Health Tips: ಪುರುಷರ ಸಮಸ್ಯೆ ಬಗ್ಗೆ ವೈದ್ಯರಾದ ಡಾ. ಅರ್ಜುನ್ ಅವರು ಹಲವು ವಿಚಾರಗಳನ್ನು ಹೇಳಿದ್ದಾರೆ. ಇಂದು ಗಂಡಸರಿಗಿರುವ ಕೆಲವು ಸಮಸ್ಯೆಗಳ ಬಗ್ಗೆಯೂ ವೈದ್ಯರು ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಗಂಡಸರಿಗಿರುವ ಮುಖ್ಯವಾದ ಸಮಸ್ಯೆ ಅಂದ್ರೆ, ಶಿಶ್ನದ ಬಳಿ ಆಗುವ ಪ್ರಾಬ್ಲಂ. ಹಾಗಾಗಿ ಗಂಡು ಮಗು ಹುಟ್ಟಿದಾಗ, ಅದರ ಬೆಳವಣಿಗೆಯಾಗುವಾಗ, ಮಗುವಿನ ಶಿಶ್ನದ ಬೆಳವಣಿಗೆ ಸರಿ ಇದೆಯಾ ಇಲ್ಲವಾ ಅನ್ನುವುದನ್ನು ತಂದೆ ತಾಯಿ ಗಮನಿಸಬೇಕು ಅಂತಾರೆ ವೈದ್ಯರು. ಯಾಕಂದ್ರೆ ಚಿಕ್ಕ ವಯಸ್ಸಿನಿಂದ ಈ ಸಮಸ್ಯೆ ಉದ್ಭವಿಸುವ ತನಕ, ಪುರುಷರಿಗೆ ಈ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಆ ಬಗ್ಗೆ ಅವರು ಯೋಚಿಸಿರುವುದೇ ಇಲ್ಲ. ಆಗ ಸಮಸ್ಯೆ ದೊಡ್ಡದಾಗಿ ಬಿಟ್ಟಿರುತ್ತದೆ.
ಹಾಗಾಗಿ ಮಗು ಹುಟ್ಟಿದಾಗಿನಿಂದ ಅದರ ಶಿಶ್ನದ ಬೆಳವಣಿಗೆ ಸರಿಯಾಗಿ ಇದೆಯೋ ಇಲ್ಲವೋ ಅನ್ನುವುದನ್ನ ಗಮನಿಸಬೇಕು. ಮತ್ತು ನೀವು ವೈದ್ಯರ ಬಳಿ ಕರೆದೊಯ್ದಾಗ ಈ ಬಗ್ಗೆ ವಿಚಾರಿಸಬೇಕು. ಶಿಶ್ನದ ಮೇಲಿರುವ ಚರ್ಮ ಹೆಚ್ಚು ಬೆಳೆದಿದ್ದರೆ, ಮತ್ತು ಅದನ್ನು ನೀವು ನಿರ್ಲಕ್ಷ್ಯ ಮಾಡಿದರೆ, ಅಧು ಕ್ಯಾನ್ಸರ್ ಆಗಿ ಮಾರ್ಪಾಡಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿಯೇ ಆ ಚರ್ಮವನ್ನು ಚಿಕಿತ್ಸೆ ಮೂಲಕ ತೆಗಿಸಬೇಕು.
ಸ್ಮೆಗ್ಮಾ ಅನ್ನುವ ಅಂಶ ಶಿಶ್ನದಲ್ಲಿ ಸೇರುತ್ತದೆ. ಹಾಗೆ ಸೇರಿದಾಗ, ಕ್ಯಾನ್ಸರ್ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಗುವಿರುವಾಗಲೇ, ಈ ಬಗ್ಗೆ ತಂದೆ ತಾಯಿ ಗಮನ ಹರಿಸಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..