ಹಸಿವು ಕಡಿಮೆಯಾಗುವುದು ಮತ್ತು ತೂಕದಲ್ಲಿ ಇಳಿಕೆಯಾಗುವುದು ಅನಾರೋಗ್ಯಕರ ಸಂಕೇತ

Health Tips: ಕೆಲವರು ಚೆನ್ನಾಗಿ ಆಹಾರ ಸೇವನೆ ಮಾಡುತ್ತಿರುತ್ತಾರೆ. ಆದರೆ ಇದ್ದಕ್ಕಿದ್ದಂತೆ ಅವರಿಗೆ ಹಸಿವು ಕಡಿಮೆಯಾಗುತ್ತದೆ. ಅಲ್ಲದೇ, ಚೆನ್ನಾಗಿ ಗಟ್ಟಿಮುಟ್ಟಾಗಿದ್ದ ಮನುಷ್ಯ, ಸಡನ್ನಾಗಿ ತೂಕ ಕಳೆದುಕೊಳ್ಳಲು ಶುರು ಮಾಡುತ್ತಾನೆ. ಹಾಗಾದ್ರೆ ಇದು ಯಾವುದರ ಸಂಕೇತ..? ಅನಾರೋಗ್ಯ ಸಂಭವಿಸುವ ಸೂಚನೆಯೇ..? ಈ ಬಗ್ಗೆ ವೈದ್ಯರಾದ ಡಾ.ಆಂಜೀನಪ್ಪ ವಿವರಿಸಿದ್ದಾರೆ ನೋಡಿ..

ಹಸಿವು ಕಡಿಮೆಯಾಗಿ, ತೂಕದಲ್ಲಿ ಇಳಿಕೆಯಾಗುವುದು ಟಿಬಿ ಸಂಕೇತ. ಸಂಜೆ ಜ್ವರ ಬರುವುದು. ಕೆಲಸದಲ್ಲಿ ಆಸಕ್ತಿ ಇರುವುದಿಲ್ಲ. ತುಂಬಾ ಸುಸ್ತಾಗುತ್ತದೆ. ಬೆಚ್ಚಗೆ ನಿದ್ರಿಸಬೇಕು ಎನ್ನಿಸುವುದೆಲ್ಲ ಟಿಬಿ ರೋಗದ ಲಕ್ಷಣಗಳು. ಯಾರಿಗಾದರೂ ಇಂಥ ಲಕ್ಷಣವಿದ್ದಲ್ಲಿ, ಅವರು ವೈದ್ಯರ ಬಳಿ ಪರೀಕ್ಷಿಸಿಕೊಳ್ಳಬಹುದು. ಟಿಬಿ ಇದ್ದರೆ ಅಂಥವರಿಗೆ, ಸರ್ಕಾರದ ಕಡೆಯಿಂದ ಉಚಿತ ಚಿಕಿತ್ಸೆ ಮತ್ತು ಮಾತ್ರೆಗಳನ್ನು ನೀಡಲಾಗುತ್ತದೆ. ಟಿಬಿ ಇದ್ದವರು 6ರಿಂದ 9 ತಿಂಗಳು ಚಿಕಿತ್ಸೆ ಪಡೆಯಬೇಕು. ಈ ವೇಳೆ ನಿಮಗೆ ನೀಡುವ ಮಾತ್ರೆಗಳ ಸೇವನೆಯನ್ನು ನೀವು ಬಿಡಬಾರದು. ಎಷ್ಟು ದಿನ ಮಾತ್ರೆ ತೆಗೆದುಕೊಳ್ಳಬೇಕೋ, ಅಷ್ಟು ದಿನ ನೀವು ಮಾತ್ರೆ ಸೇವಿಸಲೇಬೇಕು.

ಈ ಸಮಯದಲ್ಲಿ ನೀವು ಅರ್ಧ ಇಂಗ್ಲಿಷ್ ಗುಳಿಗೆ ತೆಗೆದುಕೊಂಡು, ಅರ್ಧ ಆಯುರ್ವೇದಿಕ ಮಾತ್ರೆ ತೆಗೆದುಕೊಂಡು, ಇನ್ನರ್ಧ ಹೊಮಿಯೋಪತಿಕ್ ಚಿಕಿತ್ಸೆ ಪಡೆಯುತ್ತೇನೆ ಎನ್ನುವ ತಪ್ಪು ಮಾತ್ರ ಮಾಡಬಾರದು. ಹೀಗೆ ಮಾಡುವುದರಿಂದ, ರೋಗ ಪೂರ್ತಿಯಾಗಿ ವಾಸಿಯಾಗಲು ಸಾಧ್ಯವಿಲ್ಲ. ಹಾಗಾಗಿ ಒಂದೇ ಕಡೆ ಚಿಕಿತ್ಸೆ ಪಡೆಯುವುದು ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

About The Author