Wednesday, June 7, 2023

Latest Posts

ರಸ್ತೆಯಲ್ಲೇ ನಿಂತು ಟಿಫನ್ ಮಾಡಿದ ಡಿಕೆಶಿ..!

- Advertisement -

ಮುಂಬೈ: ಅತೃಪ್ತ ಶಾಸಕರನ್ನು ಭೇಟಿ ಮಾಡಿ ಹೇಗಾದ್ರೂ ಮನವೊಲಿಸ್ತೀನಿ ಅಂತ ಹುಮ್ಮಸ್ಸಿನಿಂದ ಬೆಂಗಳೂರಿನಿಂದ ಹೊರಟ ಸಚಿವ ಡಿ.ಕೆ ಶಿವಕುಮಾರ್ ಗೆ ಶಾಸಕರು ತಂಗಿರೋ ಹೋಟೆಲ್ ಗೆ ಎಂಟ್ರಿ ಸಿಗದ ಪರಿಣಾಮ ಇದೀಗ ಹೋಟೆಲ್ ಹೊರಗಡೆಯೇ ಕಾದು ಕುಳಿತಿದ್ದಾರೆ. ಅಲ್ಲದೆ ರಸ್ತೆಯಲ್ಲೇ ನಿಂತು ಬೆಳಗಿನ ಉಪಹಾರ ಕೂಡ ಸೇವಿಸಿದ್ರು.

ತನ್ನ ಗ್ಯಾಂಗ್ ಕಟ್ಟಿಕೊಂಡು ಅತೃಪ್ತರನ್ನು ಭೇಟಿಯಾಗಿ ಬರ್ತೀನಿ ಅಂತ ಹೇಳಿದ್ದ ಸಚಿವ ಡಿಕೆಶಿಗೆ ಇದೀಗ ರಸ್ತೆಯಲ್ಲಿ ಕಾಲಕಳೆಯುವ ಪರಿಸ್ಥಿತಿ ಬಂದಿದೆ. ಶಾಸಕರು ತಂಗಿರುವ ಹೋಟೆಲ್ ಒಳಹೋಗಲು ಅವಕಾಶ ಸಿಗದಿದ್ದರಿಂದ ಅಲ್ಲೇ ಕಾದು ಕುಳಿತಿರುವ ಡಿಕೆಶಿಗೆ ಬೆಳಗ್ಗೆ ಹಸಿವಾಗ್ತಿದ್ದಂತೆ ಏನಾದ್ರೂ ಕೊಡ್ರಪ್ಪ ಹಸಿವಾಗ್ತಿದೆ ಎಂದಿದ್ದಾರೆ. ಹೀಗಾಗಿ ಬೆಂಬಲಿಗರು ಕೂಡಲೇ ಹೋಟೆಲ್ ನಲ್ಲಿ ಪಾರ್ಸಲ್ ತೆಗೆದುಕೊಂಡು ಬಂದು ಕೊಟ್ಟಾಗ ಡಿಕೆಶಿ ರಸ್ತೆಯಲ್ಲೇ ನಿಂತು ಉಪಹಾರ ಸೇವಿಸಿದ್ರು.

ಇನ್ನು ತಮ್ಮನ್ನು ಭೇಟಿ ಮಾಡಲು ಡಿಕೆಶಿಗೆ ಯಾವುದೇ ಕಾರಣಕ್ಕೂ ಒಳ ಬರುವುದಕ್ಕೆ ಬಿಡಬೇಡಿ ಅಂತ ಅತೃಪ್ತ ಶಾಸಕರು ಪೊಲೀಸರಿಗೆ ದೂರು ನೀಡಿದ ಹೊರತಾಗಿಯೂ ಸಹ ಕಾಂಗ್ರೆಸ್ ನ ಟ್ರಬಲ್ ಶೂಟರ್ ಅಲ್ಲೇ ಕಾದು ಕುಳಿತಿರೋದು ಕುತೂಹಲ ಕೆರಳಿಸಿದೆ.

ದೋಸ್ತಿಗೆ ಮುಂದುವರಿದ ಶಾಕ್ ಟ್ರೀಟ್ಮೆಂಟ್..! ಮತ್ತೊಬ್ಬ ಶಾಸಕರು ರಾಜೀನಾಮೆ..! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=Byvfax5pgIk
- Advertisement -

Latest Posts

Don't Miss