Thursday, June 19, 2025

Latest Posts

ಭಾಗ್ಯಶಾಲಿ ಮನುಷ್ಯರ ಈ 4 ಅಂಗದ ಮೇಲೆ ಇರುತ್ತದೆ ಮಚ್ಛೆ..

- Advertisement -

Spiritual: ಹಿಂದೂ ಧರ್ಮದಲ್ಲಿ ಹಲವು ನಂಬಿಕೆಗಳಿದೆ. ಕೆಲವರು ಅದನ್ನು ನಂಬುತ್ತಾರೆ. ಇನ್ನು ಕೆಲವರು ನಂಬುವುದಿಲ್ಲ. ಅದರಲ್ಲಿ ಒಂದು ಅಂಗದ ಮೇಲಿರುವ ಮಚ್ಛೆಯ ಮೇಲಿನ ನಂಬಿಕೆ. ನಮ್ಮ ದೇಹದ ಕೆಲ ಭಾಗಗಳಲ್ಲಿ ಇರುವ ಮಚ್ಛೆಗಳು, ನಮ್ಮ ಬಡತನ ಮತ್ತು ಸಿರಿತನದ ಭವಿಷ್ಯ ಹೇಳುತ್ತದೆ. ಹಾಗಾದರೆ ಯಾವ ಅಂಗದ ಮೇಲೆ ಮಚ್ಛೆ ಇದ್ದರೆ ಮನುಷ್ಯ ಭಾಗ್ಯಶಾಲಿಯಾಗುತ್ತಾನೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಹಣೆಯ ಬಲಭಾಗದಲ್ಲಿ ಮಚ್ಛೆ ಇದ್ದರೆ, ಅಂಥ ಮನುಷ್ಯರು ಭಾಗ್ಯಶಾಲಿಗಳಾಗಿರುತ್ತಾರೆ. ಇವರು ಯಶಸ್ಸು ಗಳಿಸುವುದರಲ್ಲಿ ಸಫಲರಾಗುತ್ತಾರೆ. ಯಾವುದೇ ಕ್ಷೇತ್ರಕ್ಕೆ ಹೋದರೂ, ಅಲ್ಲಿ ಯಶಸ್ಸು ಗಳಿಸುತ್ತಾರೆ. ಅದೇ ಎಡಭಾಗದಲ್ಲಿ ಮಚ್ಛೆ ಇದ್ದರೆ, ಅವರು ಹೆಚ್ಚು ಖರ್ಚು ಮಾಡುವ ಸ್ವಭಾವದವರಾಗಿರುತ್ತಾರೆ. ಇವರು ಚೆನ್ನಾಗಿ ದುಡಿಯುತ್ತಾರೆ. ಆದರೆ, ಅವರ ಬಳಿ ದುಡ್ಡು ಉಳಿಯುವುದಿಲ್ಲ. ಇನ್ನು ಹಣೆಯ ಮದ್ಯ ಭಾಗದಲ್ಲಿ ಮಚ್ಛೆ ಇದ್ದರೆ, ಅವರು ದುರಾದೃಷ್ಟವಂತರಾಗಿರುತ್ತಾರೆ. ಆದರೆ ಅದು ಕಲರ್ ಮೇಲೆ ಅವಲಂಬಿತವಾಗಿರುತ್ತದೆ. ಗಾಢವಾದ ಮಚ್ಛೆ ದುರಾದೃಷ್ಟ ತಂದು ಕೊಟ್ಟರೆ, ತಿಳಿಯಾದ ಬಣ್ಣದ ಮಚ್ಛೆ ಕಷ್ಟಪಟ್ಟಾಗಷ್ಟೇ ಫಲವನ್ನು ನೀಡುತ್ತದೆ. ಅಲ್ಲದೇ, ಇವರಿಗೆ ಆಗಾಗ ಅನಾರೋಗ್ಯ ಕಾಡುತ್ತಲಿರುತ್ತದೆ.

ಇನ್ನು ಸಿಂಧೂರವಿಡುವ ಜಾಗದಲ್ಲಿ ಮಚ್ಛೆ ಇದ್ದರೆ, ಅಂಥ ಮಹಿಳೆ ಕಲೆ ಸಾಹಿತ್ಯದಲ್ಲಿ ಮುಂದೆ ಬರುತ್ತಾಳೆ. ಪುರುಷರ ಹಣೆಯ ಮೇಲೆ ಈ ರೀತಿ ಮಚ್ಛೆ ಇದ್ದರೆ, ಅವನ ಜೀವನ ಹೆಚ್ಚು ಕಷ್ಟಗಳಿಂದ ತುಂಬಿರುತ್ತದೆ. ಇನ್ನು ಹುಬ್ಬುಗಳ ಮಧ್ಯ ಮಚ್ಛೆ ಇದ್ದರೆ, ಅವನು ಸಾಮಾನ್ಯ ಜೀವನವನ್ನೇ ಜೀವಿಸುತ್ತಾನೆ. ಇಂಥವರಿಗೆ ಯಶಸ್ಸು ಸಾಧಿಸೋದು ಅಷ್ಟು ಸುಲಭದ ಕೆಲಸವಲ್ಲ.

ದೆವ್ವ ಬಿಡಿಸಲು ಪ್ರಸಿದ್ಧವಾಗಿದೆ ಭಾರತದ ಈ ದೇವಸ್ಥಾನ..

ಭಾರತದ ಅತ್ಯಂತ ಸ್ವಚ್ಛ ದೇವಸ್ಥಾನವೆಂಬ ಪ್ರಖ್ಯಾತಿ ಈ 2 ದೇವಾಲಯಕ್ಕಿದೆ..

ಜಮ್ಮು- ಕಾಶ್ಮೀರದಲ್ಲಿರುವ ವಾಸುಕಿ ನಾಗ ದೇವಸ್ಥಾನದ ಬಗ್ಗೆ ಮಾಹಿತಿ..

- Advertisement -

Latest Posts

Don't Miss