Monday, December 11, 2023

Latest Posts

‘ನಾನು ಎಲೆಕ್ಷನ್ ಗೆ ಹೆದರಲ್ಲ- ಪಕ್ಷಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧ’- ಸಚಿವ ಡಿಕೆಶಿ

- Advertisement -

ಬೆಂಗಳೂರು: ಪಕ್ಷಕ್ಕೋಸ್ಕರ ನನ್ನ ಅಧಿಕಾರವನ್ನೂ ತ್ಯಾಗ ಮಾಡೋದಕ್ಕೆ ಸಿದ್ಧ, ಒಂದು ವೇಳೆ ರಾಜ್ಯದಲ್ಲಿ ಚುನಾವಣೆ ಎದುರಾದರೆ ನಾನು ಹೆದುರವಂತವನಲ್ಲ ಅಂತ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ಪಕ್ಷ ಹಾಗೂ ಸರ್ಕಾರದ ಉಳಿವಿಗಾಗಿ ನಾನು ನನ್ನ ಅಧಿಕಾರ ಕೂಡ ತ್ಯಾಗ ಮಾಡಲು ಸಿದ್ಧನಿದ್ದೇನೆ. ನಮ್ಮ ಶಾಸಕರು ಚುನಾವಣೆಗೆ ಹೋಗಲು ಇಷ್ಟವಿಲ್ಲ. ಆದ್ರೆ ಎಲೆಕ್ಷನ್ ಗೆ ನಾನೇನು ಹೆದರೋದಿಲ್ಲ ಅಂತ ಹೇಳಿದ್ರು. ಅಲ್ಲದೆ ಬಿಜೆಪಿ ಶಾಸಕರೇ ನನ್ನೊಂದಿಗೆ ಮಾತನಾಡಿ ಚುನಾವಣೆಯನ್ನು ಹೇಗಾದ್ರೂ ಮಾಡಿ ತಡೆಯಿರಿ ಅಂತ ಹೇಳ್ತಿದ್ದಾರೆ. ಆದ್ರೆ ಬಿಜೆಪಿ ರಾಷ್ಟ್ರೀಯ ನಾಯಕರು ಮಾತ್ರ ಹೊಸದಾಗಿ ಚುನಾವಣೆ ನಡೆಸಬೇಕು ಅಂತ ತಂತ್ರ ಹೆಣೆದಿದ್ದಾರೆ.  ಆದ್ರೆ ರಾಜ್ಯ ಬಿಜೆಪಿ ನಾಯಕರು ಬಿಜೆಪಿ ಸರ್ಕಾರ ರಚಿಸಿ ಎಲ್ಲರಿಗೂ ಮಂತ್ರಿಗಿರಿ ಆಫರ್ ಮಾಡಿದ್ದಾರೆ. ಎಲ್ಲರನ್ನೂ ಮಂತ್ರಿ ಮಾಡಲಿ ಅಂತ ಲೇವಡಿ ಮಾಡಿದ್ರು.

ದೋಸ್ತಿ ಸರ್ಕಾರ ಉಳಿಯುತ್ತಾ, ಉರುಳುತ್ತಾ..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=gVx1FJ84oC8
- Advertisement -

Latest Posts

Don't Miss