Recipe: ನೀವು ರವಾ ಇಡ್ಲಿ, ಅಕ್ಕಿ ಇಡ್ಲಿ, ರಾಗಿ ಇಡ್ಲಿ, ಹೀಗೆ ಎಲ್ಲ ರೀತಿಯ ಇಡ್ಲಿಯನ್ನು ತಿಂದಿರುತ್ತೀರಿ. ಆದರೆ ಎಂದಾದರೂ ಹೆಸರು ಬೇಳೆ ಇಡ್ಲಿ ತಿಂದಿದ್ದೀರಾ..? ಇಲ್ಲವಾದಲ್ಲಿ ಇಂದು ನಾವು ಹೆಸರು ಬೇಳೆ ಇಡ್ಲಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
1 ಕಪ್ ಹೆಸರುಬೇಳೆ, ಸಣ್ಣ ತುಂಡು ಶುಂಠಿ, 1 ಹಸಿಮೆಣಸಿನಕಾಯಿ, ಇವಿಷ್ಟನ್ನು ಮಿಕ್ಸಿಗೆ ಹಾಕಿ ರುಬ್ಬಿ ಹಿಟ್ಟು ತಯಾರಿಸಿಕೊಳ್ಳಿ. ಈಗ ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ. ಅದಕ್ಕೆ ಒಂದು ಸ್ಪೂನ್ ಎಣ್ಣೆ, ಜೀರಿಗೆ, ಸಾಸಿವೆ, ಉದ್ದಿನಬೇಳೆ, ಕರಿಬೇವು, ಚಿಟಿಕೆ ಹಿಂಗು, ಹಾಕಿ ಒಗ್ಗರಣೆ ತಯಾರಿಸಿ, ಈಗಾಗಲೇ ತಯಾರಿಸಿದ ಇಡ್ಲಿ ಹಿಟ್ಟಿಗೆ ಸೇರಿಸಿ. ಕೊನೆಗೆ ಉಪ್ಪು ಸೇರಿಸಿದ್ರೆ ಇಡ್ಲಿ ಹಿಟ್ಟು ರೆಡಿ.
ಈಗ ಇಡ್ಲಿ ಕುಕ್ಕರ್‌ನಲ್ಲಿ ನೀರು ಹಾಕಿ, 15 ನಿಮಿಷ ಮುಚ್ಚಳ ಮುಚ್ಚಿ, ಹಬೆ ತಯಾರಿಸಿಕೊಳ್ಳಿ. ಬಳಿಕ ಇಡ್ಲಿ ತಟ್ಟೆಗೆ ಎಣ್ಣೆ ಸವರಿ, ಹಿಟ್ಟು ಹಾಕಿ, ಇಡ್ಲಿ ತಯಾರಿಸಿ. ಚಟ್ನಿ ಮತ್ತು ತೆಂಗಿನ ಎಣ್ಣಯೊಂದಿಗೆ ಹೆಸರು ಬೇಳೆ ಇಡ್ಲಿಯನ್ನು ಸವಿಯಿರಿ.

