Monsoon Special: ಮೊಳಕೆ ಕಾಳಿನ ಸಾಂಬಾರ್

ಬೇಕಾಗುವ ಸಾಮಗ್ರಿ: ಮೊಳಕೆ ಕಾಳುಗಳು, ಎರಡು ಈರುಳ್ಳಿ, 1 ಟೊಮೆಟೋ, ಕೊಂಚ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಜೀರಿಗೆ, ಸಾಾಸಿವೆ, ಕರಿಬೇವು, ಕಾಯಿತುರಿ, ಖಾರದ ಪುಡಿ, ಗರಂ ಮಸಾಲೆ ಪುಡಿ, ಧನಿಯಾ ಪುಡಿ, ಉಪ್ಪ, ಬೇಕಾದಷ್ಟು ಎಣ್ಣೆ, ಕೊತ್ತೊಂಬರಿ ಸೊಪ್ಪು.

ಮಾಡುವ ವಿಧಾನ:ಮೊದಲು ಕುಕ್ಕರ್‌ನಲ್ಲಿ ಮೊಳಕೆ ಕಾಳು ಉಪ್ಪು ಮತ್ತು ಅರಿಶಿನ ಹಾಾಕಿ, ಬೇಯಿಸಿ. ಬಳಿಕ ಒಂದು ಪ್ಯಾನ್‌ಗೆ ಎಣ್ಣೆ, ಈರುಳ್ಳಿ ಹಾಕಿ ಹುರಿಯಿರಿ. ಬೆಳ್ಳುಳ್ಳಿ, ಶುಂಠಿ ಸೇರಿಸಿ, ಹುರಿಯಿರಿ.

ಟೊಮೆಟೊ ಕೂಡ ಇದರೊಟ್ಟಿಗೆ ಹುರಿದು, ಮಿಕ್ಸಿ ಜಾರ್‌ಗೆ ಹಾಕಿ, ರುಬ್ಬಿಕೊಳ್ಳಿ. ಇದರೊಂದಿಗೆ ಕೊಬ್ಬರಿ ತುರಿ ಕೂಡ ಸೇರಿಸಿಕೊಳ್ಳಬಹುದು. ಬಳಿಕ ಅದೇ ಪ್ಯಾನ್‌ಗೆ ಮತ್ತಷ್ಟು ಎಣ್ಣೆ ಜೀರಿಗೆ, ಸಾಸಿವೆ, ಜೊತೆ ರುಬ್ಬಿಟ್ಟುಕೊಂಡ ಮಸಾಲೆ ಸೇರಿಸಿ, ಹುರಿಯಿರಿ. ಮಸಾಲೆಯ ಹಸಿ ವಾಸನೆ ಹೋದ ಬಳಿಕ, ಬೇಯಿಸಿದ ಕಾಳುಗಳು, ಹಸಿಮೆಣಸು, ಉಪ್ಪು, ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ ಪುಡಿ ಹಾಕಿ ಮಿಕ್ಸ್ ಮಾಡಿ.

ಬಳಿಕ ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು ಸೇರಿಸಿದರೆ, ಮೊಳಕೆ ಕಾಳಿನ ಸಾಂಬಾರ್ ರೆಡಿ. ಈಗ ಅನ್ನಕ್ಕೆ ಈ ಸಾಂಬಾರ್ ಮತ್ತು ತುಪ್ಪ ಸೇರಿಸಿ, ಸವಿಯಿರಿ.

Summer Special: ಹವ್ಯಕ ಶೈಲಿ ಮಾವಿನಕಾಯಿ ಅಪ್ಪೆ ಹುಳಿ ರೆಸಿಪಿ

Summer Special: ಪುದೀನಾ ಮಸಾಲೆ ಮಜ್ಜಿಗೆ ರೆಸಿಪಿ

Summer Special: ಬೇಸಿಗೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಥಾಯ್ ಪಪಾಯಾ ಸ್ಯಾಲೆಡ್

About The Author