Wednesday, November 13, 2024

Latest Posts

ಮಾಜಿ ಸಿಎಂ ಕಟ್ಟಡ ಕೆಡವಿಸಿದ ಹಾಲಿ ಸಿಎಂ..!

- Advertisement -

ಆಂಧ್ರಪ್ರದೇಶ: ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಸೇರಿದ ಕಟ್ಟಡವನ್ನು ಕೆಡವಲು ಸಿಎಂ ಜಗನ್ ಮೋಹನ್ ರೆಡ್ಡಿ ಆದೇಶಿಸಿದ ಹಿನ್ನೆಲೆಯಲ್ಲಿ 8 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಕಟ್ಟಡ ನೆಲಸಮವಾಗಿದೆ.

ಅಮರಾವತಿಯಲ್ಲಿ ತಾವು ಸಿಎಂ ಆಗಿದ್ದ ಅವಧಿಯಲ್ಲಿ ಚಂದ್ರಬಾಬು ನಾಯ್ಡು ನಿರ್ಮಿಸಿದ್ದ ‘ಪ್ರಜಾವೇದಿಕಾ’ ಎಂಬ ಕಟ್ಟಡವನ್ನು ನಿನ್ನೆ ರಾತ್ರಿ ನೆಲಸಮಮಾಡಲಾಯ್ತು. ಚಂದ್ರಬಾಬು ನಾಯ್ಡು ತಮ್ಮ ಆಡಳಿತಾವಧಿಯಲ್ಲಿ ಅಕ್ರಮವಾಗಿ ಈ ಕಟ್ಟಡವನ್ನು ನಿರ್ಮಿಸಿದ್ದಾರೆ ಅಂತ ಆರೋಪಿಸಿ ಸಿಎಂ ಜಗನ್ ಆಂಧ್ರಪ್ರದೇಶ ಹೈಕೋರ್ಟ್ ಮೊರೆ ಹೋಗಿದ್ರು. ಕೋರ್ಟ್ ನಲ್ಲಿ ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ ಕಟ್ಟಡವನ್ನು ಕೆಡವಲಾಗಿದೆ. ಕಟ್ಟಡವನ್ನು ಸಾರ್ವಜನಿಕರ ಭೇಟಿ ಮತ್ತು ಪಕ್ಷದ ಕಾರ್ಯಚಟುವಟಿಕೆಗೆ ಬಳಸಿಕೊಳ್ತೇವೆ. ಆದ್ದರಿಂದ ಕಟ್ಟವನ್ನು ಧ್ವಂಸಗೊಳಿಸಬೇಡಿ ಅಂತ ಈ ಹಿಂದೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸಿಎಂಗೆ ಪತ್ರ ಕೂಡ ಬರೆದಿದ್ರು. ಆದ್ರೆ ಇದಕ್ಕೆ ಮಣಿಯದ ಸಿಎಂ ಜಗನ್ ಮೋಹನ್ ರೆಡ್ಡಿ ಕಟ್ಟಡವನ್ನು ತೆರವುಗೊಳಿಸಿದ್ದಾರೆ.

ಅಭಿನಂದನ್ ಮೀಸೆಗೆ ವಿಶಿಷ್ಟ ಸ್ಥಾನ..?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=_7CZjHHu_UY
- Advertisement -

Latest Posts

Don't Miss