Recipe: ದಕ್ಷಿಣ ಭಾರತೀಯರು ತಾವರೆ ಬೀಜವನ್ನು ಕಡಿಮೆ ಉಪಯೋಗಿಸುತ್ತಾರೆ. ಆದರೆ ಮಖಾನಾ ಎಂದು ಕರೆಯಲ್ಪಡುವ ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾಗಿ ಇಂದು ನಾವು ಮಖಾನಾ ಖೀರ್ ಮಾಡುವುದು ಹೇಗೆ ಎಂದು ಹೇಳಲಿದ್ದೇವೆ.
ಅರ್ಧ ಲೀಟರ್ ಹಾಲನ್ನು ಪ್ಯಾನ್ಗೆ ಹಾಕಿ ಚೆನ್ನಾಗಿ ಕುದಿಸಿ. ಇನ್ನೊಂದು ಪ್ಯಾನ್ನಲ್ಲಿ ಎರಡು ಸ್ಪೂನ್ ತುಪ್ಪ ಹಾಕಿ, 1 ಕಪ್ ಮಖಾನಾವನ್ನು ಹುರಿಯಿರಿ. ಇತ್ತ ಕುದಿ ಬಂದ ಹಾಲಿನಿಂದ 2 ಸ್ಪೂನ್ ಹಾಲು ತೆಗೆದು, ಚಿಟಿಕೆ ಕೇಸರಿ ದಳಕ್ಕೆ ಹಾಕಿ ಕೇಸರಿಯನ್ನು ನೆನೆಸಿಡಿ. ಈಗ ಕುದಿ ಬಂದ ಹಾಲಿಗೆ, ಹುರಿದಿಟ್ಟ ಮಖಾನಾವನ್ನು ಹಾಕಿ.
2 ನಿಮಿಷದ ಬಳಿಕ 5 ಟೇಬಲ್ ಸ್ಪೂನ್ ಸಕ್ಕರೆ, ಡ್ರೈಫ್ರೂಟ್ಸ್ ಸೇರಿಸಿ. ಕುದಿ ಬಂದ ಬಳಿಕ ಚಿಟಿಕೆ ಏಲಕ್ಕಿ ಪುಡಿ, ನೆನೆಸಿಟ್ಟ ಕೇಸರಿ ಸೇರಿಸಿ ಮಿಕ್ಸ್ ಮಾಡಿದ್ರೆ ಮಖಾನಾ ಖೀರ್ ರೆಡಿ.
ಈ 5 ಆಹಾರಗಳ ಸೇವನೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ..
ಗ್ಯಾಸ್ ಕಂಟ್ರೋಲ್ ಮಾಡುವುದರಿಂದ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಗೊತ್ತಾ..?




