ಯಾವ ಮನುಷ್ಯನಿಗೆ ತಾನೇ ನೆಮ್ಮದಿ, ಸುಖ, ಶಾಂತಿ, ಆರ್ಥಿಕ ಲಾಭ ಬೇಡ ಹೇಳಿ.. ಪ್ರತಿಯೊಬ್ಬ ಮನುಷ್ಯನು ದುಡಿಯುವುದು ಇದೇ ಕಾರಣಕ್ಕೆ. ಆದ್ರೆ ನಾವು ಮಾಡುವ ಕೆಲ ವಿಚಾರಗಳೇ ನಮ್ಮ ಆರ್ಥಿಕ ಪರಿಸ್ಥಿತಿ ಹಾಳಾಗಲು, ನೆಮ್ಮದಿ ಹಾಳಾಗಲು ಕಾರಣ ಅಂತಾ ಹೇಳಿದ್ದಾರೆ ಚಾಣಕ್ಯರು. ಹಾಗಾದ್ರೆ ಯಾವುದು ಅಂಥ ಆಲೋಚನೆ ಅಂತಾ ತಿಳಿಯೋಣ ಬನ್ನಿ..
ಒಬ್ಬರಿಗೆ ಗೌರವ ಕೊಡಬಾರದು ಅನ್ನುವ ಆಲೋಚನೆ ಬಿಡಿ.. ಯಾರ ಜೊತೆಗಾದರೂ ಗೌರವದಿಂದಿರಲು ಒಂದು ಲಿಮಿಟ್ ಇರುತ್ತದೆ. ಅವರು ನಿಮಗೆ ಮಿತಿ ಮೀರಿ ಅಗೌರವ ತೋರಿದರೆ ಮಾತ್ರ, ನೀವು ಎದುರು ನಿಲ್ಲಬೇಕೆ ಹೊರತು. ಸಣ್ಣ ಪುಟ್ಟ ಕಾರಣಕ್ಕೆ ನಿಮ್ಮ ಎದುರಿನವರಿಗೆ ಅಥವಾ ಹಿರಿಯರಿಗೆ ನೀವು ಅಗೌರವ ತೋರಬಾರದು. ಹಾಗೆ ಮಾಡಿದರೆ, ನಿಮ್ಮನ್ನು ಯಾರೂ ಗೌರವಿಸುವುದಿಲ್ಲ.
ಕನಸಿನಲ್ಲಿ ಗೋವು ಕಾಣಿಸುವುದು ಶುಭವೋ ..? ಅಶುಭವೋ..?
ಬೇಗ ಏಳದ ಆಲೋಚನೆ ಬಿಡಿ.. ಪ್ರತಿದಿನ ಆದಷ್ಟು ಬೇಗ ಏಳಿ. 6 ಗಂಟೆಗಾದರೂ ನೀವು ನಿಮ್ಮ ದಿನ ಶುರುಮಾಡಿ. ಇದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುವುದಲ್ಲದೇ, ನೀವು ಬೇಗ ಬೇಗ ನಿಮ್ಮ ಕೆಲಸ ಕಾರ್ಯಗಳನ್ನು ಮುಗಿಸಬಹುದು. ಅಥವಾ ನೀವು ಬೆಳಿಗ್ಗೆ ಬೇಗ ಎದ್ದು ಯೋಗ, ವ್ಯಾಯಾಮಗಳನ್ನು ಮಾಡಬಹುದು. ನೀವು ಬೇಗ ಏಳುವುದರಿಂದ ಇಡೀ ದಿನ ಚೈತನ್ಯದಾಯಕವಾಗಿ ಇರಬಹುದು.
