ಇದೆಲ್ಲಾ ಬೇಕಿತ್ತಾ ಫೈಟರ್‌ಗೆ, ಸುಮ್ನೆ ಸೌತ್ ಅಲ್ಲಿ ಒಳ್ಳೊಳ್ಳೆ ಚಾನ್ಸ್ ಸಿಕ್ತಾ ಇತ್ತು ಇತ್ತೀಚೆಗೆ ಆರ್‌ಆರ್‌ಆರ್ ಬೇರೆ ಬಂದಿತ್ತು..
ಮುAದೆ ಕೆಜಿಎಫ್ ಚಾಪ್ಟರ್ ೩ ಬಂದಿದ್ರೆ ಅಲ್ಲಿ ಒಂದು ಒಳ್ಳೇ ಪಾತ್ರ ಸಿಗ್ತಿತ್ತೇನೋ.
ಲೋಡ್.. ಏಮ್.. ಶೂಟ್.. ಅಂತ ಹೇಳಿ ಗನ್ ಎತ್ಕೊಂಡಿದ್ರು ಸಿನಿಮಾದಲ್ಲಿ ಅಜೆಯ್ ದೇವ್ಗನ್ ಆದ್ರೆ ಈಗ ಎತ್ಕೊಂಡ್ರು ನೋಡಿ ಗನ್
ಅದು ಮಾತ್ರ ಸರಿಯಾಗಿ ಲೋಡ್ ಆಗಿರಲಿಲ್ಲ. ಏಮ್ ಸರಿ ರ‍್ಲಿಲ್ಲ, ಶೂಟ್ ಮಾತ್ರ ಆಯ್ತು. ಅದ್ಕೆ ಅರ್ಜೆಂಟಲ್ಲಿ ಶೂಟ್ ಮಾಡ್ಬರ‍್ದು ಅನ್ಬೋದು.
ಪಾಪ ಇಷ್ಟಕ್ಕೂ ಶೂಟ್ ಮಾಡಿದ್ದು ಯಾರಿಗೆ.. ಬೆಂಕಿ ಚೆಂಡು ಬಾದ್ಷಾ ಕಿಚ್ಚ ಸುದೀಪ್ಗೆ.. ಕಿಚ್ಚನ ಕೆಣಕೋಕೆ ಹೋಗ್ಬರ‍್ದಾಗಿತ್ತು
ಬೇರೆಯವ್ರಾಗಿದ್ರೆ ಒಂದು ಸಾರಿಗೆ ಸಿಡಿದುಬಿಡ್ತಿದ್ರೇನೋ ಆದ್ರೆ ಕಿಚ್ಚ ನಾನು ಒಳ್ಳೆವ್ರಿಗೆ ಬೆಳಗೋ ಸುದೀಪ ಆದ್ರೆ ಕೆಟ್ಟವ್ರಿಗೆ ದೀಪದೊಳಗೇ ಉರಿಯೋ ಕಿಚ್ಚೂ ಇದೆ
ಅಂತ ತೋರಿಸ್ಕೊಟ್ರು . ಪಾಪ ಅಜೆಯ್ ದೇವಗನ್ ಪರಿಸ್ಥಿತಿ ಹೆಂಗಾಯ್ತು ಅಂದ್ರೆ ನಮ್ಮ ಜಿಪಿ ರಾಜರತ್ನಂ ಒಂದ್ಕಡೆ ಹೇಳ್ತಾರೆ.
ಅರ್ಥ ಮಾಡ್ಕೊಂಡ್ ಇಂಗಲ್ ಇಂಗೆ
ಅನ್ನೋರ್ ಮಾತು ಗಂಗೆ
ಅರ್ಥ್ವಾಗ್ದಿದ್ರೂ ಗೊತ್ತೂ ಅನ್ನಾದ್
ಚಂದ್ರನ್ ಮಕ್ಕುಗ್ದಂಗೆ.
