Sunday, September 8, 2024

Latest Posts

ಮರಣದ ಸಮಯದಲ್ಲಿ ವಾಲಿ ನೀಡಿದ ಸಲಹೆಯನ್ನು ನೀವೂ ಕೇಳಿ..

- Advertisement -

Spiritual: ರಾಮಾಯಣದ ಪ್ರಮುಖ ಖಳನಾಯಕರಲ್ಲಿ ವಾಲಿ ಕೂಡ ಒಬ್ಬನು. ತನ್ನ ಸ್ವಂತ ಸಹೋದರ ಸುಗ್ರೀವನಿಗೆ ತೊಂದರೆ ಕೊಡುತ್ತಿದ್ದ ವಾಲಿ, ತನ್ನ ಕೊನೆಯ ಕ್ಷಣದಲ್ಲಿ ಕೆಲ ಸಲಹೆ ನೀಡಿದ್ದ. ಹಾಗಾದರೆ ಸಾವಿನ ಸಮಯದಲ್ಲಿ ವಾಲಿ ನೀಡಿದ್ದ ಸಲಹೆ ಏನು ಎಂಬ ಬಗ್ಗೆ ತಿಳಿಯೋಣ ಬನ್ನಿ..

ಮರಣದ ಸಮಯದಲ್ಲಿ ವಾಲಿ ತನ್ನ ಪುತ್ರ ಅಂಗದನಿಗೆ ಕೆಲ ಜೀವನ ಸಲಹೆಗಳನ್ನು ಕೊಟ್ಟಿದ್ದ.

ಅದರಲ್ಲಿ ಮೊದಲನೇಯದ್ದು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮುಂದುವರಿಯಬೇಕು. ಇದನ್ನು ಉದಾಹರಣೆ ಸಮೇತ ವಿವರಿಸುವುದಾದರೆ, ನೀವು ಒಂದು ಉದ್ಯಮ ಮಾಡಲು ಹೊರಟಿದ್ದೀರಿ ಎಂದುಕೊಳ್ಳಿ. ಅದಕ್‌ಕೆ ಬೇಕಾದ ವ್ಯವಸ್ಥೆಯನ್ನು ನೀವು ಮೊದಲೇ ಮಾಡಿಕೊಳ್ಳಬೇಕು. ಸರಿಯಾದ ಬಂಡವಾಳ, ಕೆಲಸಗಾರರ ವ್ಯವಸ್ಥೆ ಎಲ್ಲವೂ ಮಾಡಬೇಕು. ದುಡುಕಿ, ನಾನು ಉದ್ಯಮ ಮಾಡುತ್ತೇನೆಂದು ಹೊರಟು, ನಷ್ಟ ಅನುಭವಿಸಿದರೆ, ಮತ್ತೆಂದೂ ಉದ್ಯಮದ ಕಡೆ ತಲೆ ಹಾಕಲು ಹೋಗುವುದಿಲ್ಲ. ಅದಕ್ಕಾಗಿ, ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮುಂದುವರಿಯಬೇಕು.

ಎರಡನೇಯದ್ದು ಯಾರ ಜೊತೆ, ಯಾವ ಸಮಯದಲ್ಲಿ, ಹೇಗೆ ಮಾತನಾಡಬೇಕು ಎಂಬುದನ್ನು ಅರಿತುಕೋ. ಈ ಮಾತನ್ನು ಅರಿತುಕೊಂಡವರು, ಯಶಸ್ಸು ಸಾಧಿಸುವುದರ ಜೊತೆಗೆ, ಗೌರವಾನ್ವಿತರೂ ಆಗಿರುತ್ತಾರೆ. ಎಲ್ಲಿ..? ಯಾವ ಸಮಯದಲ್ಲಿ..? ಹೇಗೆ ಮಾತನಾಡಬೇಕು. ವ್ಯವಹರಿಸಬೇಕು ಎಂದು ಗೊತ್ತಿದ್ದವರು ಎಲ್ಲ ಸಮಯವನ್ನು ನಿಭಾಯಿಸುವ ಪರಿಣಿಯಿತಿ ಹೊಂದಿರುತ್ತಾರೆ.

ಮೂರನೇಯದಾಗಿ ಇಷ್ಟವಿದ್ದರೂ, ಇಲ್ಲದಿದ್ದರೂ, ಕಷ್ಟವನ್ನು ಸಹಿಸಿಕೊಳ್ಳಬೇಕು. ಕೆಲವು ಬಾರಿ ಹೀಗಾಗುತ್ತದೆ. ಜೀವನದ ಸಕಲ ಸೌಕರ್ಯವನ್ನು ಪಡೆದು, ನೆಮ್ಮದಿಯಿಂದ ಇರುವವರ, ಕೆಲವೊಮ್ಮೆ ಹಣೆಬರಹ ಕೆಟ್ಟು, ಎಲ್ಲವನ್ನೂ ಕಳೆದುಕೊಂಡು ಬಿಡುತ್ತಾರೆ. ಆದರೆ ಮನುಷ್ಯ ಯಾವುದೇ ಸಂದರ್ಭದಲ್ಲಿ, ತಾಳ್ಮೆಯಿಂದ, ಧೈರ್ಯದಿಂದ ಜೀವನ ನಡೆಸಬೇಕು. ದುಡುಕಬಾರದು. ಅಥವಾ ಪರಿಸ್ಥಿತಿಯಿಂದ ಕೊರಗಬಾರದು ಎಂಬುವುದೇ ಇದರ ಅರ್ಥ.

ಶ್ರಾವಣದಲ್ಲಿ ಮಾಂಸಾಹಾರ ಸೇವನೆ ಮಾಡಬಾರದು ಅಂತಾ ಹೇಳುವುದೇಕೆ..?

ಪ್ರಸಿದ್ಧ ಶಕ್ತಿಪೀಠ ವೈಷ್ಣೋದೇವಿ ದೇವಸ್ಥಾನದ ಹಿನ್ನೆಲೆ..

ಮೂಕಾಂಬಿಕೆ ಕೊಲ್ಲೂರಿಗೆ ಬಂದು ನೆಲೆನಿಲ್ಲಲು ಕಾರಣವೇನು..?

- Advertisement -

Latest Posts

Don't Miss