Thursday, December 5, 2024

Latest Posts

ಹೆಣ್ಣೆಂದರೆ ಉಪ್ಪಿದ್ದ ಹಾಗೆ ಎಂದಿದ್ದಾನೆ ಶ್ರೀಕೃಷ್ಣ.. ಯಾಕೆ ಹೀಗೆ ಹೇಳಿದ..?

- Advertisement -

ಜೀವನದಲ್ಲಿ ನಾವು ಉದ್ಧಾರವಾಗಬೇಕು ಅಂದ್ರೆ ಶ್ರೀಕೃಷ್ಣನ ಈ ಮಾತುಗಳನ್ನು ಕೇಳಬೇಕು ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಇಂದು ಶ್ರೀಕೃಷ್ಣ ಹೆಣ್ಣನ್ನು ಉಪ್ಪಿಗೆ ಹೋಲಿಸಿದ್ದರ ಬಗ್ಗೆ ನಾವು ನಿಮಗೆ ವಿವರಣೆ ನೀಡಲಿದ್ದೇವೆ.

ಹಿಂದೂ ಧರ್ಮದ ಪವಿತ್ರ ಕಾರ್ಯಗಳಲ್ಲಿ ಮಹತ್ತರ ಸ್ಥಾನ ಪಡೆದ ಎಲೆಗಳಿವು..

ಪೌರಾಣಿಕ ಕಥೆಗಳ ಪ್ರಕಾರ, ಕೃಷ್ಣನಿಗೆ 60 ಸಾವಿರ ಪತ್ನಿಯರು. ಅದರಲ್ಲಿ 8 ಪ್ರಮುಖ ಪತ್ನಿಯರಿದ್ದರು. ಆ 8 ಪತ್ನಿಯರಲ್ಲಿ ಸತ್ಯಭಾಮೆ ಸುಂದರವಾಗಿದ್ದಳು. ಸತ್ಯಭಾಮೆಗೆ ತನ್ನ ಸೌಂದರ್ಯದ ಬಗ್ಗೆ ಅಹಂಕಾರವಿತ್ತು. ಆಕೆ ಕೃಷ್ಣನಲ್ಲಿ ಬಂದು ನಾನು ಹೇಗೆ ಕಾಣಿಸುತ್ತಿದ್ದೇನೆ ಎಂದು ಕೇಳಿದಳು. ಅದಕ್ಕೆ ಕೃಷ್ಣ ನೀನು ನನಗೆ ಉಪ್ಪಿನ ಸಮಾನವಾಗಿ ಕಾಣಿಸುತ್ತಿದ್ದಿ ಎಂದು ಹೇಳುತ್ತಾನೆ. ಅದಕ್ಕೆ ಸತ್ಯಭಾಮೆ ಕೋಪಿಸಿಕೊಂಡು ಹೋಗುತ್ತಾಳೆ.

ಯಶಸ್ಸು ಗಳಿಸಬೇಕೆಂದರೆ ಶ್ರೀಕೃಷ್ಣನ ಈ 10 ಮಾತನ್ನ ಕೇಳಿ..- ಭಾಗ 1

ಕೃಷ್ಣ ಅಂದು ರಾತ್ರಿ ಎಲ್ಲರಿಗೂ ಭೂರಿ ಭೋಜನದ ವ್ಯವಸ್ಥೆ ಮಾಡಿದ. ಎಲ್ಲರೂ ಬಂದು ಊಟಕ್ಕೆ ಕುಳಿತರು. ಭೋಜನ ಬಡಿಸಲಾಯಿತು. ಎಲ್ಲರೂ ಒಂದು ತುತ್ತು ತಿಂದಿದ್ದೇ, ಮುಖ ಸಿಂಡರಿಸಿದರು. ಸತ್ಯಭಾಮೆಯಂತೂ ಇದೆಂಥ ಭೋಜನ, ಸಿಹಿ, ಖಾರ, ಹುಳಿ ಎಲ್ಲವೂ ಇದೆ ಆದರೆ, ಸ್ವಾದ ಹೆಚ್ಚಿಸುವ ಉಪ್ಪೇ ಇಲ್ಲ. ಯಾರು ಮಾಡಿದ್ದು ಈ ಅಡಿಗೆಯನ್ನು ಎಂದು ಬೈಯ್ಯಲು ಶುರು ಮಾಡಿದಳು. ಆಗ ಕೃಷ್ಣ ಸತ್ಯಭಾಮೆಯನ್ನು ಕುರಿತು, ಅಡಿಗೆಯಲ್ಲಿ ಹುಳಿ, ಖಾರ, ಸಿಹಿ ಎಲ್ಲವೂ ಇದೆಯಲ್ಲ, ಉಪ್ಪಿಲ್ಲದಿದ್ದರೇನಂತೆ ಎಂದು ಕೇಳುತ್ತಾನೆ.

