Political News: ಸಾಮಾನ್ಯವಾಗಿ ನಮ್ಮನ್ನು ಆಳುವ ಜನಪ್ರತಿನಿಧಿಗಳ ಆದಾಯ ಎಷ್ಟಿರುತ್ತದೆ.? ಅವರು ಇಷ್ಟೊಂದು ಐಶಾರಾಮಿ ಬದುಕನ್ನು ಸಾಗಿಸುತ್ತಾರೆಂದರೆ ಅವರ ಆಸ್ತಿ ಎಷ್ಟಿರಬಹುದು ಎನ್ನುವ ಪ್ರಶ್ನೆ ನಿಮ್ಮದಾಗಿದ್ದರೇ ಅದಕ್ಕೆ ಇದೀಗ ಉತ್ತರ ದೊರೆತಿದೆ. ಈ ಕುರಿತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮಸ್ ಅಂದರೆ ಎಡಿಆರ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ದೇಶದ ಶ್ರೀಮಂತರ ಶಾಸಕರು ಯಾರಾಗಿದ್ದಾರೆ ಎಂಬ ವಿಚಾರ ಬಯಲಾಗಿದೆ.
ಅಂದಹಾಗೆ ಈ ವರದಿಯಲ್ಲಿ ಮಹಾರಾಷ್ಟ್ರದ ಬಿಜೆಪಿ ಶಾಸಕ ಮೊದಲ ಸ್ಥಾನವನ್ನು ಪಡೆದಿದ್ದಾರೆ. ಪೂರ್ವ ಮುಂಬೈ ಕ್ಷೇತ್ರದ ಬಿಜೆಪಿ ಶಾಸಕ ಪರಾಗ್ ಶಾ ಅವರು ಭಾರತದ ಅತ್ಯಂತ ಸಿರಿವಂತ ಶಾಸಕರಾಗಿದ್ದಾರೆ ಎಂದು ಎಡಿಆರ್ ಹೇಳಿದೆ. ಅಲ್ಲದೆ ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಇನ್ನೂ ಪಶ್ಚಿಮ ಬಂಗಾಳದ ಸಿಂಧೂ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ನಿರ್ಮಲ್ ಕುಮಾರ್ ಧಾರಾ ಅವರ ಘೋಷಿತ ಆಸ್ತಿ ಕೇವಲ 1,700 ರೂಪಾಯಿಗಳಷ್ಟಿದೆ ಹೀಗಾಗಿ ಅವರು ಈ ಪಟ್ಟಿಯ ಕೊನೆಯಲ್ಲಿದ್ದಾರೆ.
ಇನ್ನೂ ಸುಮಾರು 3,400 ಕೋಟಿ ರೂಪಾಯಿಗಳ ಮೌಲ್ಯದ ಒಟ್ಟು ಆಸ್ತಿಯನ್ನು ಪರಾಗ್ ಶಾ ಹೊಂದಿದ್ದಾರೆ. ಅಲ್ಲದೆ ಈ ಎಡಿಆರ್ ವರದಿಯು ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸುವ ಮುನ್ನ ಸಲ್ಲಿಸಿದ್ದ ಅಫಿಡವಿಟ್‌ನ ಸಂಶೋಧನೆ ಹಾಗೂ ವಿಶ್ಲೇಷಣೆಯನ್ನು ಒಳಗೊಂಡಿದೆ. ವರದಿಯಲ್ಲಿ ಪ್ರಮುಖವಾಗಿ ದೇಶದ ಎಲ್ಲ 28 ಶಾಸಕರು, 3 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 4092 ಶಾಸಕರು ಸೇರಿದ್ದರು. ರಾಜ್ಯದ ಅಲ್ಲದೆ ಕನಕಪುರದ ಶಾಸಕರಾಗಿ, ದೇಶದ ಎರಡನೇ ಶ್ರೀಮಂತ ಎಂಎಲ್‌ಎ ಎನ್ನಿಸಿಕೊಂಡಿರುವ ಡಿಕೆ ಶಿವಕುಮಾರ್ ಅವರ ಆಸ್ತಿ ಮೌಲ್ಯ 1,413 ಕೋಟಿ ರೂಪಾಯಿಗಳಷ್ಟಿದೆ.
ಅಂದಹಾಗೆ ರಾಜ್ಯದ ಮೂವರು ರಾಜಕಾರಣಿಗಳು ಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿರುವುದು ಗಮನಾರ್ಹವಾಗಿದೆ. ಯಾವ ರಾಜ್ಯದ ಶಾಸಕರು ಎಷ್ಟು ಆಸ್ತಿಯ ಮೌಲ್ಯವನ್ನು ಹೊಂದಿದ್ದಾರೆ ಎನ್ನವುದನ್ನು ಗಮನಿಸಿದಾಗ ಮಹಾರಾಷ್ಟ್ರ ಬಿಜೆಪಿಯ ಶಾಸಕ ಪರಾಗ್ ಶಾ 3,400 ಕೋಟಿ ರೂಪಾಯಿ, ಕರ್ನಾಟಕದ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ 1,413 ಕೋಟಿ ರೂಪಾಯಿಗಲೂ, ಕರ್ನಾಟಕದ ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿ 1,267 ಕೋಟಿ ರೂಪಾಯಿಗಳು, ಕರ್ನಾಟಕದ ಕಾಂಗ್ರೆಸ್ ಶಾಸಕ ಪ್ರಿಯಾಕೃಷ್ಣ 1,156 ಕೋಟಿ ರೂಪಾಯಿಗಳಷ್ಟಿದ್ದರೆ. ಇನ್ನೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ದು 931 ಕೋಟಿ ರೂಪಾಯಿಗಳು, ಆಂಧ್ರಪ್ರದೇಶದ ಟಿಡಿಪಿ ಶಾಸಕ ಪಿ.ನಾರಾಯಣ 824 ಕೋಟಿ ರೂಪಾಯಿಗಳಷ್ಟಿದೆ. ಇನ್ನೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ವೈಎಸ್‌ಆರ್ ಕಾಂಗ್ರೆಸ್ ವೈ.ಎಸ್.ಜಗನ್ ಮೋಹನ್ ರೆಡ್ಡಿ 757 ಕೋಟಿ ರೂಪಾಯಿಗಳು. ಆಂಧ್ರ ಪ್ರದೇಶದ ಟಿಡಿಪಿಯ ವಿ. ಪ್ರಶಾಂತಿ ರೆಡ್ಡಿ 716 ಕೋಟಿ ರೂಪಾಯಿಗಳಷ್ಟು ಆಸ್ತಿಗಳನ್ನು ಹೊಂದಿರುವ ಮಹತ್ವದ ಪಟ್ಟಿಯನ್ನು ಎಡಿಆರ್ ಬಿಡುಗಡೆ ಮಾಡಿದೆ.