ಪಾಪ ಗೊತ್ತಿಲ್ದೇ ಗುರಿ ಇಟ್ಟಿದ್ದಕ್ಕೆ ಶೂಟ್ ಆಗಿದ್ದು ಆ ದೇವ್ ಗನ್‌ಗೇನೇ ಇಷ್ಟಕ್ಕೂ ಇತ್ತೀಚೆಗೆ ಆಗಿದ್ದೇನು ಅಂದ್ರೆ. ಸುದೀಪ್ ಒಂದು ವೇದಿಕೆಯಲ್ಲಿ ಹಿಂದಿ ನ್ಯಾಶನಲ್ ಲ್ಯಾಂಗ್ವೇಜ್ ಅಲ್ಲಾ ಅಂತಾರೆ. ಹೌದು ನ್ಯಾಶನಲ್ ಲ್ಯಾಂಗ್ವೇಜ್ ಅಲ್ಲ.. ಇದನ್ನು ನಾವೇನು ಕೇಂದ್ರ ಸರ್ಕಾರಾನೇ ಒಪ್ಕೊಂಡಿದೆ. ದೇಶದಲ್ಲಿ ಅತ್ಯಂತ ಹೆಚ್ಚು ಜನರು ಮಾತನಾಡೋ ಭಾಷೆ ಹಿಂದಿ, ಆಫೀಷಿಯಲ್ ಲ್ಯಾಂಗ್ವೇಜ್ ಹೌದು ಅದರೆ ೨೨ ಭಾಷೆಗಳನ್ನು ಕೇಂದ್ರ ಸರ್ಕಾರದ ದೇಶದ ಅಧಿಕೃತ ಭಾಷೆಗಳು ಅಂತ ಗುರುತಿಸಿದೆ. ನಮ್ಮ ದೇಶದ ಸೌಂದರ್ಯಾನೇ.. ಯುನಿಟಿ ಇನ್ ಡೈವರ್ಸಿಟಿ, ಅದು ಭಾಷೇಲೂ ಹೌದು, ಬಣ್ಣದಲ್ಲೂ ಹೌದು, ಬದುಕಲ್ಲೂ ಹೌದು
ಅಸ್ಸಾಮಿ, ಬೆಂಗಾಲಿ, ಬೋಡೋ, ಡೋಗ್ರಿ, ಗುಜರಾತಿ, ಕನ್ನಡ, ಕೊಂಕಣಿ, ಕಾಶ್ಮೀರಿ, ಮಲಯಾಳಂ ನಮ್ಮ ದೇಶದ ವೈವಿದ್ಯತೆ ಭಾಷೆಗಳಲ್ಲೂ ಹಾಗಿದೆ. ಇಸ್ರೇಲ್‌ಗೆ ಹಿಬ್ರೂ, ರ‍್ಲೆಂಡ್‌ಗೆ ಐರಿಶ್, ಇರಾನ್ ಪರ್ಷಿಯನ್, ಇಂಡೋನೇಷ್ಯಾಗೆ ಇಂಡೋನೆಷ್ಯನ್, ಚೈನಾದಲ್ಲೂ ತುಂಬಾ ಭಾಷೆಗಳಿವೆ ಯಾವುದನ್ನೂ ನ್ಯಾಷನಲ್ ಲ್ಯಾಂಗ್ವೇಜ್ ಅಂದಿಲ್ಲ. ಜರ್ಮನ್-೯೫% ಜರ್ಮನಿಯರು ಮಾತಾಡ್ತಾರೆ. ೭೮೦ ಲ್ಯಾಂಗ್ವೇಜ್ ಡೈವರ್ಸಿಟಿ ಇದೆ ೧೯೦೦೦ ಉಪಭಾಷೆಗಳಿವೆ. ಅದಕ್ಕೆ ಸುದೀಪ್ ಕೊಟ್ಟ ಕೌಂಟರ್ ಮೊದ ಮೊದಲಿಗೆ ಸುದೀಪ್ ಕೊಟ್ಟಂಗಿತ್ತು
ಇದು ಚರ್ಚೆ ಅಥವಾ ಡಿಬೇಟ್ ಮಾಡೋಕೆ ಮಾಡಿದ್ದಲ್ಲ. ಪರ್ಸನಲಿ ಸಿಕ್ಕಾಗ ನಾನು ಎಕ್ಸ್ಪ್ಲೇನ್ ಮಾಡ್ತೀನಿ. ನಾನು ಹೇಳಿದ ಪರಿಸ್ಥಿತಿ ಬೇರೆಯದ್ದೇ ಇತ್ತು. ಇದನ್ನು ಅಷ್ಟು ದೊಡ್ಡ ವಿಷಯ ಮಾಡೋ ಅಗತ್ಯ ಇಲ್ಲ. ಕಿಚ್ಚ ಸಾಫ್ಟ್ ಕಾರ್ನರ್ ತೋರಿಸಿದ ಕೂಡಲೇ ಇದು ವಿಕ್ರಾಂತ್ ರೋಣ ಸಿನಿಮಾ ಇದೆ ಅನ್ನೋ ಕಾರಣಕ್ಕೆ ಅಂತ ಅನ್ನಿಸ್ತು. ಆಮೇಲೆ ಇದು ಕಿಚ್ಚನ ಟ್ವೀಟ್ ಅಲ್ಲ ಕಿಚ್ಚಿನ ಟ್ವೀಟ್. ನಾನು ನಿಮ್ಮ ಟ್ವೀಟ್ ಓದಿದೆ ಅರ್ಥ ಮಾಡ್ಕೊಂಡು ರಿಪ್ಲೆöÊ ಮಾಡಿದೆ ಯಾಕಂದ್ರೆ ನಾವು ಹಿಂದಿ ಕಲಿತಿದ್ದೀವಿ, ಪ್ರೀತಿಸಿದ್ದೀವಿ, ಗೌರವಿಸಿದ್ದೀವಿ, ಅರ್ಥ ಮಾಡ್ಕೋತೀವಿ ತಪ್ಪಲ್ಲ. ಅದೇ ನಾನು ಈಗ ಕನ್ನಡದಲ್ಲಿ ರಿಪ್ಲೆöÊ ಮಾಡಿದ್ರೆ ಹೇಗಿರುತ್ತೆ..?