ಯಶಸ್ಸು ಗಳಿಸಬೇಕೆಂದರೆ ಕೃಷ್ಣನ ಈ 10 ಮಾತನ್ನ ಕೇಳಿ..- ಭಾಗ 2

ಆಗ ಸತ್ಯಭಾಮೆ ಇದನ್ನ ಹೇಗೆ ತಿನ್ನಬೇಕು..? ಯಾವ ಮಸಾಲೆ ಪದಾರ್ಥ, ಹುಳಿ, ಖಾರ, ಸಿಹಿ ಇದ್ದರೂ ಇದರಲ್ಲಿ ಉಪ್ಪೇ ಇಲ್ಲ. ಇಂಥ ಸಪ್ಪೆ ಆಹಾರವನ್ನು ತಿನ್ನಲು ಸಾಧ್ಯವೇ ಇಲ್ಲ ಎನ್ನುತ್ತಾಳೆ. ಆಗ ಕೃಷ್ಣ, ಆಗ ನೀನು ನನ್ನಲ್ಲಿ ಬಂದು ನಾನು ಹೇಗೆ ಕಾಣಿಸುತ್ತಿದ್ದೇನೆ ಎಂದು ಕೇಳಿದಾಗ, ನೀವು ಉಪ್ಪಿಗೆ ಸಮನಾದವಳಂತೆ ಕಾಣುತ್ತಿದ್ದಿ ಎಂದು ನಾನು ಹೇಳಿದೆ. ಅದಕ್ಕೆ ನೀನು ಕೋಪಿಸಿಕೊಂಡೆ. ಅದನ್ನ ಅರ್ಥ ಮಾಡಿಸಲೆಂದೇ ಈ ಭೋಜನವನ್ನು ನಾನು ಏರ್ಪಡಿಸಿದ್ದೆ.

ನಂದಿ ಶಿವನ ವಾಹನವಾಗಿದ್ದು ಹೇಗೆ..? ಯಾರು ಈ ನಂದಿ..?

ಎಷ್ಟೇ ರುಚಿಯಾದ ತಿಂಡಿ ಮಾಡಿದರೂ, ಅದರಲ್ಲಿ ಉಪ್ಪು ಬೀಳದಿದ್ದಾಗ, ಆ ತಿಂಡಿ ಮಾಡಿಯೂ ವ್ಯರ್ಥವೆನ್ನಿಸುತ್ತದೆ. ಹೆಣ್ಣು ಅಷ್ಟೇ. ಹೆಣ್ಣೆಂದರೆ, ಉಪ್ಪಿನ ರೀತಿ, ಒಂದು ಕುಟುಂಬದ ರುಚಿ, ಅಂದರೆ ನೆಮ್ಮದಿ, ಪ್ರೀತಿ ಹೆಚ್ಚಿಸುವವಳು. ಜಗಳ, ದುಃಖ ಏನೇ ಇದ್ದರೂ, ಅಲ್ಲಿ ಉಪ್ಪೆಂಬ ಪ್ರೀತಿ, ಕಾಳಜಿ ತೋರಿ, ನೆಮ್ಮದಿ ಎಂಬ ರುಚಿಯನ್ನು ಹೆಚ್ಚಿಸುವವಳು ಎಂದು ಕೃಷ್ಣ ಹೇಳುತ್ತಾನೆ.

- Advertisement -

Latest Posts

Don't Miss