾ ಹೇಳಲಿದ್ದೇವೆ. ಅದು ಎಂಥ ಏಕಾಂಗಿತನ ಅಂದ್ರೆ ಎಲ್ಲರೊಂದಿಗೂ ಇದ್ದು ಏಕಾಂಗಿಯಾಗಿರುವುದು. ಹಾಗಾದ್ರೆ ಈ ಮಾತಿನ ಅರ್ಥವೇನು ಅಂತಾ ತಿಳಿಯೋಣ ಬನ್ನಿ..

ಓರ್ವ ಯುವಕ ಪ್ರತಿದಿನ ತನ್ನ ಪತ್ನಿ, ಮಕ್ಕಳು, ತಂದೆ ತಾಯಿ, ಆಫೀಸಿನಲ್ಲಿರುವ ಜನರೊಂದಿಗೆ ಜಗಳವಾಡುತ್ತಿದ್ದ. ಆಫೀಸಿನಲ್ಲಿ ಕೆಲವರನ್ನ ತನ್ನು ಶತ್ರು ಮಾಡಿಕೊಂಡಿದ್ದ. ಅವನೊಮ್ಮೆ ಓರ್ವ ಸಾಧುವಿನ ಬಳಿ ಹೋಗಿ, ನಾನು ಯಾವಾಗಲೂ ಎಲ್ಲರೊಂದಿಗೂ ಜಗಳವಾಡುತ್ತೇನೆ. ನನಗೆ ಸಮಾಧಾನದಿಂದಿರಲು ಬರುವುದೇ ಇಲ್ಲ. ಹೀಗಾಗಿ ನನಗೆ ಶತ್ರುಗಳೂ ಹುಟ್ಟಿಕೊಂಡಿದ್ದಾರೆ. ಯಾರೂ ನನ್ನನ್ನು ಪ್ರೀತಿಸುವುದಿಲ್ಲ. ನನಗೊಂದು ಉತ್ತಮ ಸಲಹೆ ಕೊಡಿ ಎಂದು ಕೇಳುತ್ತಾನೆ.

ಇದು ಓರ್ವ ಭಿಕ್ಷುಕ ಕೋಟ್ಯಾಧೀಶನಾದ ಕಥೆ.. ಭಾಗ 1

ಅದಕ್ಕೆ ಸಾಧುಗಳು, ನೀನು ಒಂದು ತಿಂಗಳು ನಿನ್ನ ಮನೆ, ಆಫೀಸು ಬಿಟ್ಟು ದೂರವಿರು. ದೂರವಿದ್ದೇ ಆಫೀಸಿನ ಕೆಲಸ ಮಾಡಲು ಅನುಮತಿ ಕೇಳು. ಆಮೇಲೆ ನನ್ನ ಬಳಿ ಬಾ ಎನ್ನುತ್ತಾನೆ. ಆದೀತು ಎಂದು ಹೇಳಿದ ಯುವಕ ಹಾಗೆ ಮಾಡಲು, ದೂರದ ಊರಿಗೆ ಹೋಗುತ್ತಾನೆ. ಅಲ್ಲೊಂದು ಮನೆ ಬಾಡಿಗೆ ಪಡೆಯುತ್ತಾನೆ. ಒಂದೆರಡು ದಿನ ಶಾಂತವಾಗಿ, ಖುಷಿ ಖುಷಿಯಾಗಿ ಇರುತ್ತಾನೆ. ಆದ್ರೆ ನಾಲ್ಕನೇ ದಿನಕ್ಕೆ ಮಕ್ಕಳು ನೆನಪಿಗೆ ಬರುತ್ತಾರೆ. ಅವರನ್ನು ಮರೆಯಲು ಪ್ರಯತ್ನಿಸುತ್ತಾನೆ. ಮರುದಿನ ಪತ್ನಿ, ತಂದೆ ತಾಯಿ ನೆನಪಿಗೆ ಬರುತ್ತಾರೆ. ಹೇಗೋ ಆ ದಿನ ಕಳೆದು ಬಿಡುತ್ತಾನೆ. ಹೀಗೆ ಒಂದು ವಾರ ಕಷ್ಟ ಪಟ್ಟು ಎಲ್ಲರನ್ನೂ ಮರೆಯಲು ಪ್ರಯತ್ನಿಸಿ, ಸೋತು ಹೋಗುತ್ತಾನೆ.