ನಾವೂ ಈ ದೇಶಕ್ಕೆ ಸೇರಿದವರೇ ಅಲ್ವಾ..?
ಒಟ್ಟಾರೆ ಉಗಿಯೋಕೆ ವಿಮಲ್ ಹಾಕೋಬೇಕು ಅಂತಾನೇ ಇಲ್ಲ ಅಂತ ಕಿಚ್ಚ ಪ್ರೂವ್ ಮಾಡಿದ್ರು ಅಂತ ಸೋಷಿಯಲ್ ಮಿಡೀಯಾ ಹೇಳ್ತಿದೆ. ಇನ್ನು ನಮ್ಮ ರಾಜಕಾರಿಣಿಗಳೋ ಆಹಾ ಅದೇನ್ ಪ್ರೀತಿ, ಅದೇನ್ ಅಭಿಮಾನ ಕನ್ನಡ ಅಂದ್ರೆ, ಬಂದ್ಬುಟ್ರಪ್ಪಾ, ಅದೇನ್ ಓವರ್ ಆಕ್ಟಿಂಗ್. ವಿರೋಧ ಪಕ್ಷದ ನಾಯಕರಿಂದ ಮುಖ್ಯಮಂತ್ರಿವರೆಗೂ ಸುದೀಪ್ ಬೆಂಬಲಕ್ಕೆ ಬಂದಿದ್ದೇನು, ಕನ್ನಡ ನಮ್ ದೇವ್ರು ಅಂದಿದ್ದೇನು. ಸಾಕ್ ಗುರು ನಿಮ್ಮ… ಈ ಕನ್ನಡ ಪ್ರೀತಿ. ಓಹೋ ಎದ್ದು ನಿಂತುಬಿಟ್ರು ಯುದ್ಧ ಮಾಡೋಕೆ, ”ಡಾ.ರಾಜ್ ಡೈಲಾಗ್ ಇದ್ಯಲ್ಲ ಮಯೂರ ಸಿನಿಮಾದಲ್ಲಿ ಕನ್ನಡಿಗರ ಸಾಹಸ, ಕನ್ನಡಿಗರ ಪೌರುಷ, ಕನ್ನಡಿಗರ ಸ್ವಾಭಿಮಾನ ಆಚಂದ್ರಾರ್ಕವಾಗಿ ನಿಲ್ಲುವಂತದೇ ಹೊರತು ನಿಮ್ಮಂಥ ಕೋಟಿ ಪಲ್ಲವರ ನಿರಂತರ ದಾಳಿಯಿಂದ ಅಳಿಯದೂ ಎಂಬ ಸತ್ಯವನ್ನು ಪ್ರತ್ಯಕ್ಷ ಪ್ರಮಾಣ ಮಾಡಿ ತೋರಿಸುತ್ತೇನೆ. ಇದೇ ನನ್ನ ಗುರಿ, ಇದೇ ನನ್ನ ಮಂತ್ರ ಇದೇ ನನ್ನ ಪ್ರತಿಜ್ಞೆ”
ಅಧಿಕಾರದಲ್ಲಿದ್ದಾಗ ಸರೋಜಿನಿ ಮಹಿಷಿ ವರದಿ ಜಾರಿಗೆ ಕೆಲಸ ಮಾಡಿದ್ರಾ ಮಾಡ್ಲಿಲ್ಲ. ಮಹಾಜನ್ ವರದಿ ಜಾರಿ ಮಾಡೋಕೆ ಕೆಲಸ ಮಾಡಿದ್ರಾ..? ಇಲ್ಲ ಬರೀ ಪ್ರತೀ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನ ಆದಾಗ್ಲೂ ನಿರ್ಣಯಗಳನ್ನು ಅಂಗಿಕರಿಸೋದು, ಅದ್ರಲ್ಲಿ ಕನ್ನಡ ನಮ್ಮ ಜೀವ, ಭಾವ, ಅದೊಂದು ಭಾಷೆಯಲ್ಲ ಬದುಕು ಅಂಥ ಭಾಷಣ ಮಾಡೋದು. ನಿಮ್ಮ ಭಾಷೇನಾ ಪ್ರೀತಿಸಿ, ಪರಭಾಷೇನಾ ಗೌರವಿಸಿ ಆಗ ಪರಭಾಷೆಯವರೂ ಅದನ್ನೇ ಮಾಡ್ತಾರೆ
ಓಂ
ಕರ್ನಾಟಕ ಟಿವಿ