ಮಹಾಭಾರತದಲ್ಲಿ ಇವರನ್ನು ಮೋಸದಿಂದ ಕೊಲ್ಲದೇ ಬೇರೆ ಉಪಾಯವಿರಲಿಲ್ಲ- ಭಾಗ 2

ಕಳೆದ ಭಾಗದಲ್ಲಿ ನಾವು ಮಹಾಭಾರತದಲ್ಲಿ ಕಪಟದಿಂದ ಕೊಲ್ಲಲ್ಪಟ್ಟ ಶೂರರಲ್ಲಿ ಮೂವರ ಬಗ್ಗೆ ಸಂಪೂರ್ಣ ವಿವರ ನೀಡಿದ್ದೆವು. ಇಂದು ನಾವು ಅದರ ಮುಂದುವರಿದ ಭಾಗವಾಗಿ, ಇನ್ನುಳಿದ ಶೂರರ ಬಗ್ಗೆ ಮಾಹಿತಿ ತಿಳಿಯೋಣ..

ಜಯಧೃತ: ದುರ್ಯೋಧನನ ಮಾವ ಜಯಧೃತನ ಕಾರಣ,, ಅಭಿಮನ್ಯು ಕಪಟದಿಂದ ಸಾಯಬೇಕಾಯಿತು. ಈ ಸಂಗತಿ ತಿಳಿದ ಅರ್ಜುನ, ತನ್ನ ಮಗನ ಸಾವಿನ ಸೇಡಿಗಾಗಿ ಜಯಧೃತನನ್ನು ಕೊಲ್ಲಲು ನಿರ್ಧರಿಸಿದ. ಆದರೆ, ಕೌರವರು ಜಯಧೃತನನ್ನು ಮುಚ್ಚಿಡುತ್ತಿದ್ದರು. ಏನೇ ಮಾಡಿದರೂ ಅವನನ್ನು ಕೊಲ್ಲಲು ಪಾಂಡವರಿಗೆ ಸಾಧ್ಯವಾಗಲಿಲ್ಲ. ಆಗ, ಕೃಷ್ಣ ಸೂರ್ಯ ಕಾಣದಂತೆ, ಮೋಡವನ್ನು ಮುಚ್ಚಿದ.

ಸೂರ್ಯಾಸ್ತವಾಯಿತೆಂದು ತಿಳಿದು ಜಯಧೃತ ಸೊಕ್ಕಿನಿಂದ ಅರ್ಜುನನ ಮುಂದೆ ಬಂದ. ಆಗ ಕೃಷ್ಣ, ಜಯಧೃತನ ಮೇಲೆ ಬಾಣ ಬಿಡು, ಇನ್ನೂ ಸೂರ್ಯಾಸ್ತವಾಗಲಿಲ್ಲವೆಂದು ಅರ್ಜುನನಿಗೆ ಹೇಳಿದ. ಮತ್ತು ಸೂರ್ಯನ ಮೇಲಿಂದ ಮೊಡವನ್ನು ಸರಿಸಿದ. ಹೀಗೆ ಜಯಧೃತ ಕೊಲ್ಲಲ್ಪಟ್ಟ.

ದುರ್ಯೋಧನ: ಕರ್ಣನಿಗೆ ಹಲವು ಶಾಪವಿದ್ದ ಕಾರಣ, ಮತ್ತು ಅವನಿಗೆ ತನ್ನ ಸಾವು ಇಂದೇ ಎಂದು ಗೊತ್ತು ಮಾಡಿ ಕೊಲ್ಲಲಾಯಿತು. ಆದ್ರೆ ದುರ್ಯೋಧನನ್ನು ಛಲ ಮತ್ತು ಬಲದಿಂದ ಕೊಲ್ಲಲಾಯಿತು. ಭೀಮ ಮತ್ತು ದುರ್ಯೋಧನನ ಮಧ್ಯೆ ಗದಾಯುದ್ಧವಾಯಿತು. ಈ ಯುದ್ಧದ ನಿಯಮದ ಪ್ರಕಾರ, ಸೊಂಟದ ಕೆಳಗೆ ಗಧೆಯನ್ನು ತೆಗೆದುಕೊಂಡು ಹೋಗಿ, ಯುದ್ಧ ಮಾಡಬಾರದು. ಆದ್ರೆ ಭೀಮ, ದುರ್ಯೋಧನನ ತೊಡೆಗೆ, ಗದೆಯಿಂದ ಬಲವಾಗಿ ಹೊಡೆದ. ಆಗ ದುರ್ಯೋಧನ ನೆಲಕ್ಕೆ ಬಿದ್ದು ನರಳಿ ನರಳಿ ಪ್ರಾಣ ತ್ಯಾಗ ಮಾಡಿದ.

About The Author