Movie News: ಬಾಲಿವುಡ್ ನಟಿ ಕಂಗನಾ ರಾಣಾವತ್ ಇತ್ತೀಚೆಗೆ ತುಂಬಾ ಸುದ್ದಿಯಾಗುತ್ತಿದ್ದಾರೆ. ಈ ಮೊದಲು ಬಾಲಿವುಡ್‌ನಲ್ಲಿ ನಡೆಯುತ್ತಿದ್ದ ಪಾರ್ಷಿಯಾಲಿಟಿ ಬಗ್ಗೆ ನಟಿ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಹೃತಿಕ್ ವಿಷಯ, ಅದಾದ ಬಳಿಕ ರಾಮಮಂದಿರಕ್ಕೆ ಸಪೋರ್ಟ್ ಮಾಡುವ ವಿಚಾರ, ನಂತರದಲ್ಲಿ ಕಂಗನಾ ವಿದೇಶಿ ಯುವಕನ ಜೊತೆ ಕಾಣಿಸಿಕೊಂಡಾಗ, ಇವರೇ ಕಂಗನಾ ವಿವಾಹವಾಗುವ ಹುಡುಗ ಅಂತಾ ಗಾಸಿಪ್ ಹಬ್ಬಿ ಬಿಟ್ಟಿತ್ತು.
ಆದರೂ ಕಂಗನಾ ಈಸ್ ಮೈ ಟ್ರಿಪ್ ಸಂಸ್ಥಾಪಕ ನಿಶಾಂತ್ ಪಿಟ್ಟಿ ಜೊತೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗೆ ಕಾಣಿಸಿಕೊಂಡಾಗ, ಇವರೇ ಇರಬಹುದಾ ಕಂಗನಾ ಬಾಯ್‌ಫ್ರೆಂಡ್ ಅಂತಾ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಆದರೆ ಇವೆಲ್ಲದಕ್ಕೂ ಫುಲ್‌ಸ್ಟಾಪ್ ಇಟ್ಟಿರುವ ಕಂಗನಾ, ನನಗೂ ಬಾಯ್‌ಫ್ರೆಂಡ್ ಇದ್ದಾನೆ, ಸಮಯ ಬಂದಾಗ, ಅವನು ಯಾರು ಎಂದು ಹೇಳುವೆ ಎಂದು ಹೇಳಿದ್ದಾರೆ.
ಇನ್ನು ಕಂಗನಾ ನಿಶಾಂತ್ ಜೊತೆ ಅಯೋಧ್ಯೆಯಲ್ಲಿ ಕಾಣಿಸಿಕೊಂಡಿದ್ದು, ಇದಾದ ಬಳಿಕ ಎಲ್ಲೆಲ್ಲೂ ಇವರದ್ದೇ ಸುದ್ದಿಯಾಗಿದೆ. ಕಂಗನಾ ನಿಶಾಂತ್ ನಡುವೆ ಏನೋ ನಡೆಯುತ್ತಿದೆ ಎಂದು ಗಾಸಿಪ್ ಹಬ್ಬಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂಗನಾ, ನಿಶಾಂತ್ ಅವರಿಗೆ ಈಗಾಗಲೇ ಮದುವೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಹೇಳಿದರೆ, ಅವರ ಸಂಸಾರ ಹಾಳಾಗುತ್ತದೆ. ನಾನು ಬೇರೆಯವರ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ. ಆ ಬಗ್ಗೆ ಹೇಳಲು ನನಗೆ ಸ್ವಲ್ಪ ಸಮಯ ಕೊಡಿ ಎಂದು ಕಂಗನಾ ರಿಕ್ವೆಸ್ಟ್ ಮಾಡಿದ್ದಾರೆ.
Bigg Boss season 17: ಫಿನಾಲೆ ವಾರದಲ್ಲಿ ಎಲಿಮಿನೇಟ್ ಆದ ಪತಿ: ಬೇಸರ ವ್ಯಕ್ತಪಡಿಸಿದ ಅಂಕಿತಾ
ನಿಮ್ಮ ಜೀವನಕ್ಕೆ ನಾನೇ ಶನಿ ಆಗಿದ್ದೆ, ಆಗಿರ್ತೀನಿ, ಆಗಿರ್ಬೇಕು: ಕಾರ್ತಿಕ್‌ಗೆ ಸಂಗೀತಾ ಪ್ರತಿಕ್ರಿಯೆ




