Thursday, December 12, 2024

Latest Posts

ಈ ದೇವಸ್ಥಾನಗಳಿಗೆ ಪುರುಷರು ಹೋಗುವಂತಿಲ್ಲ..

- Advertisement -

ಭಾರತದಲ್ಲಿ ಲಕ್ಷಾಂತರ ಮಂದಿರಗಳಿದೆ. ಒಂದೊಂದು ಮಂದಿರಕ್ಕೂ ಒಂದೊಂದು ಇತಿಹಾಸವಿದೆ. ಕೆಲವು ಪುರಾತನ ಮಂದಿರ, ಇನ್ನು ಕೆಲವು ಶ್ರೀಮಂತ ಮಂದಿರ. ಹೀಗೆ ಹಲವಾರು ಮಂದಿರಗಳನ್ನೊಳಗೊಂಡ ಭೂಮಿ ನಮ್ಮ ಭಾರತ. ಆದ್ರೆ ಎಲ್ಲ ದೇವಸ್ಥಾನಕ್ಕೂ ಎಲ್ಲರೂ ಹೋಗುವಂತಿಲ್ಲ. ಅದೇ ರೀತಿ ಭಾರತದಲ್ಲಿ ಪುರುಷರಿಗೆ ಪ್ರವೇಶವಿಲ್ಲದ ಕೆಲ ದೇವಸ್ಥಾನಗಳಿದೆ. ಆ ದೇವಸ್ಥಾನದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಭ್ರೂಣಹತ್ಯೆ ಮಾಡುವವರಿಗೆ ನರಕದಲ್ಲಿ ಎಂಥ ಶಿಕ್ಷೆ ಸಿಗುತ್ತದೆ ಗೊತ್ತಾ..?

ಮೊದಲನೇಯದ್ದು ಜೋಧಪುರದಲ್ಲಿರುವ ಸಂತೋಷಿ ಮಾತಾ ಮಂದಿರ. ಈ ದೇವಸ್ಥಾನದಲ್ಲಿ ಶುಕ್ರವಾರದ ದಿನ ಪುರುಷರಿಗೆ ಪ್ರವೇಶವಿಲ್ಲ. ಇನ್ನುಳಿದ ದಿನ ದ್ವಾರದ ಬಳಿ ನಿಂತು ಪುರುಷರು ದರ್ಶನ ಪಡೆಯಬಹುದು. ಆದ್ರೆ ಇಲ್ಲಿ ಮಹಿಳೆಯರೇ ದೇವಿಯ ಪೂಜೆ ಮಾಡುತ್ತಾರೆ. ಶುಕ್ರವಾರದ ದಿನ ಇಲ್ಲಿ ಹಲವಾರು ಮಹಿಳೆಯರು ಸಂತೋಷಿ ಮಾತೆಯ ವೃತ ಮಾಡಿ, ಪೂಜೆ ಸಲ್ಲಿಸಲು ಬರುವ ಕಾರಣಕ್ಕೆ, ಶುಕ್ರವಾರದ ದಿನ ಸಂಪೂರ್ಣವಾಗಿ ಪುರುಷರಿಗೆ ನಿರ್ಬಂಧ ಹೇರಲಾಗಿದೆ.

ರಾವಣನಲ್ಲಿದ್ದ ಈ 5 ಗುಣಗಳನ್ನು ನಾವೂ ಕೂಡ ಅಳವಡಿಸಿಕೊಂಡರೆ, ನಮ್ಮ ಯಶಸ್ಸು ಖಚಿತ..

ಎರಡನೇಯದ್ದು ಭಗವತಿ ಮಂದಿರ. ಕನ್ಯಾಕುಮಾರಿಯಲ್ಲಿರುವ ಭಗವತಿ ದೇವಸ್ಥಾನ. ಈ ದೇವಸ್ಥಾನದಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಮಹಿಳೆಯರಿಗೆ ಮಾತ್ರ ಪ್ರವೇಶವಿದೆ. ಈಕೆಯನ್ನು ಸನ್ಯಾಸಿ ಮಾತೆ ಅಂತಲೂ ಕರೆಯುತ್ತಾರೆ. ಈಕೆಗೆ ಮಹಿಳಾ ಪುರೋಹಿತೆಯೇ ಪೂಜೆ ಸಲ್ಲಿಸುತ್ತಾರೆ.

ಗಣೇಶ ಕುಬೇರನನ್ನೇ ತಿನ್ನಲು ಹೋಗಿದ್ದೇಕೆ..? ಕುಬೇರ ಅಂಥಾದ್ದೇನು ಮಾಡಿದ್ದ..?