ದಾನ ಮಾಡಬಾರದೆಂಬ ಆಲೋಚನೆ ಬಿಡಿ.. ದಾನ ಮಾಡುವುದು ಒಂದು ಉತ್ತಮ ಕೆಲಸ. ನಾವು ತಿನ್ನುವ ಅನ್ನದಲ್ಲಿ ಕೊಂಚ ಭಾಗವಾದರೂ ದಾನ ಮಾಡಬೇಕು. ಅದು ಮನುಷ್ಯರಿಗೆ ಅಂತಲ್ಲ. ಪ್ರಾಣಿ ಪಕ್ಷಿಗಳಿಗೂ ನೀವು ಆಹಾರವನ್ನು ನೀಡಬಹುದು. ಗರುಡ ಪುರಾಣದ ಪ್ರಕಾರ, ಅನ್ನದಾನ ಪುಣ್ಯ ಕಾರ್ಯವಾಗಿದೆ. ಇದರಿಂದ ನಿಮ್ಮ ಮನಸ್ಸಿಗೆ ಸಂತೋಷ ಸಿಗುತ್ತದೆ. ನೆಮ್ಮದಿ ಸಿಗುತ್ತದೆ.
ಸೂರ್ಯಾಸ್ತದ ಬಳಿಕ ಈ 4 ವಸ್ತುವನ್ನು ಎಂದಿಗೂ ದಾನ ಮಾಡಬೇಡಿ..
ಒಬ್ಬರ ಕಷ್ಟವನ್ನು ನಿರ್ಲಕ್ಷಿಸುವ ಆಲೋಚನೆ ಬಿಡಿ.. ಕಷ್ಟ ಎಲ್ಲರಿಗೂ ಬರುತ್ತದೆ. ಆದ್ರೆ ಕೆಲವರಿಗೆ ಅದನ್ನ ತಮ್ಮವರ ಬಳಿ ಹೇಳಿಕೊಂಡಾಗ ಕೊಂಚ ಸಮಾಧಾನವಾಗುತ್ತದೆ. ಹಾಗಾಗಿ ನಿಮ್ಮವರ್ಯಾರಾದರೂ ನಿಮ್ಮ ಬಳಿ ತಮ್ಮ ಕಷ್ಟವನ್ನು ಹೇಳಿಕೊಂಡರೆ, ಅದನ್ನು ನಿರ್ಲಕ್ಷಿಸಬೇಡಿ. ಅವರ ಕಷ್ಟಕ್ಕೆ ಸ್ಪಂದಿಸಿ. ಹಾಗೆ ಸ್ಪಂದಿಸಿದಾಗ, ಅವರಿಗಾಗುವ ಖುಷಿ, ಸಮಾಧಾನವೇ ನಿಮಗೆ ನೆಮ್ಮದಿ ತಂದುಕೊಡುತ್ತದೆ.
ತಾಳ್ಮೆ ಕಳೆದುಕೊಳ್ಳದ ಆಲೋಚನೆ ಬಿಡಿ.. ಯಾರು ತಾಳ್ಮೆ ಕಳೆದುಕೊಳ್ಳುತ್ತಾರೋ, ಅವರೆಂದೂ ನೆಮ್ಮದಿಯಾಗಿರಲು ಸಾಧ್ಯವೇ ಇಲ್ಲ. ಯಾಕಂದ್ರೆ ಅವರ ಪಾಲಿಗೆ ಎಲ್ಲರೂ ಕೆಟ್ಟವರಂತೆ ಕಾಣುತ್ತಾರೆ. ಹಾಗಾಗಿ ಅವರಿಗೆ ಯಾರನ್ನು ಕಂಡರೂ ಕೋಪ ಬರುತ್ತದೆ. ಹಾಗಾಗಿ ತಾಳ್ಮೆಯಿಂದ ವರ್ತಿಸಿ. ಆಗ ಎಲ್ಲರೂ ನಿಮ್ಮೊಂದಿಗೆ ಒಳ್ಳೆ ರೀತಿಯಲ್ಲಿರುತ್ತಾರೆ. ಮತ್ತು ಇದರಿಂದ ನೀವು ನೆಮ್ಮದಿಯಾಗಿರಬಹುದು.