ಮನೆಯಲ್ಲೇ ಟೇಸ್ಟಿಯಾಗಿರುವ ಸಿಹಿ ತಿಂಡಿ ತಿನ್ನಬೇಕು ಅನ್ನಿಸಿದ್ರೆ, ಕೆಲವೇ ಕಲವು ನಿಮಿಷಗಳಲ್ಲಿ ಮಾಡಬಹುದಾದ ಸ್ವೀಟ್ ಅಂದ್ರೆ ಪಾಯಸ. ಇಂದು ನಾವು ಹೆಸರು ಬೇಳೆ ಪಾಯಸವನ್ನ ಹೇಗೆ ತಯಾರಿಸೋದು ಅಂತಾ ತಿಳಿಸಲಿದ್ದೇವೆ..
ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಆಗುವ ಆರೋಗ್ಯ ಲಾಭ ಕೇಳಿದ್ರೆ ನೀವೂ ಇದನ್ನ ತಿಂತೀರಾ..
ಒಂದು ಕಪ್ ಹೆಸರುಬೇಳೆ, ಒಂದು ಕಪ್ ಹಾಲು, ಸಿಹಿ ಬೇಕಾದಷ್ಟು ಬೆಲ್ಲ, ಒಂದು ಕಪ್ ತೆಂಗಿನ ತುರಿ, 2 ಚಮಚ ಗಸಗಸೆ, ಕೊಂಚ ಏಲಕ್ಕಿ, ಅಗತ್ಯಕ್ಕೆ ತಕ್ಕಷ್ಟು ಗೋಡಂಬಿ, ಬಾದಾಮಿ, ತುಪ್ಪ.
ಮಂದ ಉರಿಯಲ್ಲಿ ಹೆಸರುಬೇಳೆಯನ್ನ ಚೆನ್ನಾಗಿ ಹುರಿಯಿರಿ, ಘಮ ಬರುವವರೆಗೂ ಹುರಿದು, ಕುಕ್ಕರ್‌ನಲ್ಲಿ ಅಥವಾ ಪಾತ್ರೆಯಲ್ಲಿ ಹೆಸರುಬೇಳೆಯನ್ನ ಬೇಯಿಸಿ. ನಂತರ ತೆಂಗಿನತುರಿ, ಗಸಗಸೆಯನ್ನು ಮಿಕ್ಸರ್‌ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ., ಈ ಮಿಶ್ರಣವನ್ನು ದಪ್ಪ ತಳದ ಪಾತ್ರೆಗೆ ಹಾಕಿ, ಇದಕ್ಕೆ ಬೇಯಿಸಿದ ಹೆಸರುಬೇಳೆ ಹಾಕಿ, ಮತ್ತೂ ಕೊಂಚ ಬೇಯಿಸಿ.
ಈ ಹಣ್ಣುಗಳನ್ನು ರಾತ್ರಿ ಹೊತ್ತು ಸೇವಿಸಲೇಬೇಡಿ.. ಇಲ್ಲದಿದ್ದಲ್ಲಿ ಅನಾರೋಗ್ಯ ಬರುವುದು ಖಂಡಿತ..
ಹೆಸರುಬೇಳೆ ಸರಿಯಾಗಿ ಬೆಂದ ನಂತರವೇ ಬೆಲ್ಲವನ್ನು ಹಾಕಬೇಕು. ಬೆಲ್ಲವನ್ನು ಹಾಕಿ, ಚೆನ್ನಾಗಿ ಕೈಯಾಡಿಸಿ. ಬೆಲ್ಲ, ಹೆಸರು ಬೇಳೆ, ಕಾಯಿ ಹಾಲು ಎಲ್ಲವೂ ಚೆನ್ನಾಗಿ ಬೇಯಬೇಕು. ಈಗ ಇದಕ್ಕೆ ಏಲಕ್ಕಿ ಪುಡಿ ಸೇರಿಸಿದರೆ ಪಾಯಸ ರೆಡಿ. ಪಾಯಸಕ್ಕೆ ತುಪ್ಪದಲ್ಲಿ ಹುರಿದ ಬಾದಾಮಿ, ಗೋಡಂಬಿ, ದ್ರಾಕ್ಷಿ ಹಾಕಿ.