Spiritual: ಕೆಲವರು ಹಿಂದೂ ಧರ್ಮದ ಕೆಲ ನಿಯಮಗಳನ್ನು ಮೂಢನಂಬಿಕೆ ಎಂದು ಹೇಳಬಹುದು. ಆದರೆ ಅದನ್ನು ಅನುಭವಿಸಿದವರಿಗೆ ಮಾತ್ರ, ಅದು ಮೂಢನಂಬಿಕೆಯೇ, ಸತ್ಯವೇ ಅಂತಾ ಗೊತ್ತಿರುತ್ತದೆ.
ಅದರಲ್ಲಿ ಕೆಲವರಿಗೆ ಬಡತನ ಬರುವ ಮುನ್ನವೇ, ಮನೆಯಲ್ಲಿ ಕೆಲವು ದಿನಸಿ ವಸ್ತುಗಳು ಪೂರ್ತಿಯಾಗಿ ಖಾಲಿಯಾಗುತ್ತದೆ. ಇದರ ಅರ್ಥವೇನೆಂದರೆ, ಆ ಮನೆಯ ಆರ್ಥಿಕ ಪರಿಸ್ಥಿತಿ ಹದಗೆಡುವ ಮುನ್ಸೂಚನೆ ಎಂದರ್ಥ. ಹಾಗಾಗಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕು ಅಂದ್ರೆ, ಮನೆಯಲ್ಲಿ ಕೆಲ ವಸ್ತುಗಳೂ ಪೂರ್ತಿಯಾಗಿ ಖಾಲಿಯಾಗದಂತೆ ನೋಡಿಕೊಳ್ಳಿ. ಅಂಥ ವಸ್ತುಗಳು ಯಾವುದು ಅಂತಾ ತಿಳಿಯೋಣ ಬನ್ನಿ..
ಅಕ್ಕಿ: ಅಕ್ಕಿ ಡಬ್ಬ ಎಂದಿಗೂ ಖಾಲಿಯಾಗಬಾರದು. ಅಕ್ಕಿ ಡಬ್ಬದಲ್ಲಿ ಕೊಂಚ ಅಕ್ಕಿ ಇರುವಾಗಲೇ, ಅಕ್ಕಿ ಖರೀದಿಸಿ, ತಂದು ಅದಕ್ಕೆ ಸೇರಿಸಬೇಕು. ಅಕ್ಕಿ ಡಬ್ಬ ಖಾಲಿಯಾಗಿದೆ ಎಂದರೆ, ಆ ಮನೆಗೆ ದರಿದ್ರ ಬಂದಿದೆ ಅಂತಲೇ ಅರ್ಥ. ಅಲ್ಲದೇ, ರಾತ್ರಿ ಅನ್ನದ ಪಾತ್ರಿ ಪೂರ್ತಿ ಖಾಲಿ ಮಾಡಿ, ಹಾಗೇ ಇಡಕೂಡದು. ಅದರಲ್ಲಿ ಅನ್ನವಿರಬೇಕು ಅಥವಾ ಆ ಪಾತ್ರೆ ತೊಳೆದಿಡಬೇಕು. ಇಲ್ಲವಾದಲ್ಲಿ, ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ.
ಅರಿಶಿನ: ಅರಿಶಿನವನ್ನು ಅಡುಗೆ ಮಾಡುವುದರ ಜೊತೆಗೆ, ಪೂಜೆಗೆ ಕೂಡ ಬಳಸಲಾಗುತ್ತದೆ. ಅಲ್ಲದೇ, ಇದು ಔಷಧಿಯ ಗುಣಗಳನ್ನು ಹೊಂದಿರುವುದರಿಂದ, ಗಾಯವಾದಾಗ, ಕೂಡ ಅರಿಶಿನ ಹಚ್ಚಲಾಗುತ್ತದೆ. ಅರಿಶಿನ ಮನೆಯಲ್ಲಿ ಪೂರ್ತಿ ಖಾಲಿಯಾದರೆ, ಜಾತಕದಲ್ಲಿಗುರುದೋಷ ಉಂಟಾಗುತ್ತದೆ ಅಂತಾ ಹೇಳಲಾಗುತ್ತದೆ. ನಿಮ್ಮ ಜಾತಕದಲ್ಲಿ ಗುರು ಉತ್ತಮ ಸ್ಥಾನದಲ್ಲಿ ಇರಬೇಕು ಅಂದ್ರೆ, ಮನೆಯಲ್ಲಿ ಅರಿಶಿನ ಪೂರ್ತಿಯಾಗಿ ಖಾಲಿಯಾಗದಂತೆ ನೋಡಿಕೊಳ್ಳಿ.
ಉಪ್ಪು: ಉಪ್ಪು ಬಳಸದೇ ಯಾವ ಅಡಿಗೆಯೂ ರುಚಿಸುವುದಿಲ್ಲ. ಅಲ್ಲದೇ, ಉಪ್ಪನ್ನು ಬರೀ ಅಡುಗೆಗೆ ಅಲ್ಲದೇ, ಕೆಲ ದೈವಿಕ ಮತ್ತು ಮಾಂತ್ರಿಕ ಪೂಜೆಗಳಲ್ಲಿ ಬಳಸಲಾಗುತ್ತದೆ. ಹಾಗಾಗಿ ಮನೆಯಲ್ಲಿ ಎಂದಿಗೂ ಉಪ್ಪು ಖಾಲಿಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೇ, ಉಪ್ಪನ್ನು ಎಂದಿಗೂ ದಾನ ನೀಡಬಾರದು. ಉಪ್ಪು ದಾನ ನೀಡುವುದರಿಂದ, ಮನೆಗೆ ಒಳ್ಳೆಯದಾಗುವುದಿಲ್ಲ ಅನ್ನೋ ನಂಬಿಕೆ ಇದೆ.
ಪತ್ನಿಯಲ್ಲಿ ಇಂಥ ಗುಣವಿದ್ದರೆ, ಪತಿ ಶ್ರೀಮಂತನಾಗುವುದು ಗ್ಯಾರಂಟಿ ಅಂತಾರೆ ಚಾಣಕ್ಯರು