ಟಾಪ್ 10 ಸಿರಿವಂತರು ಯಾರು..?
ಇನ್ನೂ ದೇಶದಲ್ಲಿನ ಶ್ರೀಮಂತ ಶಾಸಕರ ಟಾಪ್ 10 ಪಟ್ಟಿಯಲ್ಲಿ ಆಂಧ್ರ ಪ್ರದೇಶದ ನಾಲ್ವರು ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೆ ಟಾಪ್ 20 ಲೆಕ್ಕ ಹಾಕಿದರೆ ಅದರಲ್ಲಿ ಒಟ್ಟು 7 ಶಾಸಕರಿದ್ದಾರೆ. ಅಂದಹಾಗೆ ಎಲ್ಲ ಶಾಸಕರ ಒಟ್ಟು ಆಸ್ತಿ ಮೌಲ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಇಲ್ಲಿನ 223 ಶಾಸಕರ ಒಟ್ಟು ಆಸ್ತಿ ಮೌಲ್ಯ 14,179 ಕೋಟಿ ರೂಪಾಯಿಗಳಷ್ಟಿದೆ. ಅಲ್ಲದೆ 2ನೇ ಸ್ಥಾನದಲ್ಲಿ ಮಹಾರಾಷ್ಟ್ರ ದ 286 ಎಂಎಲ್‌ಎಗಳಿಂದ 12,424 ಕೋಟಿ ರೂಪಾಯಿಗಳಷ್ಟಿದೆ. ಅಲ್ಲದೆ ಆಂಧ್ರ ಪ್ರದೇಶದ 174 ಶಾಸಕರ ಆಸ್ತಿ ಮೌಲ್ಯ 11,323 ಕೋಟಿ ರೂಪಾಯಿಗಳಷ್ಟಾಗಿದ್ದು ವರದಿಯಲ್ಲಿ ಬಹಿರಂಗವಾಗಿದೆ.
ಶಾಸಕರ ಆಸ್ತಿ ಮೌಲ್ಯ ಕಡಿಮೆ ಇರುವ ರಾಜ್ಯಗಳು
ಅಲ್ಲದೆ ಹೆಚ್ಚು ಸಿರಿವಂತ ಶಾಸಕರ ಬಳಿಕ ಕಡಿಮೆ ಆಸ್ತಿಯನ್ನು ಹೊಂದಿರುವ ಶಾಸಕರನ್ನು ಪಟ್ಟಿಯನ್ನು ಗಮನಿಸುವುದಾದರೆ, ತ್ರಿಪುರಾದ 60 ಶಾಸಕರ ಆಸ್ತಿ 90 ಕೋಟಿ ರೂಪಾಯಿಗಳು, ಮಣಿಪುರದ 59 ಶಾಸಕರ ಆಸ್ತಿ ಮೌಲ್ಯ 222 ಕೋಟಿ ರೂಪಾಯಿಗಳು ಹಾಗೂ ಪುದುಚೆರಿಯ 30 ಸದಸ್ಯರ ಆಸ್ತಿ ಮೌಲ್ಯ 297 ಕೋಟಿ ರೂಪಾಯಿಗಳಷ್ಟಿದೆ ಎಂದು ವರದಿ ತಿಳಿಸಿದೆ. ಅಲ್ಲದೆ ಪ್ರಮುಖ ರಾಜಕೀಯ ಪಕ್ಷಗಳ ಪೈಕಿ ಬಿಜೆಪಿ ಶಾಸಕರು 1,653 ಸದಸ್ಯರು ಒಟ್ಟು 26,270 ಕೋಟಿ ರೂಪಾಯಿಗಳನ್ನು ಹೊಂದಿದ್ದಾರೆ. ಕಾಂಗ್ರೆಸ್‌ನ 646 ಶಾಸಕರು 17,357 ಕೋಟಿ ರೂಪಾಯಿಗಳು ಹಾಗೂ ಟಿಡಿಪಿಯ 134 ಶಾಸಕರು 9,108 ಕೋಟಿ ರೂಪಾಯಿಗಳಷ್ಟಿದೆ. ಇನ್ನೂ ಶಿವಸೇನೆಯ 59 ಶಾಸಕರು 1,758 ಕೋಟಿ ರೂಪಾಯಿಗಳಷ್ಟು ಆಸ್ತಿ ಹೊಂದಿದ್ದಾರೆ.