ಸನಾತನ ಧರ್ಮದಲ್ಲಿ ಹುಟ್ಟಿದಾಗಿನಿಂದ ಹಿಡಿದು ಸಾವಿನವರೆಗೂ ಮಾಡಬೇಕಾದ ಹಲವು ಪದ್ಧತಿಗಳಿದೆ. ಆ ಪದ್ಧತಿಗಳನ್ನ ನಿಭಾಯಿಸಿದ್ದಲ್ಲಿ ಮಾತ್ರ, ಮನುಷ್ಯನಿಗೆ ಮುಕ್ತಿ ಸಿಕ್ಕು, ಅವನು ಮುಂದಿನ ಜನ್ಮದಲ್ಲಿ ಉತ್ತಮ ಯೋನಿಯಲ್ಲಿ ಜನ್ಮ ಪಡೆಯುತ್ತಾನೆ. ಹಾಗಾಗಿ ನಾವಿಂದು ವ್ಯಕ್ತಿಯ ಶವ ಸಂಸ್ಕಾರದ ಬಳಿಕ ಯಾವ ಕೆಲಸವನ್ನು ಮಾಡಲೇಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ..
ಹಿಂದೂ ಧರ್ಮದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ ಬಳಿಕ, ಅವನ ಶವ ಸಂಸ್ಕಾರವನ್ನು ಪದ್ಧತಿ ಪ್ರಕಾರವಾಗಿ ಮಾಡಬೇಕು. ಶವಕ್ಕೆ ಸ್ನಾನ ಮಾಡಿಸಿ, ಪೂಜೆ ಮಾಡಿ, ಹಲವು ಪದ್ಧತಿಯನ್ನು ನೆರವೇರಿಸಿ, ರಾಮನಾಮ ಜಪಿಸಿ, ಆತನ ಶವ ತೆಗೆದುಕೊಂಡು ಹೋಗಲಾಗುತ್ತದೆ. ಸ್ಮಶಾನದಲ್ಲಿ ಸಂಸ್ಕಾರಕ್ಕಾಗಿ ಬಳಸುವ ಕಟ್ಟಿಗೆ, ತುಪ್ಪ, ಇತ್ಯಾದಿ ವಸ್ತುಗಳಿಂದ ಶವವನ್ನು ಮುಚ್ಚಿ, ಮನೆ ಮಗನಾದವನು ಮಣ್ಣಿನ ಮಡಿಕೆ ಹಿಡಿದು ಶವವನ್ನ ಸುತ್ತಿ, ಪ್ರದಕ್ಷಿಣೆ ಹಾಕಿ, ಮಡಿಕೆ ಒಡೆದ ಬಳಿಕ, ಅಗ್ನಿಯಿಂದ ಶವವನ್ನ ಹೊತ್ತಿಸಲಾಗುತ್ತದೆ. ಹೀಗೆ ಓರ್ವ ಹಿಂದೂವನ್ನು ಪದ್ಧತಿ ಪ್ರಕಾರವಾಗಿ ಪ್ರಪಂಚದಿಂದ ಬೀಳ್ಕೊಡಬೇಕಾಗುತ್ತದೆ.
ಬಾಸ್ಮತಿ ಅನ್ನವನ್ನು ಸೇವಿಸುವಾಗ ಈ ಅಂಶವನ್ನು ಖಂಡಿತ ನೆನಪಿನಲ್ಲಿಡಿ..
ಎರಡನೇಯ ಕೆಲಸವೆಂದರೆ, ಸತ್ತು ಹೋದ ದಿನದಿಂದ ಹಿಡಿದು 13ನೇ ದಿವಸದವರೆಗೂ, ಅಂತಿಮ ಸಂಸ್ಕಾರ ಮಾಡಿದವರು, ಕ್ರಿಯೆ ಹಿಡಿಯಬೇಕಾಗುತ್ತದೆ. ಹಾಗೆ ಕ್ರಿಯೆ ಹಿಡಿದವರು, ದಿನಕ್ಕೆ ಒಮ್ಮೆ ಮಾತ್ರ ಊಟ ಮಾಡಬೇಕು. ಯಾರನ್ನೂ ಮುಟ್ಟಬಾರದು. ಕೂದಲು ತೆಗಿಸಬೇಕು. ಚಾಪೆ ಮೇಲೆಯೇ ಮಲಗಬೇಕು. ಹೀಗೆ ಇತ್ಯಾದಿ ಕ್ರಮಗಳಿದೆ. ಅದನ್ನ ನಿಭಾಯಿಸಬೇಕು.
ಮೂರನೇಯ ಕೆಲಸವೆಂದರೆ, 13ನೇಯ ದಿನ ತಿಥಿಕಾರ್ಯವನ್ನು ಪದ್ಧತಿ ಪ್ರಕಾರವಾಗಿ ಮಾಡಬೇಕು. ಈ ದಿನ ಬಡವರಿಗೆ ಅನ್ನದಾನ, ವಸ್ತ್ರದಾನ ಮಾಡಬೇಕು. ಸತ್ತವರ ಹೆಸರಿನಲ್ಲಿ ಪೂಜೆ ಪುನಸ್ಕಾರ, ಪಿಂಡ ಪ್ರಧಾನ ಮಾಡಲಾಗುತ್ತದೆ. ಗೋವಿಗೆ, ಕಾಗೆಗೆ ನೈವೇದ್ಯವನ್ನಿಡಲಾಗುತ್ತದೆ. ಅದನ್ನು ಗೋವು ಮತ್ತು ಕಾಗೆ ತಿಂದರೆ, ಸತ್ತವರ ಆತ್ಮಕ್ಕೆ ಶಾಂತಿ ಸಿಕ್ಕಿದ ಎಂಬ ಸೂಚನೆ ಅನ್ನೋದು ಹಿರಿಯರ ನಂಬಿಕೆ.