ಮೂರನೇಯದ್ದು ಕಾಮಾಕ್ಯ ದೇವಸ್ಥಾನ. ಭಾರತದಲ್ಲಿರುವ 108 ಶಕ್ತಿಪೀಠಗಳಲ್ಲಿ ಕಾಮಾಕ್ಯ ಮಂದಿರ ಕೂಡ ಒಂದು. ಇಲ್ಲಿ ದೇವಿಯ ಯೋನಿಗೆ ಪೂಜೆ ಸಲ್ಲಿಸಲಾಗುತ್ತದೆ. ಮತ್ತು ಇಲ್ಲಿ ದೇವಿಯ ಯಾವುದೇ ವಿಗ್ರಹವಿಲ್ಲ. ಇಲ್ಲಿ ಬಂದು ಯಾವ ಮಹಿಳೆ ದೇವಿಯನ್ನು ಮನಸ್ಸಿನಿಂದ ಪ್ರಾರ್ಥಿಸಿ ಹೋಗುತ್ತಾಳೋ, ಅವಳ ಸಕಲ ಮನೋಕಾಮನೆಗಳು ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆ ಇದೆ. ಇಲ್ಲಿ ದೇವಿ ಯೋನಿಗೆ ಪೂಜೆ ಸಲ್ಲುವುದರಿಂದ, ತಿಂಗಳಲ್ಲಿ ನಾಲ್ಕು ದಿನ ಆಕೆಗೆ ಋತುಚಕ್ರದ ಸಮಯವಾಗಿರುತ್ತದೆ. ಹಾಾಗಾಗಿ ಈ ವೇಳೆ ಇಲ್ಲಿ ಪುರುಷರಿಗೆ ಪ್ರವೇಶವಿರುವುದಿಲ್ಲ.

ಅಪ್ಪ ಅಮ್ಮನ ಈ ತಪ್ಪಿನಿಂದ ಮಕ್ಕಳು ಇಂಥ ಶಿಕ್ಷೆ ಅನುಭವಿಸಬೇಕಾಗುತ್ತದೆ…

ನಾಲ್ಕನೇಯದ್ದು ಬ್ರಹ್ಮನ ದೇವಸ್ಥಾನ. ರಾಜಸ್ತಾನದ ಪುಷ್ಕರದಲ್ಲಿ ಬ್ರಹ್ಮನ ದೇವಸ್ಥಾನವಿದ್ದು, ಇದು ಪ್ರಪಂಚದಲ್ಲಿರುವ ಬ್ರಹ್ಮನ ಏಕೈಕ ದೇವಸ್ಥಾನವಾಗಿದೆ. ಈ ದೇವಸ್ಥಾನಕ್ಕೆ ವಿವಾಹಿತ ಪುರುಷನಿಗೆ ಪ್ರವೇಶವಿಲ್ಲ. ದೇವಿ ಸರಸ್ವತಿಯ ಶಾಪದಿಂದಾಗಿ ಇಲ್ಲಿ ಈ ನಿಯಮಮ ಬಂದಿದೆ. ವಿವಾಹಿತ ಪುರುಷರು ಹರೊಗೆ ನಿಂತು ನಮಸ್ಕಾರ ಮಾಡಬಹುದು.

ಈ ದೇವಸ್ಥಾನದಲ್ಲಿ ಶಿವನಿಗಿಂತ ಮುಂಚೆ ರಾವಣನಿಗೆ ಪೂಜೆ ಸಲ್ಲುತ್ತದೆ..

ಐದನೇಯದ್ದು ಆಟ್ಟುಕಾಲ ದೇವಸ್ಥಾನ: ಕೇರಳದ ತಿರುವನಂತಪುರದಲ್ಲಿ ಭಗವತಿ ದೇವಿಯ ಆಟ್ಟುಕಾಲ ದೇವಸ್ಥಾನವಿದೆ. ಮಾಘ ಮಾಸದಲ್ಲಿ ಬರುವ ಪೊಂಗಲ್ ಹಬ್ಬವನ್ನ ಈ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ವೇಳೆ 10 ದಿನಗಳ ಕಾಲ ದೇವಿ ಮಂದಿರದಲ್ಲಿ ವಾಸ ಮಾಡುತ್ತಾಳೆಂಬ ನಂಬಿಕೆ ಇದೆ. ಹಾಗಾಗಿ ಈ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ದೇವಸ್ಥಾನಕ್ಕೆ ಪುರುಷರಿಗೆ ಪ್ರವೇಶವಿಲ್ಲ.

- Advertisement -

Latest Posts

Don't Miss