ಸಂಧಿವಾತ, ಮೂಳೆ ನೋವೆಲ್ಲ ಬರಬಾರದು ಅಂದ್ರೆ ಏನೇನು ಮಾಡಬೇಕು ಅಂತಾ, ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ, ಇಂದು ನಾವು ಕೈ ಕಾಲು ನೋವು, ಮೂಳೆ ನೋವೆಲ್ಲ ಬರಬಾರದು ಅಂದ್ರೆ ಒಂದು ಲಾಡುವನ್ನ ತಿನ್ನಬೇಕು. ಅದ್ಯಾವ ಲಾಡು, ಅದನ್ನ ಹೇಗೆ ಮಾಡಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ..
ಕೈ ಕಾಲು ನೋವಿರುವವರಿಗೆ, ಪದೇ ಪದೇ ಜ್ವರ ಬರುವವರಿಗೆ, ಬಿಪಿ, ಶುಗರ್ ಇದ್ದವರು ಈ ಲಾಡು ತಿಂದರೆ ಭಾರಿ ಒಳ್ಳೆಯದು. ಇದು ಮೆಂತ್ಯೆ ಲಾಡು. ವಾರಕ್ಕೆ ಎರಡರಿಂದ ಮೂರು ಬಾರಿ ನೀವು ಮೆಂತ್ಯೆ ಲಾಡು ತಿನ್ನಬಹುದು. ಅದು ಚಿಕ್ಕ ಸೈಜ್ ಲಾಡು ಆಗಿರಲಿ. ಗರ್ಭಿಣಿಯರಿಗೂ ಕೂಡ ಮೆಂತ್ಯೆ ಲಾಡು ತಿನ್ನಿಸಲಾಗತ್ತೆ. ಆದ್ರೆ ಇದನ್ನ ಹಿರಿಯರ ಬಳಿ ಅಥವಾ ವೈದ್ಯರ ಬಳಿ ಕೇಳಿ ಕೊಡಬೇಕು. ಮೆಂತ್ಯೆ ಲಾಡು ಸೇವನೆ ಮಾಡಿದ್ರೆ, ನಾರ್ಮಲ್ ಡಿಲೆವರಿಯಾಗಲು ಇದು ಸಹಕಾರಿಯಾಗುತ್ತದೆ.
ಹಸುವಿನ ಶುದ್ಧ ತುಪ್ಪದಿಂದ ಮೆಂತ್ಯೆ ಲಾಡುವನ್ನ ಮಾಡಬೇಕು. 100 ಗ್ರಾಂ ಮೆಂತ್ಯೆಯನ್ನು ಮಿಕ್ಸಿ ಜಾರ್‌ಗೆ ಹಾಕಿ, ತರಿತರಿಯಾಗಿ ಪೌಡರ್ ಮಾಡಿಕೊಳ್ಳಿ. ಇದಕ್ಕೆ 1 ಕಪ್ ಹಾಲು ಹಾಕಿ ಮಿಕ್ಸ್ ಮಾಡಿ. ಈ ಹಾಲು ಬಿಸಿ ಬಿಸಿಯಾಗಿಯೂ ಇರಬಾರದು. ತಣ್ಣಗೆನೂ ಇರಬಾರದು. ರೂಮ್ ಟೇಂಪ್ರೆಚರ್‌ನಲ್ಲಿರಬೇಕು. ಇದನ್ನು ಅರ್ಧ ಗಂಟೆ ಹಾಗೇ ಬಿಡಿ.
ನಂತರ ಪ್ಯಾನ್ ಬಿಸಿ ಮಾಡಿ, 2 ಸ್ಪೂನ್ ತುಪ್ಪ ಹಾಕಿ, ಡ್ರೈಫ್ರೂಟ್ಸ್ ಹುರಿದುಕೊಳ್ಳಿ. ನಂತರ ಇದೇ ಪ್ಯಾನ್‌ಗೆ ಮತ್ತಷ್ಟು ತುಪ್ಪ ಹಾಕಿ, ಮಖಾನಾ ಹುರಿಯಿರಿ. ನಂತರ ಅಂಟು ಕೂಡ ಹುರಿದುಕೊಳ್ಳಿ. ಇದಾದ ಬಳಿಕ ಒಣ ಕೊಬ್ಬರಿ ಗುರಿದುಕೊಳ್ಳಿ. ಡ್ರೈಫ್ರೂಟ್ಸ್, ಮಖಾನಾ, ಅಂಟು, ಒಣಕೊಬ್ಬರಿ ಇವೆಲ್ಲವನ್ನೂ ಮಿಕ್ಸಿ ಜಾರ್‌ಗೆ ಹಾಕಿ, ಪುಡಿ ಮಾಡಿ.
ಮತ್ತೆ ಪ್ಯಾನ್‌ಗೆ ಗೋಧಿ ಹಿಟ್ಟು, ತುಪ್ಪ ಹಾಕಿ, ಘಮ ಬರೆವವರೆಗೂ ಹುರಿದುಕೊಳ್ಳಿ. ಅದನ್ನ ಪಕ್ಕಕ್ಕಿರಿಸಿ. ಅದೇ ಪ್ಯಾನ್‌ಗೆ ತುಪ್ಪ ಹಾಕಿ, ನೆನೆಸಿಟ್ಟ ಮೆಂತ್ಯೆ ಮತ್ತು ಹಾಲಿನ ಮಿಶ್ರಣವನ್ನು ಇದಕ್ಕೆ ಹಾಕಿ ಹುರಿಯಿರಿ. ಹುರಿದ ಮಿಶ್ರಣವನ್ನ ತಣ್ಣಗೆ ಮಾಡಿ, ಮತ್ತೆ ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿ. ಈಗ ಪ್ಯಾನ್‌ಗೆ ಮತ್ತೆ ತುಪ್ಪ ಹಾಕಿ, 300 ಗ್ರಾಂ ಬೆಲ್ಲದ ಪಾಕ ಮಾಡಿಕೊಳ್ಳಿ. ಪಾಕ ತಯಾರಾದ ಬಳಿಕ, ಹುರಿದು ಪುಡಿ ಮಾಡಿದ ಡ್ರೈಫ್ರೂಟ್ಸ್, ಗೋಧಿ ಹಿಟ್ಟು, ಮೆಂತ್ಯೆ ಮಿಶ್ರಣವನ್ನ ಪಾಕಕ್ಕೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಲಾಡು ಕಟ್ಟಿ.
ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ನಿಂದ ಮುಕ್ತಿ ಬೇಕಿದ್ದರೆ ಹೀಗೆ ಮಾಡಿ..