Spiritual: ಭಾರತದಲ್ಲಿ ಇರುವಷ್ಟು ಹಿಂದೂ ದೇವಸ್ಥಾನವೂ ಜಗತ್ತಿನಲ್ಲಿ ಮತ್ತೆಲ್ಲೂ ಇಲ್ಲ. ಹಾಗಾಗಿಯೇ ಭಾರತವನ್ನು ಹಿಂದೂಸ್ತಾನ ಅಂತಲೂ ಕರೆಯುತ್ತಾರೆ. ಕೆಲವು ದೇವಸ್ಥಾನಗಳು ಶಿಲ್ಪಕಲೆಗೆ ಹೆಸರಾಗಿದ್ದರೆ, ಇನ್ನು ಕೆಲ ದೇವಸ್ಥಾನಗಳು ಪವಾಡಕ್ಕೆ ಹೆಸರಾಗಿದೆ. ಮತ್ತೆ ಕೆಲವು ಶ್ರೀಮಂತಿಕೆಗೆ ಹೆಸರು ವಾಸಿಯಾದ ಪ್ರಾಚೀನ ದೇವಸ್ಥಾನಗಳು ಭಾರತದಲ್ಲಿದೆ. ಇಂದು ನಾವು ಪ್ರತೀ 12 ವರ್ಷಕ್ಕೊಮ್ಮೆ ಮಿಂಚಿನ ದಾಳಿಗೆ ಒಳಗಾಗುವ ದೇವಸ್ಥಾನದ ಬಗ್ಗೆ ತಿಳಿಸಲಿದ್ದೇವೆ.
ಹಿಮಾಚಲ ಪ್ರದೇಶದ ಕುಲು ಕಣಿವೆಯ ಕಾಶ್ವರಿ ಎಂಬ ಹಳ್ಳಿಯಲ್ಲಿ ಮಹಾದೇವನ ದೇವಸ್ಥಾನವಿದೆ. ಇದೇ ದೇವಸ್ಥಾನಕ್ಕೆ 12 ವರ್ಷಗಳಿಗೊಮ್ಮೆ ಮಿಂಚು ಅಪ್ಪಳಿಸುತ್ತದೆ. ಹಾಗಾಗಿ ಈ ದೇವಸ್ಥಾನವನ್ನು ಬಿಜಲಿ ಮಹಾದೇವ ದೇವಸ್ಥಾನವೆಂದು ಕರೆಯುತ್ತಾರೆ. ಹಿಂದಿಯಲ್ಲಿ ಬಿಜಲಿ ಎಂದರೆ, ಮಿಂಚು ಎಂದರ್ಥ.
ಈ ದೇವಸ್ಥಾನದಲ್ಲಿರುವ ಶಿವಲಿಂಗಕ್ಕೆ ಮಿಂಚು ಅಪ್ಪಳಿಸುತ್ತದೆ. ಹೀಗೆ ಆದಾಗ ಶಿವಲಿಂಗ ಒಡೆಯುತ್ತದೆ. ಆಗ ಅಲ್ಲಿನ ಅರ್ಚಕರು ಪ್ರತೀ ಬಾರಿಯಂತೆ ಪದ್ಧತಿ ಪ್ರಕಾರ, ಬೆಣ್ಣೆ ಹಿಟ್ಟು ಸೇರಿ ಇನ್ನಷ್ಟು ವಸ್ತುಗಳನ್ನು ಬಳಸಿ, ಶಿವಲಿಂಗವನ್ನು ಜೋಡಿಸುತ್ತಾರೆ. ಈ ಘಟನೆ ನಡೆದು ಕೆಲ ದಿನಗಳು ಆದ ಬಳಿಕ, ಶಿವಲಿಂಗ ಮೊದಲಿನಂತೆ ಆಗುತ್ತದೆ. ಇದರ ಹಿಂದಿರುವ ಪವಾಡದ ಬಗ್ಗೆ ಇನ್ನೂವರೆಗೂ ಯಾರಿಗೂ ಕಂಡು ಹಿಡಿಯಲು ಆಗಲಿಲ್ಲ.
ಇನ್ನೊಂದು ವಿಚಿತ್ರ ಎಂದರೆ, ಈ ದೇವಸ್ಥಾನಕ್ಕೆ ಮಿಂಚಿನಿಂದ ಏನೂ ಹಾನಿಯಾಗುವುದಿಲ್ಲ. ಆದರೆ ಶಿವಲಿಂಗ ಮಾತ್ರ ಒಡೆಯುತ್ತದೆ. ಶಿವನ ಅಣತಿಯಂತೆ ಇಂದ್ರದೇವ ಇಲ್ಲಿ 12 ವರ್ಷಗಳಿಗೊಮ್ಮೆ ಮಿಂಚನ್ನು ಸೃಷ್ಟಿಸುತ್ತಾನೆಂದು ಇಲ್ಲಿನ ಜನರು ನಂಬಿದ್ದಾರೆ.
Janmashtami Special: ಶ್ರೀಕೃಷ್ಣನನ್ನು ಗುರುವಾಯೂರಪ್ಪ ಎಂದು ಪೂಜಿಸಲು ಕಾರಣವೇನು..?
Janmashtami Special: ಶ್ರೀಕೃಷ್ಣನಿಗೆ 56 ರೀತಿಯ ಭೋಜನವನ್ನೇಕೆ ನೈವೇದ್ಯ ಮಾಡುತ್ತಾರೆ..?