ಸಿಂಗಾಪುರ್: ಏರ್ ಪೋರ್ಟ್ ನಲ್ಲಿ ಡ್ರೋಣ್ ಗಳ ಹಾರಾಟದಿಂದಾಗಿ ಹತ್ತಾರು ವಿಮಾನಗಳ ಹಾರಾಟದಲ್ಲಿ ವ್ಯತ್ಯವಾಗಿ ಲಕ್ಷಾಂತರ ಮಂದಿ ಪ್ರಯಾಣಿಕರು ತೊಂದರೆಗೀಡಾದ ಘಟನೆ ಸಿಂಗಾಪೂರ್ ನಲ್ಲಿ ನಡೆದಿದೆ.
ಇಲ್ಲಿನ ಜಗತ್ರಸಿದ್ಧ ಚಾಂಗಿ ಏರ್ಪೋರ್ಟ್ ನಲ್ಲಿ ಈ ಘಟನೆ ನಡೆದಿದ್ದು, ಅನಧಿಕೃತ ಡ್ರೋಣ್ ಗಳ ಹಾರಾಟ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಸುಮಾರು 25 ಫ್ಲೈಟ್ ಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಏರ್ಪೋರ್ಟ್ ಅಧಿಕಾರಿ ನೀಡಿದ ಮಾಹಿತಿಯ ಪ್ರಕಾರ ಏರ್ಪೋರ್ಟ್ ನಿಂದ ನಿಗರ್ಮನವಾಗಬೇಕಿದ್ದ 15 ವಿಮಾನಗಳು, ಏರ್ಪೋರ್ಟ್ ಗೆ ಬರಬೇಕಿದ್ದ 3 ವಿಮಾನಗಳು ಹಾಗೂ 7 ಫ್ಲೈಟ್ ಗಳು ಮಾರ್ಗಬದಲಾಯಿಸಿ ಚಲಿಸಿವೆ, ಅನಧಿಕೃತ ಡ್ರೋಣ್ ಗಳ ಹಾರಾಟ ಹಾಗೂ ಹವಾಮಾನ ವೈಪರೀತ್ಯವೇ ಕಾರಣವಾಗಿದೆ.
ಇನ್ನು ಈ ಡ್ರೋಣ್ ಗಳನ್ನು ಏರ್ಪೋರ್ಟ್ ನಂಥಹ ನಿಷೇಧಿತ ಪ್ರದೇಶದಲ್ಲಿ ಹಾರಿಬಿಡುತ್ತಿರುವವರಿಗಾಗಿ ಶೋಧ ನಡೆಯುತ್ತಿದ್ದು, ಒಂದು ವೇಳೆ ತಪ್ಪಿತಸ್ಥರು ಸಿಕ್ಕಿಬಿದ್ದಲ್ಲಿ 20,000 ಸಿಂಗಾಪುರ್ ಡಾಲರ್ಸ್ ( ಭಾರತ ಕರೆನ್ಸಿ ಪ್ರಕಾರ 10,24.800 ರೂಪಾಯಿ) ದಂಡ ಅಥವಾ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಿದೆ.
ಇನ್ನು ಕಳೆದ ಡಿಸೆಂಬರ್ ನಲ್ಲಿ ಡೋಣ್ ಗಳ ಕಾಟಕ್ಕೆ ಸುಮಾರು 1,40,000 ಮಂದಿಯ ಪ್ರಯಾಣ ವ್ಯತ್ಯಯವಾಗಿ ತೊಂದರೆಗೀಡಾಗಿದ್ದರು.
ವಾಕ್ಸಾಪ್ ನಲ್ಲಿ ಇನ್ನುಮುಂದೆ ಹೊಸ ಆಪ್ಶನ್..! ಮಿಸ್ ಮಾಡದೇ ಈ ವಿಡಿಯೋ ನೋಡಿ