ನಂತರ ಸಾಧುವಿನ ಬಳಿ ಹೋಗುತ್ತಾನೆ. ಸಾಧು, ನೀವು ನನಗೆ ಒಂದು ತಿಂಗಳು ಎಲ್ಲರಿಂದ ದೂರವಿರಿ ಎಂದು ಹೇಳಿದ್ದಿರಿ. ಆದ್ರೆ ನನಗೆ ಒಂದು ವಾರವೂ ಅವರನ್ನೆಲ್ಲ ಬಿಟ್ಟು ಬದುಕಲು ಸಾಧ್ಯವಾಗುತ್ತಿಲ್ಲ. ಪತ್ನಿ, ಮಕ್ಕಳು, ಅಪ್ಪ ಅಮ್ಮ ಎಲ್ಲರೂ ನೆನಪಿಗೆ ಬರುತ್ತಿದ್ದಾರೆ. ನಾನು ಏಕಾಂಗಿಯಾಗಿದ್ದರೂ, ಶಾಂತವಾಗಿ ಇರಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾನೆ. ಅದಕ್ಕೆ ಸಾಧು ನೀನೆಲ್ಲಿ ಏಕಾಂಗಿಯಾಗಿದ್ದೆ. ನೀನು ಎಲ್ಲರನ್ನೂ ನಿನ್ನ ಜೊತೆ ಕರೆದುಕೊಂಡು ಹೋಗಿದ್ದಿಯಲ್ಲ ಎನ್ನುತ್ತಾರೆ.

ಇದು ಓರ್ವ ಭಿಕ್ಷುಕ ಕೋಟ್ಯಾಧೀಶನಾದ ಕಥೆ.. ಭಾಗ 2

ಅದಕ್ಕೆ ಯುವಕ, ಇಲ್ಲಾ ಇಲ್ಲಾ ನಾನು ಒಬ್ಬನೇ ದೂರದೂರಿಗೆ ಹೋಗಿದ್ದೆ. ಮನೆ ಜನರೆಲ್ಲ ಮನೆಯಲ್ಲೇ ಇದ್ದಾರೆ ಎನ್ನುತ್ತಾನೆ. ಅದಕ್ಕೆ ಸಾಧು, ಹೌದು ಮನೆ ಜನರೆಲ್ಲ ಮನೆಯಲ್ಲೇ ಇದ್ದಾರೆ. ಆಫೀಸಿನವರು ಆಫೀಸಿನಲ್ಲೇ ಇದ್ದಾರೆ. ಶತ್ರುಗಳೆಲ್ಲ ಅಲ್ಲಲ್ಲೇ ಇದ್ದಾರೆ. ಆದ್ರೆ ನೀನು ಮಾತ್ರ ನಿನ್ನ ಮನಸ್ಸಿನ ಮೂಲಕ ಅವರೆಲ್ಲರನ್ನ ನಿನ್ನ ಜೊತೆ ಕರೆದೊಯ್ದಿದ್ದಿ. ಅದಕ್ಕೆ ನಿನಗೆ ಕಷ್ಟವಾಯಿತು ಎನ್ನುತ್ತಾರೆ.

ಇದರ ಅರ್ಥವೇನೆಂದರೆ, ಯುವಕ ಏಕಾಂಗಿಯಾಗಿದ್ದು, ಎಲ್ಲರೊಂದಿಗಿದ್ದ. ಹೀಗಿದ್ದಾಗ, ಬದುಕುವುದು ಕಷ್ಟವಾಗುತ್ತದೆ. ಹಾಗಾಗಿ ಎಲ್ಲರೊಂದಿಗಿದ್ದು, ಏಕಾಂಗಿಯಾಗಿರುವುದನ್ನು ಕಲಿಯಬೇಕು. ನಿಮ್ಮ ಖುಷಿಯನ್ನು ನೀವು ಕಂಡುಕೊಳ್ಳಬೇಕು. ಯಾರಿಲ್ಲದಿದ್ದರೂ ನಾ ಬದುಕಬಲ್ಲೆ ಅನ್ನೋ ಗುಣ ನಿಮ್ಮಲ್ಲಿರಬೇಕು.

- Advertisement -

Latest Posts

Don't Miss