Technology:ಕಳೆದ ದಶಕದಿಂದಲೂ ಜನರ ಮೊದಲ ಸ್ನೇಹಿತ, ಬಂಧು, ಸಂಬಂದಿ ಯಾರೆಂದು ಕೇಳಿದರೆ ಮೊದಲು ಹೇಳೋದು ನನ್ನ ಮೊದಲ ಸ್ನೇಹಿತ ಮೊಬೈಲ್ ಎಂದು . ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಜನ ಮೊಬೈಲ್ ಇಲ್ಲದೆ ಯಾವ ಸ್ಥಳಕ್ಕೂ ಹೋಗೋಕೆ ಇಷ್ಟಪಡಲ್ಲ ಮೊಬೈಲ್ ಇಲ್ಲವೆಂದರೆ ಹೋಗುವುದನ್ನೇ ಬಿಡುತ್ತಾರೆ ಹೊರತು ಮೊಬೈಲ್ ಬಿಟ್ಟು ಇರುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಇದ್ದಾರೆ.
ಹಾಗಾಗಿಯೆ ಹೊಸ ಹೊಸ ಕಂಪನಿಗಳು ಹುಟ್ಟಿಕೊಳ್ಳುತ್ತಿವೆ ಜನರಿಗೆ ಭವಿಷ್ಯದ ಅಂಶಗಳನ್ನು ಇಟ್ಟುಕೊಂಡು ಮೊಬೈಲ್ ತಯಾರು ಮಾಡುತ್ತಾರೆ. ಜನರಿಗೆ ಇಷ್ಟರ ಮಟ್ಟಿಗೆ ಮೊಬೈಲ್ ಮೇಲೆ ಅವಲಂಬಿತರಾಗಲು ಕಾರಣ ಅದರ ಕೆಲಸ. ಹಾಗಾದರೆ ಯಾವ ಕಂಪನಿಗಳು ಹೆಚ್ಚು ಬೇಡಿಕೆಗಳನ್ನು ಪಡೆದುಕೊಂಡಿವೆ.
ಯಾವ ಕಂಪನಿಗಳು ಮೊದಲ ಸ್ಥಾನದಲ್ಲಿವೆ ಎಂಬುದನ್ನು ನೋಡೋಣ ಬನ್ನಿ.
ಸ್ಯಾಮ್ ಸಂಗ್ ಕಂಪನಿ ಜಾಗತಿಕ ಮಟ್ಟದಲ್ಲಿ ಮೊದಲ ಸ್ಥಾನದಲ್ಲಿದೆ ಇದು ಹಳೆಯ ಕಂಪನಿ ಆಗಿದ್ದು. ಮೊದಲಿನಿಂದಲೂ ಜನರ ವಿಶ್ವಾಸವನ್ನು ಉಳಿಸಿಕೊಂಡು ಬಂದಿದೆ.ಇನ್ನು ಈ ಕಂಪನಿ ಯಾವುದೇ ಇಲೆಕ್ಟ್ರಾನಿಕ್ ವಸ್ತುವನ್ನು ಕೊಂಡರು ಬಹಳ ದಿನ ಬಾಳಿಕೆಗೆ ಬರುತ್ತದೆ.ಹಾಗಾಗಿ ಇದು ಮೊದಲ ಸ್ಥಾನದಲ್ಲಿದೆ.
ಇನ್ನು ಎರಡನೇ ಸ್ಥಾನದಲ್ಲಿ ಆಪಲ್ ಕಂಪನಿಯ ಮೊಬೈಲ್ ಗಳು ಬೇಡಿಕೆಯಲ್ಲಿವೆ. ಈ ಮೊಬೈಲ್ ಗಳನ್ನುಕೊಳ್ಳಬೇಕೆಂದರೆ ಕುಬೇರರೇ ಆಗಿರಬೇಕು ಇದು ಬಡವರ ಬಂದು ಅಲ್ಲವೇ ಅಲ್ಲ ಇದಕ್ಕೆ ಬಹಳಷ್ಟು ರಕ್ಷಣಾ ಸೌಲಭ್ಯಗಳಿವೆ ಹಾಗಾಗಿ ಇದರ ಮಾರಾಟವೂ ಸಹ ಹೇರಳವಾಗಿದೆ.
ಶಿವೊಮಿ ಮೂರನೇ ಸ್ಥಾನದಲ್ಲಿ ಸ್ಥಾನದಲ್ಲಿದೆ. ಈ ಕಂಪನಿಯ ಮೊಬೈಲ್ ಗಳನ್ನು ಭಾರತ ಮತ್ತು ಚೀನಾದಲ್ಲಿ ಮಾತ್ರ ಮಾರಾಟ ಮಾಡುತಿದ್ದರು ಆದರೆ ಇತ್ತಿಚಿಗೆ ಇದರ ಮಾರಾಟ ಪ್ರಪಂಚದಾದ್ಯಂತ ಆಗುತ್ತಿದೆ.
ವಿವೋ ಕಂಪನಿ ಇದರ ಬಗ್ಗೆ ಎಲ್ಲಾರಿಗೂ ಗೊತ್ತಿರುತ್ತದೆ ಇದು ಮಾರುಕಟ್ಟೆಗೆ ಬಂದ ಕೆಲವೇ ವರ್ಷಗಳಲ್ಲಿ ಪ್ರತಿಯೊಬ್ಬರಿಗೂ ಇಷ್ಟವಾದ ಮೊಬೈಲ್ ಆಗಿದೆ ಕಡಿಮೆ ಬೆಲೆಯಲ್ಲಿ ಎಲ್ಲಾ ಬಗೆಯ ವೈಶಿಷ್ಟ್ಯಗಳನ್ನು ಕಲ್ಪಿಸುವ ಮೊಬೈಲ್ ಗಳ ಸಾಲಿನಲ್ಲಿ ವಿವೋ ಕಂಪನಿ ಮೊದಲ ಸ್ಥಾನದಲ್ಲಿದೆ ಎಂದರೆ ತಪ್ಪಾಗಲಾರದು.
ಹಾಗಿದ್ದರೆ ನಿಮಗೆ ಯಾವ ಕಂಪನಿಯ ಮೊಬೈಲ್ ಇಷ್ಟ?
Channarayapatna: ಸರ್ಕಾರಿ ಪಡಿತರ ಗೋದಾಮಿನಿಂದಲೆ ಅಕ್ರಮ ಪಡಿತರ ಸಾಗಣೆ: ಪೊಲೀಸರ ಧಾಳಿ