Sunday, April 20, 2025

Latest Posts

ಮೇಥಿ ಮಟರ್ ಮಲಾಯ್ ರೆಸಿಪಿ..

- Advertisement -

ಚಪಾತಿ ಪೂರಿಯೊಂದಿಗೆ ಸಖತ್‌ ಆಗಿ ಮ್ಯಾಚ್ ಆಗೋದು ಅಂದ್ರೆ ಆಲೂಗಡ್ಡೆ ಮತ್ತು ಬಟಾಣಿಯ ಕೂರ್ಮಾ. ಆದ್ರೆ ನಾವಿವತ್ತು ಸ್ವಲ್ಪ ಚೇಂಜಸ್ ಇರ್ಲಿ ಅಂತಾ, ಮೇಥಿ ಮಟರ್ ಮಲಾಯ್ ಮಸಾಲ ರೆಸಿಪಿಯನ್ನ ಹೇಳಲಿದ್ದೇವೆ. ಹಾಗಾದ್ರೆ ಮೇಥಿ ಮಟರ್ ಮಲಾಯ್ ಮಾಡೋಕ್ಕೆ ಬೇಕಾಗುವ ಸಾಮಗ್ರಿಗಳೇನು..? ಅದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..

ಮಧುಮೇಹವನ್ನು (ಶುಗರ್) ಕಂಟ್ರೋಲಿನಲ್ಲಿಡುವುದು ಹೇಗೆ..?

ಬೇಕಾಗುವ ಸಾಮಗ್ರಿ: ಒಂದು ಕಟ್ಟು ಮೆಂತ್ಯೆ ಎಲೆ, 3 ಈರುಳ್ಳಿ, 3 ಹಸಿ ಮೆಣಸಿನಕಾಯಿ, ಅರ್ಧ ಇಂಚು ಶುಂಠಿ, 5 ಬೆಳ್ಳುಳ್ಳಿ ಎಸಳು, 10 ಗೋಡಂಬಿ, 2 ಕ್ಯೂಬ್ ಬೆಣ್ಣೆ, ಒಂದು ಕಪ್ ಹಸಿ ಬಟಾಣಿ, ಅರ್ಧ ಸ್ಪೂನ್ ಗರಂ ಮಸಾಲೆ, ಒಂದು ಸ್ಪೂನ್ ಧನಿಯಾ ಪುಡಿ, ಕಾಲು ಸ್ಪೂನ್ ಖಾರದ ಪುಡಿ, ಚಿಟಿಕೆ ಅರಿಶಿನ, ಅರ್ಧ ಕಪ್ ಕ್ರೀಮ್,

ಮಾಡುವ ವಿಧಾನ: ಮೊದಲು ಮೆಂತ್ಯೆಯನ್ನ ಕ್ಲೀನ್ ಆಗಿ ತೊಳೆದುಕೊಂಡು, ಸಣ್ಣಗೆ ಕತ್ತರಿಸಿ ಪಕ್ಕಕ್ಕಿರಿಸಿ. ಈಗ ಗ್ಯಾಸ್ ಆನ್ ಮಾಡಿ ಪ್ಯಾನ್ ಇರಿಸಿ, ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಶುಂಠಿ, ಗೋಡಂಬಿ, ಮತ್ತು ಅರ್ಧ ಗ್ಲಾಸ್ ನೀರು ಹಾಕಿ, ಬೇಯಿಸಿ. ಈ ಮಿಶ್ರಣ ಬೆಂದು ತಣ್ಣಗಾದ ಬಳಿಕ, ಮಿಕ್ಸಿ ಜಾರ್‌ಗೆ ಹಾಕಿ, ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ.

ನೀವು ಚಾಕೋಲೇಟ್ ಪ್ರಿಯರಾ..? ಹಾಗಾದ್ರೆ ಈ ಸ್ಟೋರಿ ಖಂಡಿತ ಓದಿ..

ಈಗ ಮತ್ತೆ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಒಂದು ಕ್ಯೂಬ್ ಬೆಣ್ಣೆ ಹಾಕಿ, ಮಂತ್ಯೆ ಎಲೆ ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ. ಜೊತೆಗೆ ಹಸಿ ಬಟಾಣಿ ಸೇರಿಸಿ ಹುರಿಯಿರಿ. ಈ ಮಿಶ್ರಣವನ್ನು ಒಂದು ಬೌಲ್‌ಗೆ ಹಾಕಿ. ಅದೇ ಪ್ಯಾನ್‌ಗೆ ಮತ್ತೊಂದು ಕ್ಯೂಬ್ ಬೆಣ್ಣೆ ಹಾಕಿ, ಮೊದಲೆ ತಯಾರಿಸಿಟ್ಟುಕೊಂಡಿರು ಈರುಳ್ಳಿ ಪೇಸ್ಟ್ ಹಾಕಿ, ಚೆನ್ನಾಗಿ ಹುರಿಯಿರಿ. ಅದರ ಹಸಿ ವಾಸನೆ ಹೋದ ಮೇಲೆ, ಗರಂ ಮಸಾಲೆ, ಧನಿಯಾಪುಡಿ, ಅರಿಶಿನ ಪುಡಿ, ಖಾರದ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ.

ನಂತರ ಗ್ರೇವಿಗೆ ಬೇಕಾದಷ್ಟು ನೀರು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅರ್ಧ ಕಪ್ ಕ್ರೀಮ್ ಹಾಕಿ,. ನಂತರ ಹುರಿದಿಟ್ಟುಕೊಂಡ ಮೆಂತ್ಯೆ ಮತ್ತು ಬಟಾಣಿಯನ್ನು ಇದಕ್ಕೆ ಸೇರಿಸಿ. ಈಗ 3 ನಿಮಿಷ ಮಂದ ಉರಿಯಲ್ಲಿ ಕುದಿಸಿ. ಇದನ್ನ ಪಕ್ಕಕ್ಕಿರಿಸಿ, ಒಗ್ಗರಣೆ ಸೌಟಿನಲ್ಲಿ ತುಪ್ಪ ಅಥವಾ ಎಣ್ಣೆ ಹಾಕಿ, ಅದಕ್ಕೆ ಗೋಡಂಬಿ ಹಾಕಿ, ಲೈಟ್ ಆಗಿ ಹುರಿಯಿರಿ. ಮಂತರ ಅರ್ಧ ಸ್ಪೂನ್ ಖಾರದ ಪುಡಿಯನ್ನ ಹಾಕಿ 5 ಸೆಂಕೆಂಡ್ ಬಳಿಕ ಈ ಒಗ್ಗರಣೆಯನ್ನ ಮೇಥಿ ಮಟರ್ ಮಲಾಯ್‌ಗೆ ಸೇರಿಸಿ. ಇದು ಚಪಾತಿ, ಪೂರಿಗೆ ಬೆಸ್ಟ್ ಕಾಂಬಿನೇಷನ್ ಆಗಿದೆ.

- Advertisement -

Latest Posts

Don't Miss