Friday, June 20, 2025

Latest Posts

ಮೆಹೆಂದಿ ಜೊತೆ ಇದನ್ನ ಮಿಕ್ಸ್ ಮಾಡಿದ್ರೆ, ನಿಮ್ಮ ಕೂದಲ ಕಲರ್ ಸೂಪರ್ ಆಗಿರತ್ತೆ ನೋಡಿ..

- Advertisement -

ಇಂದಿನ ಕಾಲದಲ್ಲಿ ಹೆಚ್ಚಿನ ಮಹಿಳೆಯರು ತಲೆಗೂದಲಿಗೆ ಕಲರ್ ಬದಲು ಮೆಹೆಂದಿಯನ್ನ ಹಚ್ಚೋಕ್ಕೆ ಇಷ್ಟಪಡ್ತಾರೆ. ಬರೀ ಮೆಹೆಂದಿ ಅಷ್ಟೇ ಹಚ್ಚೋ ಬದಲು, ಅದರೊಟ್ಟಿಗೆ ಕೆಲ ವಸ್ತುಗಳನ್ನು ಸೇರಿಸಿದ್ರೆ, ಇನ್ನೂ ಆರೋಗ್ಯವಾಗಿ, ಕೂದಲು ಚೆಂದವಾಗಿ ಕಾಣತ್ತೆ. ಹಾಗಾದ್ರೆ ಗ್ರೇ ಕಲರ್ ಕೂದಲಿಗಾಗಿ ಮೆಹೆಂದಿ ಜೊತೆ ಏನನ್ನು ಸೇರಿಸಬೇಕು ಅಂತಾ ತಿಳಿಯೋಣ ಬನ್ನಿ..

ಕಪ್ಪು ಕಡಲೆಯನ್ನ ಹೀಗೆ ಸೇವಿಸಿದ್ರೆ ನಿಮ್ಮ ದೇಹದ ತೂಕವನ್ನು ಬೇಗ ಇಳಿಸಬಹುದು..

ಎರಡು ಸ್ಪೂನ್ ಮೆಹೆಂದಿಯೊಟ್ಟಿಗೆ ಒಂದು ಸ್ಪೂನ್ ಕಾಫಿ ಪುಡಿ ಸೇರಿಸಿ ತಲೆಗೂದಲಿಗೆ ಹಚ್ಚಿದ್ರೆ, ತಲೆಗೂದಲು ಸುಂದರವಾಗಿ ಕಾಣತ್ತೆ. ಚೆನ್ನಾಗಿ ಗ್ರೇ ಕಲರ್ ಬರತ್ತೆ. ಒಂದು ಸ್ಪೂನ್ ಕಾಫಿ ಪುಡಿ ಮತ್ತು ಒಂದು ಕಪ್ ಬಿಸಿ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, 5 ನಿಮಿಷ ಹಾಗೆ ಬಿಡಿ. ನಂತರ ಇದನ್ನ ಎರಡು ಸ್ಪೂನ್ ಮೆಹೆಂದಿಗೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಈಗ ಈ ಮಿಶ್ರಣವನ್ನ ರಾತ್ರಿಯಿಡೀ ಹಾಗೇ ಬಿಡಿ.

ಮರುದಿನ ಬೆಳಿಗ್ಗೆ ಇದನ್ನ ಕೂದಲಿಗೆ ಹಚ್ಚಿ, ಒಣಗಿದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಹೇರ್ ವಾಶ್ ಮಾಡಿ. ಈ ವೇಳೆ ಶ್ಯಾಂಪೂ ಬಳಸಬೇಡಿ. ಎರಡು ದಿನ ಬಿಟ್ಟು ಶ್ಯಾಂಪೂ ಹಾಕಿ ಹೇರ್ ವಾಶ್ ಮಾಡಿ. ಮತ್ತು ಕೂದಲಿಗೆ ಮೆಹೆಂದಿ ಹಚ್ಚುವಾಗ ಕೈಗೆ ಗ್ಲೌಸ್ ಹಾಕಿಕೊಳ್ಳಿ.

ಥೈರಾಯ್ಡ್ ಸಮಸ್ಯೆ ಇದ್ದವರು ಈ ವಿಚಾರವನ್ನ ಖಂಡಿತ ನೆನಪಿನಲ್ಲಿಡಿ..

ಎರಡನೇಯ ಟಿಪ್ಸ್ ಅಂದ್ರೆ, 2 ಸ್ಪೂನ್ ಮೆಹೆಂದಿಗೆ ಒಂದು ಕಪ್ ಬಿಸಿ ನೀರು ಹಾಕಿ, ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಒಂದು ಸ್ಪೂನ್ ಇಂಡಿಗೋ ಪೌಡರನ್ನು ನೀರಿನಲ್ಲಿ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಮತ್ತು ಇದನ್ನು ರಾತ್ರಿ ನೆನೆಸಿಟ್ಟಿದ್ದ ಮೆಹೆಂದಿ ಮಿಶ್ರಣಕ್ಕೆ ಸೇರಿಸಿ, ಕೂದಲಿಗೆ ಅಪ್ಲೈ ಮಾಡಿ. ಇನ್ನು ನಿಮಗೆ ಕೂದಲಿಗೆ ಮೆಹೆಂದಿ ಹಚ್ಚಿದ್ರೆ ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ ನಂತರ ಬಳಸುವುದು ಉತ್ತಮ.

- Advertisement -

Latest Posts

Don't Miss