ಆಫೀಸಿಗೆ ಹೋಗೋಕ್ಕೆ ಲೇಟ್ ಆದ್ರೆ, ರಾತ್ರಿ ಊಟಕ್ಕೆ ಧೀಡಿರ್ ಅಂತಾ ಏನಾದ್ರೂ ಮಾಡಬೇಕು ಅನ್ನಿಸಿದ್ರೆ ನೀವು ಮಸಾಲಾ ಪುಲಾವ್ ಮಾಡಬಹುದು. ಹಾಗಾದ್ರೆ ಮಸಾಲಾ ಪಲಾವ್ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು..? ಅದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಪೇರಲೆ ಮರದ ಎಲೆಗಳು ಆರೋಗ್ಯಕ್ಕೆಷ್ಟು ಲಾಭಕಾರಿ ಗೊತ್ತಾ..?
ಬೇಕಾಗುವ ಸಾಮಗ್ರಿ: ಬಾಸ್ಮತಿ ಅಕ್ಕಿ, ಕ್ಯಾರೆಟ್, ಈರುಳ್ಳಿ, ಬಟಾಟೆ, ಬೀನ್ಸ್, ಬಟಾಣಿ, ಹೂಕೋಸು, ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಜೀರಿಗೆ, ಸೋಂಪು, ಗಸಗಸೆ, ಶುಂಠಿ, ಬೆಳ್ಳುಳ್ಳಿ, ಕೊತ್ತೊಂಬರಿಸೊಪ್ಪು, ಒಂದು ಹಸಿ ಮೆಣಸು, ಸೋಯಾ ಚಂಕ್ಸ್, ಕಸೂರಿ ಮೇಥಿ, ಧನಿಯಾ ಪುಡಿ, ಗರಂ ಮಸಾಲೆ ಪುಡಿ, ಅರಿಶಿನ, ನಾಲ್ಕು ಸ್ಪೂನ್ ತುಪ್ಪ,, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲು ಮಿಕ್ಸಿ ಜಾರ್‌ನಲ್ಲಿ ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಜೀರಿಗೆ, ಸೋಂಪು, ಗಸಗಸೆ, ಚಕ್ಕೆ, ಲವಂಗ, ಏಲಕ್ಕಿ, ಧನಿಯಾ ಪುಡಿ, ಗರಂ ಮಸಾಲೆ ಪುಡಿ, ಇವಿಷ್ಟನ್ನು ಹಾಕಿ, ಗ್ರೈಂಡ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಈಗ ಬಿಸ ಬಿಸಿ ನೀರಿನಲ್ಲಿ ತೊಳೆದು ಸ್‌ವಚ್ಛಗೊಳಿಸಿದ ಸೋಯಾ ಚಂಕ್ಸ್ ಹಾಕಿಡಿ. ಅದು ಸ್ವಲ್ಪ ಮೆತ್ತಗಾದ ಮೇಲೆ ನೀರಿನಿಂದ ಬೇರ್ಪಡಿಸಿ.
ಸಂಜೆ ತಿಂಡಿಗಾಗಿ ಮಸಾಲಾ ಪೂರಿ ರೆಸಿಪಿ..
ಈಗ ಗ್ಯಾಸ್ ಆನ್ ಮಾಡಿ ಕುಕ್ಕರ್ ಇರಿಸಿ, ಅದಕ್ಕೆ ತುಪ್ಪ, ಪಲಾವ್ ಎಲೆ ಹಾಕಿ ಬಾಡಿಸಿ. ನಂತರ ಈರುಳ್ಳಿ ಹಾಕಿ ಹುರಿದು, ಕ್ಯಾರೆಟ್, ಬೀನ್ಸ್, ಆಲೂಗಟ್ಟೆ, ಬಟಾಣಿ, ಹೂಕೋಸು ಹಾಕಿ ಹುರಿಯಿರಿ. ನಂತರ ಸ್ವಚ್ಛವಾಗಿ ತೊಳೆದ ಅಕ್ಕಿ, ಸೋಯಾ ಚಂಕ್ಸ್, ರೆಡಿ ಮಾಡಿಟ್ಟುಕೊಂಡ ಮಸಾಲೆ ಹಾಕಿ ಮಿಕ್ಸ್ ಮಾಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪು, ನೀರು ಹಾಕಿ, ಮೂರು ವಿಶಲ್ ಬರಿಸಿದ್ರೆ ಧಿಡೀರ್ ಪುಲಾವ್ ರೆಡಿ.