Wednesday, June 7, 2023

Latest Posts

ಸಹೋದರನ ಹಾದಿ ಹಿಡಿದ ಸಚಿವ ಎಚ್.ಡಿ.ರೇವಣ್ಣ…!

- Advertisement -

ಹಾಸನ: ಗ್ರಾಮ ವಾಸ್ತವ್ಯ ಕೈಗೊಂಡು ಸಿಎಂ ಕುಮಾರಸ್ವಾಮಿ ಜನರನ್ನು ತಲುಪಲು ಅನುಸರಿಸುತ್ತಿರುವ ಹಾದಿಯನ್ನೇ ಇದೀಗ ಸಹೋದರ ಎಚ್.ಡಿ ರೇವಣ್ಣ ಅನುಸರಿಸಲಿದ್ದಾರೆ.

ಹಾಸನದಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ, ನಾನೂ ಕೂಡ ಗ್ರಾಮ ವಾಸ್ತವ್ಯ ಮಾಡಲು ಯೋಚನೆ ಮಾಡಿರುವೆ. ಇದಕ್ಕೆ ಸಂಬಂಧಪಟ್ಟಹಾಗೆ ಅಧಿಕಾರಿಗಳ ಸಭೆ ಕರೆಯುತ್ತೇನೆ. ಹಳ್ಳಿಗಳ ಪಟ್ಟಿ ತೆಗೆದುಕೊಂಡು ಅದರ ವಸ್ತುಸ್ಥಿತಿ ಆಧರಿಸಿ ಗ್ರಾಮ ವಾಸ್ತವ್ಯ ಮಾಡ್ತೇನೆ ಅಂತ ರೇವಣ್ಣ ಹೇಳಿದ್ರು. ಇನ್ನು ಸಾಲ ಮನ್ನಾ ಯೋಜನೆ ಕುರಿತಾಗಿ ಪ್ರತಿಕ್ರಿಯಿಸಿದ ರೇವಣ್ಣ, ಹಾಸನದಲ್ಲಿ ಅತಿ ಹೆಚ್ಚು ರೈತರಿಗೆ ಸಾಲ ಮನ್ನಾ ಆಗಿದೆ. ಮುಂದಿನ ತಿಂಗಳ 10ನೇ ತಾರೀಖಿನೊಳಗೆ ರೈತರಿಗೆ ಉಳಿಕೆ ಹಣ ಪಾವತಿಯಾಗುತ್ತೆ ಅಂತ ಹೇಳಿದ್ರು.

ರಾಜ್ಯದ ರೈತರಿಗೆ ಸಿಎಂ ಕೊಟ್ರು ಬಂಪರ್ ಗಿಫ್ಟ್ ..!! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=fbChyevYCN0
- Advertisement -

Latest Posts

Don't Miss